RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ನಿಸ್ವಾರ್ಥ ಸಮಾಜಸೇವೆಯಿಂದ ಪುಣ್ಯ ಪ್ರಾಪ್ತಿಯಾಗುತ್ತದೆ : ಎಲ್.ಡಿ.ಎಸ್.ಪೌಂಡೇಶನ್ ಉದ್ಘಾಟಿಸಿದ ಸನತ ಜಾರಕಿಹೊಳಿ ಅಭಿಮತ

ಗೋಕಾಕ:ನಿಸ್ವಾರ್ಥ ಸಮಾಜಸೇವೆಯಿಂದ ಪುಣ್ಯ ಪ್ರಾಪ್ತಿಯಾಗುತ್ತದೆ : ಎಲ್.ಡಿ.ಎಸ್.ಪೌಂಡೇಶನ್ ಉದ್ಘಾಟಿಸಿದ ಸನತ ಜಾರಕಿಹೊಳಿ ಅಭಿಮತ 

ನಿಸ್ವಾರ್ಥ ಸಮಾಜಸೇವೆಯಿಂದ ಪುಣ್ಯ ಪ್ರಾಪ್ತಿಯಾಗುತ್ತದೆ : ಎಲ್.ಡಿ.ಎಸ್.ಪೌಂಡೇಶನ್ ಉದ್ಘಾಟಿಸಿದ  ಸನತ ಜಾರಕಿಹೊಳಿ ಅಭಿಮತ

ಗೋಕಾಕ ಡಿ 15 : ನಿಸ್ವಾರ್ಥ ಸಮಾಜಸೇವೆಯನ್ನು  ಜೀವನದ ಅವಿಭಾಜ್ಯ ಅಂಗವನ್ನಾಗಿಸಿಕೊಂಡು  ಸಮಾಜ ಸೇವೆ ಮಾಡಿದರೆ ಪುಣ್ಯ  ಪ್ರಾಪ್ತಿಯಾಗವುದು ಎಂದು ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಹೇಳಿದರು.
ಗುರುವಾರದಂದು ನಗರದ ಶೂನ್ಯ ಸಂಪಾದನ ಮಠದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಎಲ್.ಡಿ.ಎಸ್.ಪೌಂಡೇಶನ್ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಾತ್ಯತೀತವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೋಳ್ಳುವದರ ಜೊತೆಗೆ ಸೇವೆಯಲ್ಲಿ ಪಾರದರ್ಶಕತೆಯನ್ನು ಹೊಂದಬೇಕು. ನಮ್ಮ ಸಮಾಜ ಸೇವೆಯನ್ನು   ಸಮುದಾಯ , ಸರಕಾರಗಳು, ಜನಪ್ರತಿನಿಧಿಗಳು  ಗುರುತಿ‌ಸುವ ಕಾರ್ಯವಾಗಬೇಕು. ಕಳೆದ ಹಲವಾರು ವರ್ಷಗಳಿಂದ ವೃತ್ತಿಯ ಜೊತೆಗೆ ಯಮಕನಮರಡಿ ಸಹೋದರರು ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ. ಇವರ ಸ್ಥಾಪಿಸಿದ ಎಲ.ಡಿ.ಎಸ್.ಪೌಂಡೇಶನ್ ವತಿಯಿಂದ ಸಮಾಜಕ್ಕೆ ಉಪಯೋಗವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಪರೋಪಕಾರ ಮಾಡಿದರೆ  ಪುಣ್ಯ ಪ್ರಾಪ್ತವಾಗುತ್ತದೆ.  ಜನನ ಮತ್ತು ಮರಣದ ಮಧ್ಯದಲ್ಲಿ ಇರುವ ದಿನಗಳಲ್ಲಿ ‌ಸತ್ಕಾರ್ಯಗಳನ್ನು ಮಾಡಬೇಕು ಸಮಾಜದಲ್ಲಿ  ಬಿದ್ದವರನ್ನು ಎತ್ತುವ ಕಾರ್ಯವನ್ನು ಸಮಾಜಿಕ ಸಂಘ, ಸಂಸ್ಥೆಗಳು  ಮಾಡಬೇಕು. ನಿಜವಾದ ನಿರ್ಗತಿಕರನ್ನು ಗುರುತಿಸಿ ಅವರಿಗೆ  ದಾನಮಾಡುವ ಮೂಲಕ ಅವರನ್ನು  ಸಮಾಜದ  ಮುಖ್ಯವಾಹಿನಿಗೆ ತರಬೇಕು ಅಂದಾಗ ನಾವು ಮಾಡಿದ  ಕಾರ್ಯದಲ್ಲಿ  ಸಾರ್ಥಕತೆ ಕಾಣಲು ಸಾಧ್ಯ ಆ ನಿಟ್ಟಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಎಲ್.ಡಿ.ಎಸ್.ಪೌಂಡೇಶನ್ ಸಮಾಜಮುಖಿ ಕಾರ್ಯಗಳನ್ನು ಮಾಡಿ  ಗಗನೆತ್ತರಕ್ಕೆ  ಬೆಳೆಯಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ಎಲ್ ಡಿ.ಎಸ್.ಪೌಂಡೇಶನ್ ನ ಅಧ್ಯಕ್ಷ ಗುರು  ಯಮಕನಮರಡಿ, ಸತೀಶ ಜಾರಕಿಹೊಳಿ ಪೌಂಡೇಶನ್ ನ ಕಾರ್ಯದರ್ಶಿ ರಿಯಾಜ ಚೌಗಲಾ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕ ಎಸ್.ಕೆ ಮಠದ ನಿರೂಪಿಸಿ,ವಂದಿಸಿದರು.

Related posts: