ಗೋಕಾಕ:ಯುವ ಶಕ್ತಿಗೆ ಪ್ರೇರಣೆಯಾದ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಆಚರಣೆಗೆ ತನ್ನಿ : ಪ್ರಾಚಾರ್ಯ ಎಚ್.ಎಸ್.ಅಡಿಬಟ್ಟಿ
ಯುವ ಶಕ್ತಿಗೆ ಪ್ರೇರಣೆಯಾದ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಆಚರಣೆಗೆ ತನ್ನಿ : ಪ್ರಾಚಾರ್ಯ ಎಚ್.ಎಸ್.ಅಡಿಬಟ್ಟಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 27 :
ಯುವ ಶಕ್ತಿಗೆ ಪ್ರೇರಣೆಯಾದ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಆಚರಣೆಗೆ ತರುವಂತೆ ಎಸ್.ಎಲ್.ಜೆ ಪಾಲಿಟೆಕ್ನಿಕ್ ಪ್ರಾಚಾರ್ಯ ಎಚ್ ಎಸ್.ಅಡಿಬಟ್ಟಿ ಹೇಳಿದರು.
ರವಿವಾರಂದು ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿ ಮಹಾವಿದ್ಯಾಲಯದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಹಾಗೂ ರಾಷ್ಟ್ರೀಯ ಸ್ವಯಂಸೇವಾ ಯೋಜನಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರ ಮಾತನಾಡಿದರು.
ಯುವ ಶಕ್ತಿಯಿಂದ ಬಲಿಷ್ಠ ಭಾರತ ನಿರ್ಮಾಣ ಸಾಧ್ಯ ಎಂದು ನಂಬಿದ್ದ ವಿವೇಕಾನಂದರ ವಿಚಾರಧಾರೆಯನ್ನು ಯುವ ಪೀಳಿಗೆ ಕಾರ್ಯಗತಗೊಳಿಸಲು ಶ್ರಮಿಸಬೇಕು ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಒಳ್ಳೆಯ ಸಂಸ್ಕಾರಗಳನ್ನು ಅಳವಡಿಸಿಕೊಳ್ಳಬೇಕು. ತಮ್ಮನ್ನು ತಾವು ಗುರುತಿಸಿಕೊಂಡು ಆತ್ಮವಿಶ್ವಾಸದಿಂದ ತಮ್ಮಲ್ಲಿರುವ ಆಘಾದ ಶಕ್ತಿಯನ್ನು ಸದುಪಯೋಗ ಪಡೆಸಿಕೊಳ್ಳಿ ಸಮಯಕ್ಕೆ ಹೆಚ್ಚಿನ ಮಹತ್ವ ನೀಡಿ ತಮ್ಮಲ್ಲಿ ಕೌಶಲಗಳನ್ನು ವೃದ್ದಿಸಿಕೊಂಡು ಪ್ರತಿಭಾವಂತರಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮವನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಉದ್ಘಾಟಿಸಿದರು. ಪ್ರಾಚಾರ್ಯ ಐ.ಎಸ್.ಪವಾರ ಉಪನ್ಯಾಸಕರಾದ ಎಂ.ಯು ಕಂಬಾರ, ಎಸ್.ಎಚ್. ತಿಪ್ಪನ್ನವರ, ವಿದ್ಯಾರ್ಥಿ ಪ್ರತಿನಿಧಿಗಳಾದ ಸುಮ್ಮಯಾ ತಲ್ಲೂರ, ಗಾಯತ್ರಿ ಕಳಸಣ್ಣವರ ಇದ್ದರು.
ಉಪನ್ಯಾಸಕಿಯರಾದ ದೀಪಾ ಕೋಟಗಿ ಸ್ವಾಗತಿಸಿದರು, ಅಶ್ವಿನಿ ಕಡೆಲಿ ವಂದಿಸಿದರು, ವಿದ್ಯಾರ್ಥಿನಿ ಪವಿತ್ರ ಕಡೆಲಿ ನಿರೂಪಿಸಿದರು.