ಗೋಕಾಕ:ಜಾರಕಿಹೊಳಿ ಕುಟುಂಬದ ಮೂರನೇ ತಲೆಮಾರಿನ ಕುಡಿ ಸನತ ಜಾರಕಿಹೊಳಿ ಈಗ ನ್ಯಾಯವಾದಿ.
ಜಾರಕಿಹೊಳಿ ಕುಟುಂಬದ ಮೂರನೇ ತಲೆಮಾರಿನ ಕುಡಿ ಸನತ ಜಾರಕಿಹೊಳಿ ಈಗ ನ್ಯಾಯವಾದಿ.
ಗೋಕಾಕ ಡಿ 8 : ರಾಜ್ಯದಲ್ಲಿ ತನ್ನದೇ ಆದ ಬ್ರ್ಯಾಂಡ್ ಸೃಷ್ಟಿಸಿರುವ ಜಾರಕಿಹೊಳಿ ಕುಟುಂಬ ರಾಜ್ಯ ರಾಜಕೀಯದಲ್ಲಿ ಚರ್ಚೆಯಲ್ಲಿರುವ ಕುಟುಂಬ. ಈ ಕುಟುಂಬದ ರಮೇಶ ಜಾರಕಿಹೊಳಿ , ಸತೀಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಹಾಗೂ ಲಖನ್ ಜಾರಕಿಹೊಳಿ ಶಾಸನ ಸಭೆಯ ಸದಸ್ಯರಾಗಿ ಒಂದೇ ಕುಟುಂಬದ ನಾಲ್ಕು ಜನ ಶಾಸಕರಾಗಿ ರಾಜ್ಯ ಮತ್ತು ರಾಷ್ಟ್ರದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ.
ಈ ಕುಟುಂಬದ ಮೂರನೇ ತಲೆಮಾರಿನ ಕುಡಿಗಳು ಸಹ ಜಾರಕಿಹೊಳಿ ಸಹೋದರರ ಮಾರ್ಗದರ್ಶನದಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬಡವರ , ದೀನದಲಿತರ ಏಳ್ಗೆಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ. ಜಾರಕಿಹೊಳಿ ಕುಟುಂಬದ ಮೂರನೇ ತಲೆಮಾರಿನಲ್ಲಿ ಸಂತೋಷ ಜಾರಕಿಹೊಳಿ , ಅಮರನಾಥ ಜಾರಕಿಹೊಳಿ, ಪ್ರಿಯಾಂಕಾ ಜಾರಕಿಹೊಳಿ , ರಾಹುಲ್ ಜಾರಕಿ ಹೊಳಿ, ಆದಿತ್ಯ ಜಾರಕಿಹೊಳಿ, ಐಶ್ವರ್ಯ ಜಾರಕಿಹೊಳಿ, ಸನತ ಜಾರಕಿಹೊಳಿ ಮತ್ತು ಸರ್ವೋತ್ತಮ ಜಾರಕಿಹೊಳಿ ಅವರು ಜಾರಕಿಹೊಳಿ ಕುಟುಂಬದ ಸಮಾಜಿಕ ನ್ಯಾಯದ ತೆರನ್ನು ಎಳೆಯಲು ಸಜ್ಜಾಗಿದ್ದಾರೆ. ಇವರೆಲ್ಲರೂ ಸಹ ಇಂಜಿನಿಯರಿಂಗ್, ಡಿಪ್ಲೊಮಾ, ಎಂಬಿಎ ಸೇರಿದಂತೆ ಇತರ ಉನ್ನತ ಪದವಿಗಳನ್ನು ಪಡೆಯುವದರೊಂದಿಗೆ ಒಳ್ಳೆಯ ಸಂಸ್ಕಾರವಂತರಾಗಿ ಸಮಾಜದ ಸ್ಥಂಭಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಡಾ.ಭೀಮಶಿ ಜಾರಕಿಹೊಳಿ ಅವರ ಹಿರಿಯ ಸುಪುತ್ರ ಸನತ ಜಾರಕಿಹೊಳಿ ಅವರು ಡಿಸೆಂಬರ್ 8 ಗುರುವಾರದಂದು ಬೆಂಗಳೂರಿನ ಕರ್ನಾಟಕ ಸ್ಟೇಟ್ ಬಾರ್ ಕೌನ್ಸಿಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಸ್ಟೇಟ್ ಬಾರ್ ಕೌನ್ಸಿಲ್ ನ ಅಧ್ಯಕ್ಷ ಮತ್ತು ಹಿರಿಯ ಸದಸ್ಯರಿಂದ ಸನ್ನದು ( ಅಧಿಕಾರಪತ್ರ) ಸ್ವೀಕರಿಸುವ ಮೂಲಕ ವಕೀಲರಾಗುವ ಮುಖೇನ ಜಾರಕಿಹೊಳಿ ಕುಟುಂಬದ ಮೂರನೇ ತಲೆಮಾರಿನಲ್ಲಿ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಜಾರಕಿಹೊಳಿ ಕುಟುಂಬದಲ್ಲಿ ಇಲ್ಲಿವರೆಗೆ ಯಾರು ಕೂಡಾ ವಕೀಲ ಪದವಿ ಪಡೆದ ಇತಿಹಾಸ ಇಲ್ಲ . ಸನತ ಜಾರಕಿಹೊಳಿ ಅವರು ವಕೀಲ ಪದವಿ ಪಡೆಯುವ ಮೂಲಕ ಜಾರಕಿಹೊಳಿ ಕುಟುಂಬದ ಕೀರ್ತಿ ಪತಾಕೆಯನ್ನು ಉತ್ತಂಗಕ್ಕೆ ಏರಿಸಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು.
ಡಾ.ಭೀಮಶಿ ಜಾರಕಿಹೊಳಿ ಮತ್ತು ಶ್ರೀಮತಿ ಸುರ್ವಣಾತಾಯಿ ಜಾರಕಿಹೊಳಿ ಅವರ ಉದರದಲ್ಲಿ ಹಿರಿಯ ಸುಪುತ್ರರಾಗಿ ಜನಿಸಿದ ಸನತ ಅವರು ತಂದೆ ಮತ್ತು ತಾಯಿ ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಬರುತ್ತಿದ್ದಾರೆ. ಬಾಲ್ಯದಿಂದಲೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡ ಸನತ .ತಮ್ಮ ತಂದೆ ಸ್ಥಾಪಿಸಿರುವ ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ನಲ್ಲಿಯೆ ತಮ್ಮ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣ ಮುಗಿಸಿ ಪ್ರಸ್ತುತ ಅದೇ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ತಾನು ವಿದ್ಯೆ ಪಡೆದ ವಿದ್ಯಾ ಸಂಸ್ಥೆಯನ್ನು ಬೆಳೆಸುವಲ್ಲಿ ಅವಿರತ ಶ್ರಮವಹಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ಪಠ್ಯದಷ್ಟೆ ಪಠ್ಯೇತರ ಚಟುವಟಿಕೆಗಳಿಗೆ ಮಹತ್ವ ನೀಡುತ್ತಿದ್ದ ಸನತ ಅವರು ಒಬ್ಬ ಒಳ್ಳೆಯ ಕ್ರೀಡಾಪಟುವಾಗಿ ಜನಮನ ಗೆದ್ದವರು.
ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಎಲ್ಇಟಿ ಶಿಕ್ಷಣ ಸಂಸ್ಥೆ ಕಾರ್ಯಭಾರವನ್ನು ವಹಿಸಿಕೊಂಡು ಎಲ್ಲರೂ ಸೈ ಎನ್ನುವ ಹಾಗೆ ಕಳೆದ ನಾಲ್ಕೈದು ವರ್ಷಗಳಿಂದ ಎಲ್ಇಟಿ ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಪರಿ ಅದ್ಭುತ. ಈಗ ಪ್ರಸ್ತುತ ಕರ್ನಾಟಕ ಟೈಮ್ಸ ದಿನ ಪತ್ರಿಕೆಯ ಜವಾಬ್ದಾರಿಯನ್ನು ಸಹ ತನ ಹೆಗಲಿಗೆ ಹಾಕಿಕೊಂಡು ಅದರ ವ್ಯವಸ್ಥಾಪಕ ಸಂಪಾದಕರಾಗಿ ಪತ್ರಿಕೆಯನ್ನು ಹೊರ ತರುವಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಇವರ ಸಾರಥ್ಯದಲ್ಲಿ ಪತ್ರಿಕೆ ಕೂಡಾ ಹೊಸ ಉಲ್ಲಾಸದೊಂದಿಗೆ ಓದುಗರ ಕೈ ಸೇರುತ್ತಿದೆ. ಮುಂಬರುವ ಕೆಲವೆ ದಿನಗಳಲ್ಲಿ ಕರ್ನಾಟಕ ಟೈಮ್ಸ ದಿನಪತ್ರಿಕೆಯನ್ನು ರಾಜ್ಯಮಟ್ಟದಲ್ಲಿ ಬೆಳೆಸುವ ಮಹತ್ತರ ಉದ್ದೇಶದಿಂದ ಕಾರ್ಯಪ್ರವೃತ್ತವಾಗಿರುವ ಸನತ ಜಾರಕಿಹೊಳಿ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಪತ್ರಿಕೋದ್ಯಮದಂತಹ ಚಾಲೇಜಿಂಗ್ ವೃತ್ತಿಯ ಜವಾಬ್ದಾರಿಯನ್ನು ಸ್ವೀಕರಿಸಿದ್ದಾರೆ. ಹೀಗೆ ಒಂದಲ್ಲ ಎರಡಲ್ಲ ಹಲವು ಜವಾಬ್ದಾರಿಗಳನ್ನು ತನ್ನ ಬೆನ್ನಿಗೆ ಕಟ್ಟಿಕೊಂಡು ತಂದೆ ಡಾ.ಭೀಮಶಿ ಜಾರಕಿಹೊಳಿ ಮತ್ತು ತಾಯಿ ಶ್ರೀಮತಿ ಸುರ್ವಣಾ ತಾಯಿ ಅವರ ಮಾರ್ಗದರ್ಶನದಲ್ಲಿ ಒಬ್ಬ ಒಳ್ಳೆಯ ಉದ್ಯಮಿಯಾಗುವದರ ಜೊತೆಗೆ ಒಬ್ಬ ಒಳ್ಳೆಯ ವಕೀಲರಾಗಿ ಹೊರಹೊಮ್ಮಲ್ಲಿ ಎಂಬ ಸದಾಶಯ ನಮ್ಮದಾಗಿದ್ದು . ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಹಲವು ಮಹತ್ತರ ಕಾರ್ಯಗಳಿಗೆ ಸಾಕ್ಷಿಯಾಗುತ್ತಿರುವ ಸನತ ಜಾರಕಿಹೊಳಿ ಅವರ ಸಾಮಾಜಿಕ ಕಳಕಳಿಯುಳ್ಳ ಕಾರ್ಯಗಳು ಹೀಗೆಯೇ ಮುಂದುವರೆದು ಮುಂದೊಂದು ದಿನ ಅವರು ಭವಿಷ್ಯದ ಬಲಿಷ್ಠ ನಾಯಕರಾಗಿ ಬೆಳೆದು ಜಾರಕಿಹೊಳಿ ಕುಟುಂಬದ ತೆರನ್ನು ಎಳೆಯಲಿ ಎಂದು ಹಾರೈಸೊಣ.