ಗೋಕಾಕ:ಪಾಲಕರು ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಿ : ಗಜಾನನ ಮನ್ನಿಕೇರಿ
ಪಾಲಕರು ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಿ : ಗಜಾನನ ಮನ್ನಿಕೇರಿ
ಗೋಕಾಕ ಜ 30 : ಪಾಲಕರು ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಿ ಅವರನ್ನು ಒಳ್ಳೆಯ ನಾಗರಿಕರನ್ನಾಗಿ ಮಾಡುವಂತೆ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಗಜಾನನ ಮನ್ನಿಕೇರಿ ಹೇಳಿದರು.
ರವಿವಾರದಂದು ನಗರದ ಕ್ರೆಸೆಂಟ್ ಉರ್ದು ಹಾಗೂ ಆಂಗ್ಲ ಮಾಧ್ಯಮ ಶಾಲೆಯ 14ನೇ ವಾರ್ಷಿಕೋತ್ಸವ ಹಾಗೂ ಸ್ನೇಹ ಸಮ್ಮೇಳನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಇಂದಿನ ಸ್ವರ್ದಾತ್ಮಕ ಯುಗದಲ್ಲಿ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತದೆ. ಸರಕಾರ ಶೈಕ್ಷಣಿಕ ಪ್ರಗತಿಗೆ ಹಲವಾರು ಯೋಜನೆಗಳ ಅನುಷ್ಠಾನದೊಂದಿಗೆ ಶ್ರಮಿಸುತ್ತಿದೆ. ಅವುಗಳ ಸದುಪಯೋಗದಿಂದ ಮಕ್ಕಳಿಗೆ ಶಿಕ್ಷಣ ಕೊಡಿಸಿ ಅವರನ್ನು ಪ್ರತಿಭಾವಂತರಾಗಿ ಮಾಡಿ. ಸಂಸ್ಥೆಯ ಆಡಳಿತ ಮಂಡಳಿಯವರು ಅನಕ್ಷರಸ್ಥ ಹಾಗೂ ಆರ್ಥಿಕವಾಗಿ ಸದೃಢರಲ್ಲದಿದ್ದರೂ ಈ ಸಂಸ್ಥೆಯನ್ನು ಮಾದರಿಯಾಗಿ ಬೆಳೆಸುತ್ತಿರುವುದನ್ನು ಶ್ಲಾಘಿಸಿದ ಅವರು ಈ ಸಂಸ್ಥೆಗೆ ಎಲ್ಲರೂ ಸಹಕಾರ ನೀಡುವಂತೆ ಹೇಳಿದರು.
ವೇದಿಕೆಯಲ್ಲಿ ನಗರಸಭೆ ಸದಸ್ಯ ಕುತುಬುದ್ದೀನ ಗೋಕಾಕ, ನಜೀರ ಶೇಖ್ , ಮೋಶಿನ ಖೋಜಾ, ದಾದಪೀರ ಶಾಬಾಶಖಾನ, ಪರಶುರಾಮ ಭಗತ, ಪ್ರಮೋದ್ ಜೋಶಿ, ನೂರುಲ್ಲಾ ಕೋತವಾಲ, ಮಲಿಕ ಪೈಲವಾನ, ಸಂಸ್ಥೆಯ ಗೌರವಾಧ್ಯಕ್ಷ ಗುಲಾಬಸಾಬ ಮಕಾಂದಾರ, ಅಧ್ಯಕ್ಷ ನಜೀರ ಪೈಲವಾನ, ಪದಾಧಿಕಾರಿಗಳಾದ ಜಬೇರ ಪಟೇಲ್ , ಇಸ್ಮಾಯಿಲ್ ಮೋಕಾಶಿ, ಶಫೀ ಅವಟಿ, ಅಬ್ದುಲ್ ಪೀರಜಾದೆ, ಪೀರಜಿ ರಾಜಗೋಳಿ, ಇಮ್ರಾನ್ ಕಾಲೆಬಾಯಿ, ಮೋಹಮದ್ದಿ ಶೇಖ್, ಅಬ್ದುಲ್ ಕರೀಮ ಚಟ್ನಿ, ಗೌಸಖಾನ ಕಿತ್ತೂರಕರ ಇದ್ದರು.