ಗೋಕಾಕ:ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇಂದಿನ ಯುವ ಪೀಳಿಗೆಯ ಮೇಲಿದೆ : ಶಿವಮಯಿ ಮತಾಜಿ
ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇಂದಿನ ಯುವ ಪೀಳಿಗೆಯ ಮೇಲಿದೆ : ಶಿವಮಯಿ ಮತಾಜಿ
ಗೋಕಾಕ ಜ 12 : ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇಂದಿನ ಯುವ ಪೀಳಿಗೆಯ ಮೇಲಿದೆ ಎಂದು ಇಲ್ಲಿನ ಶಾರದಾ ಶಕ್ತಿ ಪೀಠದ ಶಿವಮಯಿ ಮತಾಜಿ ಹೇಳಿದರು.
ಗುರುವಾರದಂದು ನಗರದ ಜ್ಞಾನ ಮಂದಿರದಲ್ಲಿ ಸಮೃದ್ಧಿ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜ ಹಾಗೂ ತುಕ್ಕಾರ ಸ್ಕೂಲ್ ಆಫ್ ನರ್ಸಿಂಗ್ ಗೋಕಾಕ ಮತ್ತು ಆರೋಗ್ಯ ನರ್ಸಿಂಗ್ ಮೆಡಿಕಲ್ ಕಾಲೇಜ ಮೂಡಲಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಪಸರಿಸಿದ ವಿವೇಕಾನಂದರು ಯುವಶಕ್ತಿಯ ಮೇಲೆ ಹೆಚ್ಚಿನ ವಿಶ್ವಾಸ ವಿಟ್ಟಿದ್ದರು ಅವರ ಆದರ್ಶಗಳನ್ನು ಮೆಚ್ಚಿ ಪಾಶ್ಚಿಮಾತ್ಯ ಸಹೋದರಿ ನಿವೇದಿತಾ ಭಾರತೀಯ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜಸೇವೆಗೆ ಮುಂದಾದರು.ನರ್ಸಿಂಗ್ ವಿದ್ಯಾರ್ಥಿಗಳು ತಮ್ಮ ವೃತ್ತಿ ಜೀವನದಲ್ಲಿ ಅವರಂತೆ ಸೇವಾ ಮನೋಭಾವದಿಂದ ರೋಗಿಗಳ ಸೇವೆ ಮಾಡುವಂತೆ ಹೇಳಿದರು.
ವೇದಿಕೆಯಲ್ಲಿ ಬೆಳಗಾವಿ ಬಿಮ್ಸ್ ನ ಡಾ.ಜ್ಞಾನೇಶ್ವರ ಕೆ.ಬಿ., ಸಂಸ್ಥೆಯ ಅಧ್ಯಕ್ಷ ಡಾ.ಮಹಾಂತೇಶ ಕಡಾಡಿ, ಕಾರ್ಯದರ್ಶಿ ಡಾ.ಮಯೂರಿ ಕಡಾಡಿ, ಪ್ರಾಚಾರ್ಯರಾದ ವಿಜಯಕುಮಾರ್ ಮಲಕನ್ನವರ, ಮಹಾಂತೇಶ ನಾಗನೂರಿ, ಮಹಾದೇವ ಬಡ್ರೋಳಿ ಇದ್ದರು.