ಗೋಕಾಕ:ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ
ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ
ಗೋಕಾಕ ಫೆ 8 : ಅಕ್ರಮವಾಗಿ ಗಾಂಜಾ ಮಾರಟದಲ್ಲಿ ತೊಡಗಿದ್ದ ವ್ಯಕ್ತಿಯೊರ್ವನನ್ನು ಗೋಕಾಕ ಶಹರ ಪೋಲಿಸ್ ಠಾಣೆ ಪೋಲಿಸರು ಬಂಧಿಸಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ನಗರದಲ್ಲಿ ಅಕ್ರಮವಾಗಿ ಗಾಂಜಾ ಮಾರಟದಲ್ಲಿ ತೊಡಗಿದ್ದ ಇಸ್ಮಾಯಿಲ್ ಶಭಾಶಖಾನ ಎಂಬ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತ ಆರೋಪಿಯ ಬಳಿ 192 ಗ್ರಾಂ ಗಾಂಜಾ ವಶಪಡಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಪಿಎಸ್‌ಐ ಎಮ್ ಡಿ ಘೋರಿ, ಸಿಬ್ಬಂಧಿಗಳಾದ ರಮೇಶ ಮುರನಾಳ, ಮಾರುತಿ ಕೆಂಪಣ್ಣನವರ, ನಾಗರಾಜ ಬೆಳಗಲಿ, ಚಂದ್ರು ಬಿರಾದಾರ ಸೇರಿದಂತೆ ಇತರರು ಇದ್ದರು.