RNI NO. KARKAN/2006/27779|Sunday, December 22, 2024
You are here: Home » breaking news » ಗೋಕಾಕ:ವಿದ್ಯಾರ್ಥಿಗಳಿಗಾಗಿ ಪಿಕ್ನಿಕ್ ಫಜಲ್ ಕಾರ್ಯಕ್ರಮ

ಗೋಕಾಕ:ವಿದ್ಯಾರ್ಥಿಗಳಿಗಾಗಿ ಪಿಕ್ನಿಕ್ ಫಜಲ್ ಕಾರ್ಯಕ್ರಮ 

ವಿದ್ಯಾರ್ಥಿಗಳಿಗಾಗಿ ಪಿಕ್ನಿಕ್ ಫಜಲ್ ಕಾರ್ಯಕ್ರಮ

ಗೋಕಾಕ ಡಿ 11 : ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ ಸರಕಾರ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ. ಅಂತಹ ಕಾರ್ಯಕ್ರಮಗಳಲ್ಲಿ ಪಿಕ್ನಿಕ್ ಫಜಲ್ ಬಹಳ ಉಪಯುಕ್ತ ಕಾರ್ಯಕ್ರಮವಾಗಿದ್ದು,  ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಂಡು ಯಶಸ್ವಿಯಾಗಬೇಕು ಎಂದು ಬಿಇಒ ಜಿ‌.ಬಿ.ಬಳಗಾರ ಹೇಳಿದರು.
ನಗರದ  ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಪ್ರೌಢ  ವಿಭಾಗದ  ಸನ್ 2022-23 ರ SSLC ವಿದ್ಯಾರ್ಥಿ ವಿದ್ಯಾರ್ಥಿನಿಯರ ಫಲಿತಾಂಶ ಸುಧಾರಣೆಗಾಗಿ ಹಮ್ಮಿಕೊಂಡ ಪಿಕ್ನಿಕ್ ಫಜಲ್ ಕಾರ್ಯಕ್ರಮವನ್ನು ಉದ್ಘಾಟಿಸಿ  ಮಾತನಾಡಿದ ಅವರು ವಿದ್ಯಾರ್ಥಿ ದಿಸೆಯಲ್ಲಿ ಸಮಯ ಪ್ರಜ್ಞೆ ಬಹಳ ಮುಖ್ಯ.ವಿದ್ಯಾರ್ಥಿಗಳ ಸಮಯ ಪ್ರಜ್ಞೆಯಿಂದ ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಉತ್ತಮ ಫಲಿತಾಂಶದೊಂದಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪ ಪ್ರಾಚಾರ್ಯ ಎಂ.ಬಿ.ಬಳಗಾರ ,  ಶಿಕ್ಷಕರಾದ ಬಿ ಎಸ್ ಜೋಲಾಪೂರ,  ಸದಾನಂದ ತೇರಣಿ ,ಸಂಜಯ್ ಡೊಂಗ್ರೆ , ಶ್ರೀಮತಿ ಎಸ್ ಬಿ ಅಂಗಡಿ ಹಾಗೂ  ಹೊಸ ಮಾಧ್ಯಮಿಕ ಶಾಲೆಯ ಸಹಶಿಕ್ಷಕರಾದ ಮುಚ್ಚಂಡಿ ಹಿರೇಮಠ, ಶೆಟ್ಟರ್,  ದೈಹಿಕ ಶಿಕ್ಷಕರಾದ  ಹಿರೇಮಠ,  ಹೋನಕುಪ್ಪಿ, ಟಿ ಬಿ ಬಿಲ್ , ಎಂ. ಕೆ ಕುರಬೇಟ ಉಪಸ್ಥಿತರಿದ್ದರು.

Related posts: