ಗೋಕಾಕ:ಭಾರತದ ಬೇರೆ ಯಾವೊಂದು ಭಾಷೆಗೂ ಇಲ್ಲದಂತ ಪರಂಪರೆ ಕನ್ನಡ ಭಾಷೆಗಿದೆ: ಸರ್ವೋತ್ತಮ ಜಾರಕಿಹೊಳಿ
ಭಾರತದ ಬೇರೆ ಯಾವೊಂದು ಭಾಷೆಗೂ ಇಲ್ಲದಂತ ಪರಂಪರೆ ಕನ್ನಡ ಭಾಷೆಗಿದೆ: ಸರ್ವೋತ್ತಮ ಜಾರಕಿಹೊಳಿ
ಗೋಕಾಕ ಡಿ 18 (ಡಾ.ಬೆಟಗೇರಿ ಕೃಷ್ಣಶರ್ಮ ವೇದಿಕೆ, ಬೆಟಗೇರಿ) :
ಭಾರತದ ಬೇರೆ ಯಾವೊಂದು ಭಾಷೆಗೂ ಇಲ್ಲದಂತ ಪರಂಪರೆ ಕನ್ನಡ ಭಾಷೆಗಿದೆ. ಅದಕ್ಕಾಗಿಯಾದರೂ ಕನ್ನಡ ಭಾಷೆಗೆ ಎಂತಹ ಶಕ್ತಿಯಿದೆ ಎನ್ನುವುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕೆಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು
ಶನಿವಾರದಂದು ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ನಡೆದ 6 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷೆತೆಯನ್ನು ವಹಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಓದಿದವರು ವಿಜ್ಞಾನಿಗಳು, ದೊಡ್ಡ ದೊಡ್ಡ ಅಧಿಕಾರಿಗಳು, ಜ್ಞಾನಪೀಠ ಪ್ರಶಸ್ತಿ ಪುರುಸ್ಕೃತರಾಗಿದ್ದಾರೆ ಅವರು ಕನ್ನಡವನ್ನು ಪೋಷಿಸಿ, ಗೌರವಿಸಿ, ಬೆಳೆಸಿದಂತೆ ಪ್ರತಿಯೊಬ್ಬ ಕನ್ನಡಿಗರು ಕನ್ನಡ ಭಾಷೆಯಯನ್ನು ಉಳಿಸಿ ಬೆಳಸಬೇಕು ಎಂದ ಅವರು ಕನ್ನಡ ಶಾಲೆಗಳು ಉಳಿದರೆ ಮಾತ್ರ ಕನ್ನಡ ಹಾಗೂ ಅದನ್ನು ನಂಬಿಕೊಂಡಿರುವ ಸಂಸ್ಕೃತಿ, ಜಾನಪದ ಕಲಾಪ್ರಕಾರಗಳು ಉಳಿಯಲು ಸಾಧ್ಯ ಆಂಗ್ಲ ಮಾಧ್ಯಮ ಹಾಗೂ ಇತರೆ ಶಾಲೆಗಳ ಸರಿಸಮಾನ ರೀತಿಯಲ್ಲಿ ಸರಕಾರ ಕನ್ನಡ ಶಾಲೆಗಳಿಗೆ ಶಕ್ತಿ ತುಂಬುವ ಕಾರ್ಯಮಾಡಬೇಕಾಗಿದೆ. ನಮ್ಮ ಮಾತೃಭಾಷೆ ಯಾವುದೇ ಇರಲಿ ಕನ್ನಡ ನಾಡಿನಲ್ಲಿ ಹುಟ್ಟಿರುವ ಪ್ರತಿಯೊಬ್ಬರಿಗೂ ಕನ್ನಡ ಉಳಿಸಿ ಬೆಳೆಸುವ ಜವಾಬ್ದಾರಿಯಿದೆ ಆ ದಿಸೆಯಲ್ಲಿ ಪ್ರತಿಯೊಬ್ಬರು ಕನ್ನಡದ ವಿಷಯ ಬಂದಾಗ ಒಗ್ಗಟ್ಟಾಗಿ ಕನ್ನಡ ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಸಮ್ಮೇಳನ ಸರ್ವಾಧ್ಯಕ್ಷ ಈಶ್ವರಚಂದ್ರ ಬೆಟಗೇರಿ ಸಮಾರೋಪ ನುಡಿಗಳು ಆಡಿದರು.
ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಶಿವಲಿಂಗ ಮಹಾಸ್ವಾಮಿಗಳು,ತ್ರಿವಿಧ ದಾಸೋಹ ಮೂರ್ತಿ ಶ್ರೀ ಅಭಿನವ ಸಿದ್ರಾಯನಜ್ಜನವರು, ವೇದಮೂರ್ತಿ ಸಂಗಯ್ಯ ಹಿರೇಮಠ ವಹಿಸಿ ಆರ್ಶಿವಚನ ನೀಡಿದರು.
ವೇದಿಕೆ ಮೇಲೆ ಎಚ್.ಬಿ ಪಾಟೀಲ,ಈಶ್ವರ ಪಾಟೀಲ,ಶ್ರೀಧರ ದೇಯಣ್ಣವರ,ಹಣುಮಂತ ಬಾಣಸಿ,ಲಕ್ಷ್ಮಣ ಚಂದರಗಿ, ರೇವಣ್ಣಸಿದ್ದ ಸವತಿಕಾಯಿ, ಅಡಿವೆಪ್ಪ ಮುರುಗೋಡ,ಸತ್ತೆಪ್ಪ ಮಾಳೇದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.