ಘಟಪ್ರಭಾ:ವಿವೇಕ ಯೋಜನೆಯಡಿಯಲ್ಲಿ 35 ಶಾಲಾ ಕೊಠಡಿ ನಿರ್ಮಾಣಕ್ಕೆ ಕಾರ್ಮಿಕ ಮುಖಂಡ ಅಂಬಿರಾವ ಚಾಲನೆ
ವಿವೇಕ ಯೋಜನೆಯಡಿಯಲ್ಲಿ 35 ಶಾಲಾ ಕೊಠಡಿ ನಿರ್ಮಾಣಕ್ಕೆ ಕಾರ್ಮಿಕ ಮುಖಂಡ ಅಂಬಿರಾವ ಚಾಲನೆ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ನ 14 :
ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಮಾನ್ವಯಾಧಿಕಾರಿಗಳ ಕಾರ್ಯಾಲಯ ಗೋಕಾಕ ಜಿಲ್ಲಾ ಪಂಚಾಯತ ಬೆಳಗಾವಿ, ಸಾರ್ವಜನಿಕ ಶಿಕ್ಷಣಾ ಇಲಾಖೆ ಚಿಕ್ಕೋಡಿ ಇವರ ಸಂಯುಕ್ತಾಶ್ರಯದಲ್ಲಿ ಗೋಕಾಕ ತಾಲೂಕಿಗೆ ವಿವೇಕ ಯೋಜನೆಯಡಿಯಲ್ಲಿ ಸರಕಾರದಿಂದ ಬಿಡುಗಡೆಯಾದ 4.86 ಕೋಟಿ ವೆಚ್ಚದಲ್ಲಿ 26 ಶಾಲೆಗಳಲ್ಲಿ 35 ಶಾಲಾ ಕೊಠಡಿ ನಿರ್ಮಾಣಕ್ಕೆ ಇಂದು ಧುಪದಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಮಿಕ ಮುಖಂಡ ಅಂಭಿರಾವ ಪಾಟೀಲ ಚಾಲನೆ ನೀಡಿದರು.
ಗೋಕಾಕ ಶಿಕ್ಷಣಾಧಿಕಾರಿ ಜಿ.ಬಿ. ಬಳಿಗಾರ ಪ್ರಾಸ್ತಾವಿಕವಾಗಿ ಮಾತನಾಡಿದ ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದರು. ಗೋಕಾಕ ಶಾಸಕರಾದ ರಮೇಶ ಜಾರಕಿಹೊಳಿಯವರ ಪ್ರಯತ್ನದಿಂದ ರಾಜ್ಯ ಸರಕಾರವು ಸಹ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದು ಸರಕಾರ ಶಿಕ್ಷಣಕ್ಕೆ ನೀಡುವ ಸೌಲಭ್ಯವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿದರೆ ತಮ್ಮ ಮುಂದಿನ ಬದುಕು ಸಹ ಉತ್ತಮವಾಗುತ್ತದೆ ಹಾಗೂ ಗೋಕಾಕ ತಾಲೂಕಿಗೆ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಹೈಟೆಕ್ ಶೌಚಾಲಯಕ್ಕೆ 1.16 ಕೋಟಿ ಬಿಡುಗಡೆಯಾಗಿದೆ. ಡಿಎಮ್‍ಎಫ್ ಯೋಜನೆಯಿಂದ 1.64 ಕೋಟಿ ಬಿಡುಗಡೆಯಾಗಿದೆ. ಅಮೃತ ಶಾಲಾ ಸೌಲಭ್ಯ ಯೋಜನೆಯಡಿಯಲ್ಲಿ 30ಲಕ್ಷ ಹಣ ಬಿಡುಗಡೆಯಾಗಿದ್ದು ಕೂಡಲೆ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ ಅವರನ್ನು ಶಾಲಾ ಸಮೀತಿ ವತಿಯಿಂದ ಆತ್ಮಿಯವಾಗಿ ಸತ್ಕರಿಸಲಾಯಿತು. ಶಾಲೆಯಲ್ಲಿ ಜವಾಹರಲಾಲ ನೆಹರುವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರ ಜನ್ಮ ದಿನದ ಅಂಗವಾಗಿ ಮಕ್ಕಳೊಂದಿಗೆ ಕೇಕ್ ಕಟ್ಟು ಮಾಡಿ ವಿದ್ಯಾರ್ಥಿಗಳಿಗೆ ತಿನ್ನಿಸಿದರು.
ವೇದಿಕೆಯ ಮೇಲೆ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಎಮ್.ಬಿ.ಪಾಟೀಲ, ಸಿ.ಆರ್.ಪಿ ರಮೇಶ ಕೊಲಕಾರ, ಪಟ್ಟಣದ ಹಿರಿಯರಾದ ಡಿ.ಎಮ್ ದಳವಾಯಿ, ಹಣಮಂತ ಗಾಡವಡ್ಡರ, ಮಹೇಶ ಪಾಟೀಲ, ಲಗಮನ್ನಾ ನಾಗನ್ನವರ, ಅಶೋಕ ಪರಪ್ಪನವರ, ಮದಾರಸಾಬ ಜಗದಾಳ, ಶಿವನಗೌಡಾ ಪಾಟೀಲ, ರಾಜಶೇಖರ ರಜಪೂತ, ಪ್ರದೀಪ ಕುಲಕರ್ಣಿ, ಕಲ್ಲಪ್ಪ ಸನದಿ, ಸುಧೀರ ಜೋಡಟ್ಟಿ ಸೇರಿದಂತೆ ಅನೇಕರು ಇದ್ದರು.