RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಫಲಿತಾಂಶ ಸಾಧಿಸಲು ಕ್ರೀಯಾತ್ಮಕ ಚಟುವಟಿಕೆಗಳು ಸಹಕಾರಿಯಾಗಿವೆ : ಬಿಇಒ ಬಳಗಾರ

ಗೋಕಾಕ:ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಫಲಿತಾಂಶ ಸಾಧಿಸಲು ಕ್ರೀಯಾತ್ಮಕ ಚಟುವಟಿಕೆಗಳು ಸಹಕಾರಿಯಾಗಿವೆ : ಬಿಇಒ ಬಳಗಾರ 

ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಫಲಿತಾಂಶ ಸಾಧಿಸಲು   ಕ್ರೀಯಾತ್ಮಕ ಚಟುವಟಿಕೆಗಳು  ಸಹಕಾರಿಯಾಗಿವೆ : ಬಿಇಒ ಬಳಗಾರ 

ಗೋಕಾಕ ಫೆ 14 : ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯು  ಎಸ್ ಎಸ್ ಎಲ್ ಸಿ ಉತ್ತಮ ಫಲಿತಾಂಶ ಸಾಧಿಸಲು ವಿವಿಧ  ಕ್ರೀಯಾತ್ಮಕ ಚಟುವಟಿಕೆಗಳು  ಸಹಕಾರಿಯಾಗಿವೆ  ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ‌.ಬಳಗಾರ  ಹೇಳಿದರು
ಸೋಮವಾರದಂದು ನಗರದ ಮಯೂರ ಶಾಲೆಯ  ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ  ಮಿಸ್ ಕಾಲ ಮಾಡಿ ಉತ್ತರ ಪಡೆಯಿರಿ ಎಂಬ ವಿನೂತನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ  ವಲಯದಲ್ಲಿ  ಕೈಗೊಂಡ ಸಾಕಷ್ಟು  ಕೆಲಸಗಳು ರಾಜ್ಯಕ್ಕೆ ಮಾದರಿಯಾಗಿರುವದು ಹೆಮ್ಮೆಯ ಸಂಗತಿ ಎಂದ ಅವರು ಶಿಕ್ಷಕರು ಕಡಿಮೆ ಫಲಿತಾಂಶ ಪಡೆಯುವ ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿ ಅವರಿಗೆ ಉತ್ತೇಜನ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವರನ್ನು ಸಹ ಉತ್ತಮ ಸಾಧನೆ ಮಾಡಲಿಕ್ಕೆ ಪ್ರೋತ್ಸಾಹಿಸಿಬೇಕು. ಗ್ರಾಮೀಣ ಭಾಗದ ಮಕ್ಕಳ ಬಗ್ಗೆಯೂ ಸಹ ಹೆಚ್ಚಿನ ಆಸಕ್ತಿ ಹೊಂದಿ ಅವರ  ಶೈಕ್ಷಣಿಕ ಪ್ರಗತಿಗೆ ಪ್ರತಿಯೊಬ್ಬ ಶಿಕ್ಷಕರು ಗಮನ ಹರಿಸಿ ವಿದ್ಯಾರ್ಥಿಗಳ  ಬುದ್ಧಿಮಟ್ಟವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಈ ಕ್ರಮ   ನೂರಕ್ಕೆ ನೂರರಷ್ಟು ಫಲಿತಾಂಶ ಬರಲು ಸಹಕಾರಿಯಾಗಲಿದೆ.  ಶಿಕ್ಷಕರು ಮನಸ್ಸು ಮಾಡಿದರೆ ಏನ್ನೇಲ್ಲಾ ಮಾಡಲು ಸಾಧ್ಯ ಆ ದಿಸೆಯಲ್ಲಿ ಎಲ್ಲ ಶಿಕ್ಷಕರು ರಚನಾತ್ಮಕ ಕಾರ್ಯಗಳನ್ನು ಹಮ್ಮಿಕೊಂಡು ಎಸ್.ಎಸ್.ಎಲ್.ಸಿ ಮಕ್ಕಳ ಉಜ್ವಲ ಭವಿಷ್ಯಕ್ಕೆ ಶ್ರಮಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ  ಕ್ಷೇತ್ರಸಮನ್ವಯಾಧಿಕಾರಿ ಎಂ.ಬಿ.ಪಾಟೀಲ, ಎಲ್. ಬಿ. ತೋರಣಗಟ್ಟಿ, ಬಿ.ಎಸ್.ಬೋಗುಣಿ, ಬಿ ಕೆ.ಕುಲಕರ್ಣಿ,  ಎನ್‌ಆರ್. ಪಾಟೀಲ, ಸತ್ತಿಗೇರಿ, ವಾಸೇದಾರ,  ಮೇಸ್ತ್ರಿ, ವಣ್ಣೂರ, ಮಾಳಗೇರ ಸೇರಿದಂತೆ ಇತರರು  ಉಪಸ್ಥಿತರಿದ್ದರು.
ಶಿಕ್ಷಕ ಆರ್.ಎಲ್.ಮಿರ್ಜಿ ಕಾರ್ಯಕ್ರಮವನ್ನು ನಿರೂಪಿಸಿ ,ವಂದಿಸಿದರು

Related posts: