ಗೋಕಾಕ:ಭಾರತ ದೇಶ ಜಗತ್ತಿನಲ್ಲೆ ಆಧ್ಯಾತ್ಮಿಕವಾಗಿ ಮಹತ್ವ ಪಡೆದಿದೆ : ಲಖನ್ ಜಾರಕಿಹೊಳಿ
ಭಾರತ ದೇಶ ಜಗತ್ತಿನಲ್ಲೆ ಆಧ್ಯಾತ್ಮಿಕವಾಗಿ ಮಹತ್ವ ಪಡೆದಿದೆ : ಲಖನ್ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 26 :
ಸುಸಂಸ್ಕೃತ ಹಾಗೂ ಸುಂದರ ದೇಶ ನಮ್ಮದಾಗಿದ್ದು, ಜಗತ್ತಿನಲ್ಲೆ ಆಧ್ಯಾತ್ಮಿಕವಾಗಿ ಮಹತ್ವ ಪಡೆದಿದೆ ಎಂದು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಹೇಳಿದರು.
ಶುಕ್ರವಾರದಂದು ನಗರದ ಶ್ರೀ ಲಕ್ಷ್ಮೀದೇವಿ ಪಾದಗಟ್ಟಿಯ ಕಾರ್ತಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ ಲಕ್ಷ್ಮೀದೇವಿಯ ಆರ್ಶಿವಾದದಿಂದ ಗೋಕಾಕ ತಾಲೂಕು ಶಾಂತಿ ನೆಮ್ಮದಿಯಿಂದ ಇದೆ. ದೇವರ ಅನುಗ್ರಹ ಹಾಗೂ ನಿಮ್ಮೆಲ್ಲರ ಆರ್ಶಿವಾದದಿಂದ ವಿಧಾನ ಪರಿಷತ್ ಸದಸ್ಯನಾಗಿದ್ದೇನೆ ನಾವೆಲ್ಲರೂ ಹೆಚ್ಚು ಹೆಚ್ಚು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡು ದೇವರ ಅನುಗ್ರಹಕ್ಕೆ ಪಾತ್ರರಾಗೋಣ ಶಾಸಕ ರಮೇಶ ಜಾರಕಿಹೊಳಿ ಅವರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳ ಅನುಷ್ಠಾನದೊಂದಿಗೆ ಶ್ರಮಿಸುತ್ತಿದ್ಧಾರೆ ಅವರಿಗೆ ನಿಮ್ಮೆಲ್ಲರ ಸಹಕಾರ ಇರಲಿ ಜಾರಕಿಹೊಳಿ ಕುಟುಂಬದ ಮೇಲೆ ನಿಮ್ಮ ಆರ್ಶಿವಾದ ಸದಾ ಇರಲೆಂದು ಕೋರಿದರು.
ವೇದಿಕೆಯಲ್ಲಿ ಶ್ರೀ ಲಕ್ಷ್ಮೀದೇವಿ ಪಾದಗಟ್ಟಿ ಸೇವಾ ಸಮಿತಿ ಅಧ್ಯಕ್ಷ ದೊಡ್ಡಪ್ಪ ರಾಹುತ್, ನಗರಸಭೆ ಅಧ್ಯಕ್ಷ ಜಯಾನಂದ ಹುಣ್ಣಚ್ಯಾಳಿ, ಡಾ.ಸಿದ್ದಣ ಕಮತ, ಟಿ.ಆರ್.ಕಾಗಲ್,ಮಡೆಪ್ಪ ತೋಳಿನವರ, ವಿರೂಪಾಕ್ಷಿ ಮಿರ್ಜಿ,ಮಹಾದೇವ ಕೌಜಲಗಿ, ಸುರಜ್ ಪಾಟೀಲ ಇದ್ದರು.
ಕಾರ್ಯಕ್ರಮದ ನಂತರ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.