RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಸಕ್ಕರೆ ಸಚಿವರ ಮಾತು ಹಾಸ್ಯಾಸ್ಪದವಾಗಿದೆ : ರಾಜ್ಯಾಧ್ಯಕ್ಷ ಕೋಡಿಹಳ್ಳಿ ಕಿಡಿ

ಗೋಕಾಕ:ಸಕ್ಕರೆ ಸಚಿವರ ಮಾತು ಹಾಸ್ಯಾಸ್ಪದವಾಗಿದೆ : ರಾಜ್ಯಾಧ್ಯಕ್ಷ ಕೋಡಿಹಳ್ಳಿ ಕಿಡಿ 

ಸಕ್ಕರೆ ಸಚಿವರ ಮಾತು ಹಾಸ್ಯಾಸ್ಪದವಾಗಿದೆ : ರಾಜ್ಯಾಧ್ಯಕ್ಷ ಕೋಡಿಹಳ್ಳಿ ಕಿಡಿ

ಗೋಕಾಕ ಡಿ 17 : ಕಬ್ಬು ಬೆಳೆಗಾರರಿಗೆ ಕಾರ್ಖಾನೆಗಳಿಂದ ಬರಬೇಕಾದ ಬಾಕಿಯನ್ನು ವಸೂಲಿ ಮಾಡಿಕೊಡದ ರಾಜ್ಯ ಸರ್ಕಾರ ಕಾರ್ಖಾನೆಗಳಿಂದ ಉತ್ಪಾದನೆಗೊಳ್ಳುವ ಎಥೆನಾಲ್‍ನಲ್ಲಿ ಬರುವ ಲಾಭಾಂಶವನ್ನು ರೈತರಿಗೆ ನೀಡುತ್ತೇವೆ ಎಂದು ಹೇಳಿಕೆಯನ್ನು ನೀಡುತ್ತಿರುವ ರಾಜ್ಯ ಸಕ್ಕರೆ ಸಚಿವರ ಮಾತು ಹಾಸ್ಯಾಸ್ಪದವಾಗಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಕಿಡಿ ಕಾರಿದರು.
ಶನಿವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಒಂದು ಟನ್ ಕಬ್ಬಿನ ಬೆಳೆಗೆ ಎಷ್ಟು ಇಳುವರಿ ಸಕ್ಕರೆ ಉತ್ಪಾದನೆಯಾಗುತ್ತದೆ ಎನ್ನುವುದು ಲೆಕ್ಕಾಚಾರ ಸಚಿವರಿಗೆ ಇದೆಯಾ, ಮೈಸೂರು, ಹಾಸನ, ಕಲಬುರ್ಗಿ, ಬೆಳಗಾವಿ, ಬಾಗಲಕೋಟ ಭಾಗಗಳಲ್ಲಿಯ ಕಾರ್ಖಾನೆಗಳಿಂದ ಎಷ್ಟು ಟನ್ ಕಬ್ಬು ನುರಿಸಿದ್ದಾರೆ. ಎಷ್ಟು ಟನ್ ಸಕ್ಕೆರೆ ಉತ್ಪಾದನೆಯಾಗಿದೆ ಎನ್ನುವ ಸೃಷ್ಟ ಮಾಹಿತಿ ಸರ್ಕಾರದ ಆಡಳಿತ ಯಂತ್ರಕ್ಕೆ ಇಲ್ಲ. ಇನ್ನು ಹೋಗಿ ಹೋಗಿ ಎಥೆನಾಲ್‍ನಲ್ಲಿ ಲಾಭಾಂಶ ರೈತರಿಗೆ ಕೊಡುಸುತ್ತೇವೆ ಎನ್ನುವುದು ಕೇವಲ ರೈತರ ಕಣ್ಣೂವರಿಸುವ ತಂತ್ರವಾಗಿದೆ ನಿಮ್ಮ ಮಾತಿಗೆ ರೈತರು ಮರಳಾಗುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ರೈತರಿಗೆ ಉಪಕಾರ ಮಾಡುವ ಉದ್ದೇಶ ಹಾಗೂ ಕಾಳಜಿ ಸರ್ಕಾರದ್ದು ಆಗಿದ್ದರೆ ರೈತರಿಗೆ ಎಥೆನಾಲ್ ಉತ್ಪಾದನೆ ಮಾಡಲು ಘಟಕಗಳನ್ನು ಆರಂಭಿಸಲು ಅನುಮತಿ ಹಾಗೂ ಪ್ರೋತ್ಸಾಹವನ್ನು ರಾಜ್ಯ ಸರ್ಕಾರ ಮಾಡಬೇಕು. ಹಾಗೂ ಪೇಟ್ರೋಲ್ ಖರೀದಿ ಮಾಡುವ ಹಾಗೇ ರೈತರು ಉತ್ಪಾಧಿಸುವ ಎಥೆನಾಲ್‍ನನ್ನು ಕೇಂದ್ರ ಸರ್ಕಾರ ಖರೀದಿಸಬೇಕು ಇಷ್ಟು ಮಾಡಿದರೇ ರೈತರಿಗೆ ಒಳ್ಳೆಯದು ಆಗುತ್ತದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಜಾರಿಗೆ ತಂದ ಕೃಷಿ ಕಾಯ್ದೆಯನ್ನು ರೈತರ ಹೋರಾಟದಿಂದ ಬೆಷರತ್ತಾಗಿ ವಾಪಸ್ಸು ಪಡೆದಿದ್ದರೂ ರಾಜ್ಯ ಸರ್ಕಾರ ಅದನ್ನು ಹಿಂಪಡೆಯದೇ ಅಭಿವೃದ್ದಿ ಪಡಿಸುವ ಕಾರ್ಯವನ್ನು ಮಾಡುತ್ತಿದೆ. ಅದನ್ನು ನಿಲ್ಲಿಸಬೇಕು. ಕಬ್ಬಿನ ಬೆಳೆಗೆ ಎಫ್‍ಆರ್‍ಪಿ ಘೋಷಣೆ ಮಾಡಿದ ತಕ್ಷಣವೇ ಎಸ್‍ಎಪಿಯನ್ನು ನೀಡಬೇಕು. ಹಾಗೂ ರೈತರ ಹಲವಾರು ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕೆಂದು ಆಗ್ರಹಿಸಿ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಷನದ ಮೊದಲ ದಿನ ಅಂದರೆ ದಿ.19ರಂದು ಸುವರ್ಣಸೌಧ ಮುತ್ತಿಗೆ ಹಾಕುವ ಕಾರ್ಯವನ್ನು ನಮ್ಮ ಸಂಘದಿಂದ ಮಾಡಲಾಗುವುದು ಎಂದು ತಿಳಿಸಿದರು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ಭೀಮಶಿ ಗದಾಡಿ ಮಾತನಾಡಿ, ರಾಜ್ಯ ಸರ್ಕಾರ ಕಬ್ಬಿನ ಬೆಳೆಗಳನ್ನು ತೂಕ ಮಾಡುವ ಯಂತ್ರಗಳನ್ನು ಕೇವಲ ಕಾಟಾಚಾರಕ್ಕೆ ಎನ್ನುವಂತೆ ಪರಿಶೀಲನೆ ನಡೆಸುತ್ತಿದ್ದಾರೆ. ಯಾವ-ಯಾವ ಕಾರ್ಖಾನೆಯವರು ತೂಕದಲ್ಲಿ ಮೋಸ ಮಾಡುತ್ತಿದ್ದಾರೆ ಎನ್ನುವುದನ್ನು ಬಹಿರಂಗ ಪಡಿಸಿ ಕಾರ್ಖಾನೆಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಭಕ್ತರಳ್ಳಿ ಬೈರೆಗೌಡ,ಮಾಲತೇಶ ಪೂಜಾರ, ತಾಲೂಕಾಧ್ಯಕ್ಷ ರಮೇಶ ಗೂದಿಗೊಪ್ಪ, ಉಪಾಧ್ಯಕ್ಷ ರಾಯಪ್ಪ ಗೌಡಪ್ಪನ್ನವರ, ಸಂಘಟನಾ ಕಾರ್ಯದರ್ಶಿ ಉಮೇಶ ನಾಯಿಕ ಇದ್ದರು.

ಬ್ರೇಜಿಲ್ ದೇಶದಲ್ಲಿ ರೈತರು ಎಥೆನಾಲ್ ಘಟಕಗಳನ್ನು ಸ್ಥಾಪಿಸಿ ಆ ದೇಶದ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಅವುಗಳ ಬಗ್ಗೆ ಮಾಹಿತಿಯನ್ನು ಪಡೆಯಲು ರೈತ ಸಂಘದಿಂದ ಒಂದು ನಿಯೋಗವನ್ನು ಶೀಘ್ರದಲ್ಲಿಯೇ ಆ ದೇಶಕ್ಕೆ ಹೋಗಲಿದ್ದೇವೆ.- ಕೋಡಿಹಳ್ಳಿ ಚಂದ್ರಶೇಖರ

Related posts: