RNI NO. KARKAN/2006/27779|Thursday, December 26, 2024
You are here: Home » breaking news » ಗೋಕಾಕ:ಲಕ್ಷ್ಮೀ ಹೆಬ್ಬಾಳಕರ ಜನ ಪ್ರತಿನಿಧಿಯಾಗಲು ಅರ್ಹರಲ್ಲ : ಕರವೇ ಅಧ್ಯಕ್ಷ ಖಾನಪ್ಪನವರ

ಗೋಕಾಕ:ಲಕ್ಷ್ಮೀ ಹೆಬ್ಬಾಳಕರ ಜನ ಪ್ರತಿನಿಧಿಯಾಗಲು ಅರ್ಹರಲ್ಲ : ಕರವೇ ಅಧ್ಯಕ್ಷ ಖಾನಪ್ಪನವರ 

ಲಕ್ಷ್ಮೀ ಹೆಬ್ಬಾಳಕರ ಜನ ಪ್ರತಿನಿಧಿಯಾಗಲು ಅರ್ಹರಲ್ಲ : ಕರವೇ ಅಧ್ಯಕ್ಷ ಖಾನಪ್ಪನವರ
ಗೋಕಾಕ ಅ 13: ಮನೆ ಮನೆಗೆ ಕಾಂಗ್ರೆಸ್ ಪುಸ್ತಕವನ್ನು ಮರಾಠಿ ಭಾಷೆಯಲ್ಲಿ ‘ಘರ್ ಘರಿ ಕಾಂಗ್ರೆಸ್’  ಹೆಸರಿನಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮನೆ ಮನೆಗೆ ತಲುಪಿಸುತ್ತಿರುವ ಲಕ್ಷ್ಮೀ ಹೆಬ್ಬಾಳಕರ ಅವರ ನಾಡ ವಿರೋಧಿ ಕ್ರಮ ತರವಲ್ಲ ಎಂದು ಕರವೇ ಗೋಕಾಕ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮರಾಠಿ ಭಾಷೆಯಲ್ಲಿ ಕಾಂಗ್ರೆಸ್ ಸಾಧನೆಯ ಮಾಹಿತಿ ಪತ್ರಿಕೆಯನ್ನು ನೀಡುತ್ತಿರುವ ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್‌ ವೋಟಿಗಾಗಿ ಮರಾಠಿ ಪ್ರೇಮ ಮೆರೆಯುತ್ತಿರುವುದು ಖಂಡನೀಯ ಕನ್ನಡವನ್ನು ಅವಮಾನಿಸಿರುವ ಇವರು ಜನಪ್ರತಿನಿಧಿಯಾಗಲು ಅರ್ಹರಲ್ಲ

ಕೆಪಿಸಿಸಿ ಅವರು ಕನ್ನಡದಲ್ಲಿ ಪ್ರಕಟಿಸಿರುವ ಮನೆ ಮನೆಗೆ ಕಾಂಗ್ರೇಸ ಮಾಹಿತಿ ಪತ್ರಿಕೆಯನ್ನು ಮರಾಠಿ ಭಾಷೆಯಲ್ಲಿ ಮುದ್ರಿಸಿ ಹಂಚುತ್ತಿರುವ ಹೆಬ್ಬಾಳಕರ ಅವರ ಮೇಲೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಸೂಕ್ತ ಕ್ರಮ ಜರುಗಿಸಿ ಅದನ್ನು ತಕ್ಷಣ ತಡೆಯಬೇಕು , ಜಿಲ್ಲಾ ಕಾಂಗ್ರೆಸ್ ನಾಯಕರು ಹೆಬ್ಬಾಳಕರ ಅವರ ಕ್ರಮ ಸರ್ಮಥಿಸುವುದನ್ನು ಬಿಟ್ಟು ಅವರಿಗೆ ಬುದ್ಧಿ ಹೇಳಬೇಕು . ವೋಟಿಗಾಗಿ ಮರಾಠಿಗರನ್ನು ಓಲೈಸುತ್ತಿರುವ ಲಕ್ಷ್ಮೀ ಹೆಬ್ಬಾಳಕರ ಅವರು ಈ ಕೂಡಲೇ ಅದನ್ನು ಸರಿಪಡಿಸಿಕೊಂಡು ಕನ್ನಡದಲ್ಲಿಯೇ ಮಾಹಿತಿ ಪತ್ರಿಕೆಗಳನ್ನು ಹಂಚಬೇಕು ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಅವರ ವಿರುದ್ಧ ಪ್ರಚಾರ ಮಾಡಲಾಗುವುದೆಂದು ಖಾನಪ್ಪನವರ ಕಿಡಿಕಾರಿದ್ದಾರೆ

Related posts: