RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ರಸ್ತೆಗಳಲ್ಲಿ ಅಪಘಾತಗಳನ್ನು ತಡೆಗಟ್ಟಲು ರಸ್ತೆ ಸುರಕ್ಷತಾ ಕ್ರಮಗಳನ್ನು ಪಾಲಿಸಿ : ಸಿಪಿಐ ಗೋಪಾಲ ರಾಠೋಡ

ಗೋಕಾಕ:ರಸ್ತೆಗಳಲ್ಲಿ ಅಪಘಾತಗಳನ್ನು ತಡೆಗಟ್ಟಲು ರಸ್ತೆ ಸುರಕ್ಷತಾ ಕ್ರಮಗಳನ್ನು ಪಾಲಿಸಿ : ಸಿಪಿಐ ಗೋಪಾಲ ರಾಠೋಡ 

ರಸ್ತೆಗಳಲ್ಲಿ ಅಪಘಾತಗಳನ್ನು ತಡೆಗಟ್ಟಲು ರಸ್ತೆ ಸುರಕ್ಷತಾ ಕ್ರಮಗಳನ್ನು ಪಾಲಿಸಿ : ಸಿಪಿಐ ಗೋಪಾಲ ರಾಠೋಡ

ಗೋಕಾಕ ಡಿ 11 : ರಸ್ತೆಗಳಲ್ಲಿ ಅಪಘಾತಗಳನ್ನು ತಡೆಗಟ್ಟಲು ರಸ್ತೆ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಸಿಪಿಐ ಗೋಪಾಲ ರಾಠೋಡ ಹೇಳಿದರು.
ರವಿವಾರದಂದು ವಿಡಿಯೋ ಸಂದೇಶದ ಮುಖಾಂತರ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿರುವ  ಅವರು ವಾಹನಗಳ ವೇಗವನ್ನು ನಿಯಂತ್ರಿಸುವ ಮೂಲಕ ರಸ್ತೆ ಅಪಘಾತಗಳನ್ನು ತಡೆಯಲು ಸಾಧ್ಯ ಆ ದಿಸೆಯಲ್ಲಿ ಎಲ್ಲಾ ವಾಹನ ಸವಾರರು ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಎನ್ .ಜಿ.ಆರ್.ಬಿ ವರದಿ ಪ್ರಕಾರ ದೇಶದಲ್ಲಿ 4 ಲಕ್ಷ ಹಾಗೂ ಕರ್ನಾಟಕದಲ್ಲಿ 35 ಪ್ರಕರಣಗಳು ದಾಖಲಾಗುತ್ತಿವೆ. ಭಾರತದಲ್ಲಿ 1 ಲಕ್ಷ ಜನ ಹಾಗೂ ಕರ್ನಾಟಕ 10 ಸಾವಿರ ಜನರು ರಸ್ತೆ ಅಪಘಾತದಲ್ಲಿ ಮರಣಹೊಂದಿರುತ್ತಾರೆ .ಇದರ ದ್ವಿಚಕ್ರ ವಾಹನ ಸವಾರರು ಅತಿ ಹೆಚ್ಚು ವೇಗದಿಂದ ವಾಹನವನ್ನು ಚಲಾಯಿಸಿ ಮರಣಹೊಂದಿರುತ್ತಾರೆ. ಸಾರ್ವಜನಿಕರು ರಸ್ತೆ ನಿಯಮ ಪಾಲಿಸದಿದ್ದಲಿ ಇಂಡಿಯನ್ ಮೋಟರ ಆಕ್ಟ್ 2021ರ ಪ್ರಕಾರ ಹೆಚ್ಚಿನ ದಂಡವನ್ನು ವಿಧಿಸಲಾಗುವದು.ಆದ್ದರಿಂದ ಎಲ್ಲಾ ವಾಹನ ಸವಾರರು ಕಡ್ಡಾಯವಾಗಿ ರಸ್ತೆ ನಿಯಮಗಳನ್ನು ಪಾಲಿಸುವಂತೆ ಸಿಪಿಐ ಹಾಗೂ ಇತರ ಪೊಲೀಸ್ ಅಧಿಕಾರಿಗಳು ವಿಡಿಯೋ ಸಂದೇಶದಲ್ಲಿ ಮನವಿ ಮಾಡಿದ್ದಾರೆ.

Related posts: