RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಕಥೆ, ಕಾದಂಬರಿ, ನಾಟಕ,ಕವನಗಳು ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿತೋರಿಸುತ್ತವೆ : ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ

ಗೋಕಾಕ:ಕಥೆ, ಕಾದಂಬರಿ, ನಾಟಕ,ಕವನಗಳು ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿತೋರಿಸುತ್ತವೆ : ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ 

ಕಥೆ, ಕಾದಂಬರಿ, ನಾಟಕ,ಕವನಗಳು ಸಮಾಜದಲ್ಲಿ  ಮಾನವೀಯ ಮೌಲ್ಯಗಳನ್ನು ಎತ್ತಿತೋರಿಸುತ್ತವೆ : ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ

ಗೋಕಾಕ ಡಿ 25 : ಕಥೆ, ಕಾದಂಬರಿ, ನಾಟಕ,ಕವನಗಳು ಸಮಾಜದಲ್ಲಿ  ಮಾನವೀಯ ಮೌಲ್ಯಗಳನ್ನು ಎತ್ತಿತೋರಿಸುವ ಮೂಲಕ ಅಕ್ಷರಗಳಿಗೆ ಶಕ್ತಿ ತುಂಬಿ ಮುಂದಿನ ಪೀಳಿಗೆ ತಿಳಿಸುವ ಕಾರ್ಯವನ್ನು  ಮಾಡುತ್ತವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು.
ರವಿವಾರದಂದು ನಗರದಲ್ಲಿ ಗೋಕಾವಿ ಗೆಳೆಯರ ಬಳಗ ಹಿರಿಯ ಪತ್ರಕರ್ತ ಹಾಗೂ ರಂಗಭೂಮಿ ಕಲಾವಿದ ಬಸವರಾಜ ಪಟ್ಟಣಶೆಟ್ಟಿ ವಿರಚಿತ ಶಿಕ್ಷಣ ಜ್ಯೋತಿ ಪಾಂಡುರಂಗ ಹತ್ತಿ ಪುಸ್ತಕ ಬಿಡುಗಡೆಗೋಳಿಸಿ  ಮಾತನಾಡಿದ ಅವರು ಸಮಾಜದಲ್ಲಿ ಅರ್ಹನಿಸಿ ಸೇವೆ ಗೈಯುತ್ತಿರುವವರ ಆತ್ಮ ಚರಿತ್ರೆ ಉಳ್ಳ ಕೃತಿಗಳು ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಮಾರ್ಗದರ್ಶನವಾಗುತ್ತವೆ  ಇಂತಹ ಮಹಾನ ವ್ಯಕ್ತಿಗಳ ಚರಿತ್ರೆಯನ್ನು ಓದುವದಷ್ಟೇ ಅಲ್ಲ ಅವರ ಬದುಕನ್ನು ತಮ್ಮ ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡು ನಾವು ಸಹಿತ ಒಂದು ದಿನ ಪುಸ್ತಕವಾಗುವ ರೀತಿಯಲ್ಲಿ ಬದುಕೋಣ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಪ.ಪೂ ಶ್ರೀ ಚಂದ್ರಶೇಖರ ಮಹಾರಾಜರು ವಹಿಸಿ ಆರ್ಶಿವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ.ಚಂದ್ರಶೇಖರ್ ಅಕ್ಕಿ ವಹಿಸಿದ್ದರು. ಕೃತಿ ಕುರಿತು ಹಿರಿಯ ಸಾಹಿತಿ ಪ್ರಕಾಶ ಕೋಟಿನತೋಟ ಮತ್ತು ಡಾ.ಅರುಣ ಸವತಿಕಾಯಿ  ಮಾತನಾಡಿದರು.
ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಅಶೋಕಬಾಬು ನಿಲಗಾರ ಮತ್ತು ಪಿ.ಎಚ್.ಡಿ ಪದವಿಪಡೆದ ಪ್ರೊ ಮಹಾನಂದ ಪಾಟೀಲ ಅವರನ್ನು ಸತ್ಕರಿಸಿ, ಗೌರವಿಸಲಾಯಿತು.
ವೇದಿಕೆಯಲ್ಲಿ ಪಾಂಡುರಂಗ ಹತ್ತಿ, ಸಿರಿಗನ್ನಡ ಮಹಿಳಾ ವೇದಿಕೆಯ ರಾಜ್ಯಾಧ್ಯಕ್ಷೆ ಶ್ರೀಮತಿ ರಜನಿ ಜಿರಗ್ಯಾಳ, ಡಾ.ಎಲ್.ಎಸ್.ಚೌರಿ, ಅಶೋಕ ಲಗಮಪ್ಪಗೋಳ, ಸಾಹಿತಿ ಜಯಾನಂದ ಮಾದರ ,  ಲೇಖಕ ಬಸವರಾಜ ಪಟ್ಟಣಶೆಟ್ಟಿ, ಅಪ್ಪಾಸಾಹೇಬ ಕುರಣಿ,  ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಆನಂದ ಸೋರಗಾವಿ ನಿರೂಪಿಸಿ, ವಂದಿಸಿದರು.

Related posts: