RNI NO. KARKAN/2006/27779|Wednesday, December 25, 2024
You are here: Home » breaking news » ಗೋಕಾಕ:ವನ್ಯಜೀವಿ ರಕ್ಷಣೆಗೆ ಎಲ್ಲರೂ ಮುಂದಾಗಿ : ಅರಣ್ಯ ಇಲಾಖೆಗೆ ಗರುಡ ಪಕ್ಷಿ ಹಸ್ತಾಂತರಿಸಿದ ಯುವಕ ರಮೇಶ

ಗೋಕಾಕ:ವನ್ಯಜೀವಿ ರಕ್ಷಣೆಗೆ ಎಲ್ಲರೂ ಮುಂದಾಗಿ : ಅರಣ್ಯ ಇಲಾಖೆಗೆ ಗರುಡ ಪಕ್ಷಿ ಹಸ್ತಾಂತರಿಸಿದ ಯುವಕ ರಮೇಶ 

ವನ್ಯಜೀವಿ ರಕ್ಷಣೆಗೆ ಎಲ್ಲರೂ ಮುಂದಾಗಿ : ಅರಣ್ಯ ಇಲಾಖೆಗೆ ಗರುಡ ಪಕ್ಷಿ ಹಸ್ತಾಂತರಿಸಿದ ಯುವಕ ರಮೇಶ

ಗೋಕಾಕ ಅ. 13 : ವನ್ಯ ಜೀವಿಗಳಾದ ಪಕ್ಷಿ, ಪ್ರಾಣಿಗಳ ರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕೆಂದು ರಮೇಶ ಖಾನಪ್ಪನವರ ಹೇಳಿದರು. ಗಂಭೀರವಾಗಿ ಗಾಯವಾಗಿ ಬಿದ್ದ ಗರುಡ ಪಕ್ಷಿಯನ್ನು ಆರೈಕೆಗೊಳಿಸಿ ಶುಕ್ರವಾರ ಮುಂಜಾನೆ ಅರಣ್ಯ ಇಲಾಖೆಗೆ ಹಸ್ತಾಂತರಿಸಿ ಮಾತನಾಡಿದರು.

ಪರಿಸರ ರಕ್ಷಣೆಯ ಜೊತೆಗೆ ವನ್ಯ ಜೀವಿಗಳ ಬಗ್ಗೆ ಜಾಗೃತಿ ಮೂಡಿಸಿ ಅವುಗಳ ರಕ್ಷಣೆಗೆ ಮನುಕುಲ ಮುಂದಾಗಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕಾಗಿದೆ. ಅರಣ್ಯ ಇಲಾಖೆಯವರು ಸಹ ಇದರ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಹೇಳಿದರು.

ಗರುಡ ಪಕ್ಷಿಯನ್ನು ಪಡೆದ ವಲಯ ಅರಣ್ಯ ಅಧಿಕಾರಿ ಕೆಂಪಣ್ಣ ವಣ್ಣೂರ ಅವರು ಇದನ್ನು ಭೂತರಾಮನಟ್ಟಿಯಲ್ಲಿರುವ ಪ್ರಾಣಿ ಸಂಗ್ರಾಹಲಯಕ್ಕೆ ರವಾನಿಸಿದರು. ಕಳೆದ ಒಂದು ತಿಂಗಳ ಹಿಂದೆ ನಗರದ ಹೊರ ವಲಯದ ಮೆಹದಿ ನಗರದಲ್ಲಿ ಗಂಭೀರವಾಗಿ ಗಾಯವಾಗಿ ಬಿದ್ದಿದ್ದ ಗರುಡ ಪಕ್ಷಿಯನ್ನು ತಂದಿದ್ದ ಯುವಕ ರಮೇಶ ಖಾನಪ್ಪನವರ ಗರುಡ ಪಕ್ಷಿಗೆ ಔಷಧೋಪಚಾರ ಮಾಡಿ ರಕ್ಷಿಸಿದ್ದನ್ನು ಒಂದು ತಿಂಗಳನಿಂದ ಔಷಧೋಪಚಾರ ಪಡೆದು ಸಂಪೂರ್ಣ ಗುಣಮುಖವಾಗಿರುವ ಗರುಡ ಪಕ್ಷಿಯನ್ನು ಇಂದು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಕ.ರ.ವೇ. ತಾಲೂಕ ಅಧ್ಯಕ್ಷ ಬಸವರಾಜ ಖಾನಪ್ಪನವರ, ಸಾಧಿಕ ಹಲ್ಯಾಳ, ಬಸವರಾಜ ಹತ್ತರಕಿ, ಅಬ್ಬಾಸ್ ದೇಸಾಯಿ, ಮುಗುಟ ಫೈಲವಾನ, ವನಪಾಲಕ ಇಂಗಳಗಿ, ಅರಣ್ಯ ಸತೀಶ ಮುಂಗರವಾಡಿ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related posts: