RNI NO. KARKAN/2006/27779|Wednesday, November 6, 2024
You are here: Home » breaking news » ಗೋಕಾಕ:ಕಸ ವಿಲೇವಾರಿ ವಾಹನವನ್ನು ಚಲಾಯಿಸುವ ಮೂಲಕ ಘನತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟಿಸಿದ ಅಂಬಿರಾವ

ಗೋಕಾಕ:ಕಸ ವಿಲೇವಾರಿ ವಾಹನವನ್ನು ಚಲಾಯಿಸುವ ಮೂಲಕ ಘನತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟಿಸಿದ ಅಂಬಿರಾವ 

ಕಸ ವಿಲೇವಾರಿ ವಾಹನವನ್ನು ಚಲಾಯಿಸುವ ಮೂಲಕ ಘನತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟಿಸಿದ ಅಂಬಿರಾವ

ಗೋಕಾಕ ಡಿ 31 : ತಾಲೂಕಿನ ಮೇಲ್ಮನಹಟ್ಟಿ ಗ್ರಾಮದಲ್ಲಿ 2.01ಕೋಟಿ ರೂಗಳ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರದಂದು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರು ಚಾಲನೆ ನೀಡಿದರು.
ಸ್ವಚ್ಛ ಭಾರತ ಮಿಷನದಡಿ 20ಲಕ್ಷ ರೂ ವೆಚ್ಚದ ಘನತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟನೆ, ಸ್ವಚ್ಛ ಭಾರತ ಮಿಷನದಡಿ 5.5ಲಕ್ಷ ರೂ ವೆಚ್ಚದ ಕಸ ವಿಲೇವಾರಿ ವಾಹನ ಪೂಜೆ, 3.5ಲಕ್ಷ ರೂ ವೆಚ್ಚದಲ್ಲಿ ಕಸದ ಡಬ್ಬಿಗಳ ವಿತರಣೆ, ಅಮೃತ ಗ್ರಾಮ ಯೋಜನೆಯಡಿ 10 ಲಕ್ಷ ರೂ ವೆಚ್ಚದಲ್ಲಿ ಡಿಜಿಟಲ್ ಗ್ರಂಥಾಲಯ, ಶಾಸಕ ಅನುದಾನದಡಿ 8ಲಕ್ಷ ರೂ ವೆಚ್ಚದಲ್ಲಿ ವ್ಯಾಯಾಮಶಾಲೆ, ನೀರಾವರಿ ನಿಗಮದ ಎಸ್‍ಸಿಪಿ ಟಿಎಸ್‍ಪಿ ಯೋಜನೆಯಡಿ 30ಲಕ್ಷ ರೂ ವೆಚ್ಚದ ಎರಡು ಸಮುದಾಯ ಭವನ, 11.7ಲಕ್ಷ ರೂ ವೆಚ್ಚದಲ್ಲಿ ಆಹಾರ ಧಾನ್ಯಗಳ ಗೋದಾಮಿನ ಗುದ್ದಲಿ ಪೂಜೆ, 17ಲಕ್ಷ ವೆಚ್ಚದಲ್ಲಿ ಸಚಿಜೀವಿನಿ ಶೇಡ್ ಪೂಜೆ, 11ಲಕ್ಷ ರೂ ವೆಚ್ಚದ ಕನ್ನಡ ಗಂಡು ಮಕ್ಕಳ ಶಾಲೆಯ ಅಡುಗೆ ಕೊಣೆ, 11ಲಕ್ಷ ವೆಚ್ಚದಲ್ಲಿ ಎರಡು ಹೈಟೇಕ ಶಾಲಾ ಶೌಚಾಲಯಗಳ ಉದ್ಘಾಟನೆ ಹಾಗೂ 74ಲಕ್ಷ ರೂ ವೆಚ್ಚದಲ್ಲಿ ಜಿಲ್ಲಾ ಪಂಚಾಯತ ಅನುದಾನದಡಿ 3 ಮತ್ತು ಉದ್ಯೋಗ ಖಾತ್ರಿ ಯೋಜನೆಯಡಿ 7 ಸೇರಿ ಒಟ್ಟು 10ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.
ಇದೆ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರು ಕಸ ವಿಲೇವಾರಿ ವಾಹನವನ್ನು ಚಲಾಯಿಸುವ ಮೂಲಕ ನೂತನ ವಾಹನ ಉದ್ಘಾಟಿಸಿ ಚಾಲನೆ ನೀಡಿ ಸ್ಥಳೀಯರ ಮನ ಗೆದ್ದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಪಾರ್ವತಿ ಯಲಿಗಾರ, ಉಪಾಧ್ಯಕ್ಷೆ ಲಗಮವ್ವ ಗೌಡನವರ, ಬಾಳನಾಯ್ಕ ನಾಯ್ಕ, ನಿಂಗಪ್ಪ ಕುರಬೇಟ, ಶಂಕರ ಕುರಬೇಟ, ಶಿವಲಿಂಗ ಪ್ರಭುನಟ್ಟಿ, ಬಸಗೌಡ ಪಾಟೀಲ, ಅಶೋಕ ಕಬಾಡಗಿ, ಬೋರಪ್ಪ ಬಂಗೆನ್ನವರ, ಗುರುಪಾದ ತಳ್ಳಿ ಸೇರಿದಂತೆ ಗ್ರಾಪಂ ಸದಸ್ಯರು, ಗ್ರಾಮದ ಹಿರಿಯರು ಸೇರಿದಂತೆ ಅನೇಕರು ಇದ್ದರು.

Related posts: