ಗೋಕಾಕ:ರವಿವಾರದಂದು ನಗರದಲ್ಲಿ ಉಚಿತ ನರರೋಗ ಚಿಕಿತ್ಸಾ ಶಿಬಿರ
ರವಿವಾರದಂದು ನಗರದಲ್ಲಿ ಉಚಿತ ನರರೋಗ ಚಿಕಿತ್ಸಾ ಶಿಬಿರ
ಗೋಕಾಕ ಫೆ 7 : ಇಲ್ಲಿನ ಕೆಎಲ್ಇಎಸ್ ಆಸ್ಪತ್ರೆ (ಐಸಿಯು) ಘಟಕ ನ್ಯೂರೋಸರ್ಜರಿ ವಿಭಾಗ ಕೆಎಲ್ಇಎಸ್ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಬೆಳಗಾವಿ, ಕೆಎಲ್ಇ ಇನ್ಸ್ಟ ಟ್ಯುಟ್ ಆಫ್ ನರ್ಸಿಂಗ್ ಸಾಯಸ್ಸ ಗೋಕಾಕ, ಇಡಿಯನ್ ಮೆಡಿಕಲ್ ಅಸೋಸಿಯೇಷನ್ ಗೋಕಾಕ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮೂಡಲಗಿ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಘಟಪ್ರಭಾ ಇವುಗಳ ಸಂಯುಕ್ತಾಶ್ರಯದಲ್ಲಿ ರವಿವಾರ ದಿನಾಂಕ 11 ರಂದು ನಗರದ ಕೆಎಲ್ಇಎಸ್ ಆಸ್ಪತ್ರೆ ಆವರಣದಲ್ಲಿ ಉಚಿತ ನರರೋಗ ಚಿಕ್ಸಿತಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಎಲ್ಇ ನಿರ್ದೇಶಕ ಜಯಾನಂದ ಮುನ್ನವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಈ ಶಿಬಿರದಲ್ಲಿ ಎಲ್ಲಾ ಸರಕಾರಿ , ಖಾಸಗಿ ಆರೋಗ್ಯ ಯೋಜನೆಗಳು ಲಭ್ಯವಿದ್ದು, ಕೆಎಲ್ಇಎಸ್ ಆಸ್ಪತ್ರೆಯ ನುರಿತ ಅನುಭವಿ ವೈದ್ಯರ ತಂಡ ಸಮಾಲೋಚನೆ ಮತ್ತು ಮಾರ್ಗದರ್ಶನಕ್ಕೆ ಲಭ್ಯವಿರುತ್ತಾರೆ.
ಈ ಶಿಬಿರದಲ್ಲಿ ಬೆನ್ನು ನೋವು, ಕೆಳ ಬೆನ್ನು ನೋವು ಮತ್ತು ಕುತ್ತಿಗೆ, ಧೀರ್ಘಕಾಲದ ಬೆನ್ನು ನೋವು ಮತ್ತು ತಲೆ ನೋವು, ಅಪಘಾತದಿಂದ ಉಂಟಾದ ಮೆದುಳು / ಬೆನ್ನು ಮೂಳೆಯ ಗಾಯ, ಗರ್ಭಕಂಠ ಮತ್ತು ಸೊಂಟದ ಡಿಸ್ಕ್ ನೋವು, ನರಮಂಡಲಕ್ಕೆ ಸಂಬಂಧಿಸಿದ ಗಾಯ / ನೋವು, ಮಕ್ಕಳ ನರರೋಗ ಸಮಸ್ಯೆಗಳು, ಮೆದುಳಿನ ರಕ್ತನಾಳಗಳ ಸಮಸ್ಯೆಗಳು, ಸ್ಟ್ರೋಕ್, ಮೆದುಳಿನ ಮತ್ತು ಬೆನ್ನು ಮೂಳೆಯ ಗಡ್ಡೆ ಸೇರಿದಂತೆ ನರ ಸಂಬಂಧಿ ಸಮಸ್ಯೆಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಕಾರಣ ನರ ಸಮಸ್ಯೆಯಿಂದ ಬಳಲುತ್ತಿರುವ ಸಾರ್ವಜನಿಕರು ಈ ಉಚಿತ ಶಿಬಿರದಲ್ಲಿ ಭಾಗವಹಿಸಿ ಈ ಶಿಬಿರದ ಲಾಭವನ್ನು ಪಡೆಯಬೇಕೆಂದು ಜಯಾನಂದ ಮುನ್ನವಳ್ಳಿ ಪ್ರಕಟಣೆಯಲ್ಲಿ ಕೋರಿದ್ದಾರೆ.