ಗೋಕಾಕ:ಕಠಿಣ ವ್ರತ ಮಾಡುವುದರಿಂದ ಉತ್ತಮ ಮಾನವರಾಗುವ ಅವಕಾಶ ದೊರೆಯುತ್ತದೆ : ಸನತ ಜಾರಕಿಹೊಳಿ
ಕಠಿಣ ವ್ರತ ಮಾಡುವುದರಿಂದ ಉತ್ತಮ ಮಾನವರಾಗುವ ಅವಕಾಶ ದೊರೆಯುತ್ತದೆ : ಸನತ ಜಾರಕಿಹೊಳಿ
ಗೋಕಾಕ ಡಿ 21 : ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು 48 ದಿನಗಳ ಕಠಿಣ ವ್ರತ ಮಾಡುವುದರಿಂದ ನಮ್ಮೊಳಗಿನ ಸದ್ಗುಣಗಳು ಬೆಳೆದು ಉತ್ತಮ ಮಾನವರಾಗುವ ಅವಕಾಶ ದೊರೆಯುತ್ತವೆ ಎಂದು ಶ್ರೀ ಲಕ್ಷ್ಮೀ ಎಜ್ಯುಕೇಷನ್ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಹೇಳಿದರು.
ಮಂಗಳವಾರದಂದು ಸಾಯಂಕಾಲ ತಾಲೂಕಿನ ಕಡಬಗಟ್ಟಿ ಗ್ರಾಮದದಲ್ಲಿ ಅಯ್ಯಪ್ಪ ಸ್ವಾಮಿ ಸನ್ನಿಧಾನ ವತಿಯಿಂದ ಹಮ್ಮಿಕೊಂಡ 19ನೇ ವರ್ಷದ ಅಯ್ಯಪ್ಪಸ್ವಾಮಿ ಮಹಾಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಯ್ಯಪ್ಪಸ್ವಾಮಿಯ ಮಾಲೆಯನ್ನು ಧರಿಸಿ 48 ದಿನಗಳವರೆಗೆ ಕಠಿಣ ವೃತ ಕೈಗೊಂಡು, ಶಬರಿಮಲೈ ಅಯ್ಯಪ್ಪ ದೇವಸ್ಥಾನದ 18 ಮೆಟ್ಟಿಲು ಏರಿ ದರ್ಶನ ಪಡೆಯುವರು. ಇದು ಅತ್ಯಂತ ಕಠಿಣ ವೃತವಾಗಿದೆ. ಇದು ಭಾರತೀಯ ಪ್ರಾಚೀನ ಕಾಲದ ಸಂಸ್ಕøತಿ ಹಾಗೂ ಪರಂಪರೆಯನ್ನು ಎತ್ತಿ ತೋರಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗುತ್ತಿರುವುದರಿಂದ ಎಲ್ಲಡೆ ಧಾರ್ಮಿಕ ವಾತಾವರಣ ಹರಡುತ್ತಿದೆ. ಕರ್ನಾಟಕ, ತಮಿಳುನಾಡು, ಆಂದ್ರಪ್ರದೇಶ, ತೇಲಂಗಾಣ, ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ಲಕ್ಷಾಂತರ ಭಕ್ತರು ಮಾಲಾಧಾರಿಯಾಗುತ್ತಿರುವುದು ಅಯ್ಯಪ್ಪಸ್ವಾಮಿ ದೇವರಲ್ಲಿ ಇಟ್ಟಿರುವ ಭಕ್ತಿ ಶೃದ್ಧೆಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ ಅವರು ಭಾರತ ದೇಶದ ಇತಿಹಾಸ, ಸಂಸ್ಕøತಿ ವಿಶ್ವಕ್ಕೆ ಮಾದರಿಯಾಗಿದೆ. ಎಲ್ಲ ಧರ್ಮಿಯರು ಸಹೋದರಂತೆ ಜೀವನ ಸಾಗಿಸುತ್ತಿರುವುದು ವಿವಿಧತೆಯಲ್ಲಿ ಏಕತೆ ಬಿಂಬಿಸುತ್ತದೆ. ನಮ್ಮ ದೇಶದ ಧಾರ್ಮಿಕ ವಾತಾವರಣ ಬೇರೆ ಯಾವ ದೇಶಗಳಲ್ಲೂ ಸಿಗುವುದಿಲ್ಲವೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಸನತ ಜಾರಕಿಹೊಳಿ ಅವರು ಅಯ್ಯಪ್ಪ ಸ್ವಾಮಿ ಸನ್ನಿಧಾನ ವತಿಯಿಂದ ಸತ್ಕರಿಸಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಲಕ್ಷ್ಮಣ ಗಡ್ಡಿಹೊಳಿ, ಲಕ್ಷ್ಮಣ ಪೂಜೇರಿ, ಗ್ರಾಪಂ ಸದಸ್ಯರುಗಳಾದ ಬಸಪ್ಪ ಗಡ್ಡಿಹೊಳಿ, ಬಾಳಪ್ಪ ಮುತ್ತೆಪ್ಪಗೋಳ, ರಾಮಸಿದ್ದ ಹಡಗಿನಾಳ, ಮಹಾದೇವ ಗಡ್ಡಿಹೊಳಿ, ಅಯ್ಯಪ್ಪಸ್ವಾಮಿ ಮಾಲಾಧಾರಿಗಳಾದ ಸುರೇಶ್ ನಾಗನೂರ, ಭೀಮಶಿ ವಗ್ಗರ, ಸತ್ತೆಪ್ಪ ಬೆಳವಿ,ಭೀಮಶಿ ಗೌಡರ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಗುರುಸಿದ್ದಪ್ಪ ಪೂಜೇರಿ, ಚಿದಾನಂದ ಗೌಡರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು