RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಖಾಸಗಿ ಯೂಟ್ಯೂಬ್ ವಾಹಿನಿಯ ಸೈಯದ್ ಪ್ರತಿಕೃತಿ ದಹಿಸಿ ಗೋಕಾಕದಲ್ಲಿ ಪ್ರತಿಭಟನೆ

ಗೋಕಾಕ:ಖಾಸಗಿ ಯೂಟ್ಯೂಬ್ ವಾಹಿನಿಯ ಸೈಯದ್ ಪ್ರತಿಕೃತಿ ದಹಿಸಿ ಗೋಕಾಕದಲ್ಲಿ ಪ್ರತಿಭಟನೆ 

ಖಾಸಗಿ ಯೂಟ್ಯೂಬ್ ವಾಹಿನಿಯ ಸೈಯದ್ ಪ್ರತಿಕೃತಿ ದಹಿಸಿ ಗೋಕಾಕದಲ್ಲಿ ಪ್ರತಿಭಟನೆ

ಗೋಕಾಕ ಫೆ 24 : ಖಾಸಗಿ ಯೂಟ್ಯೂಬ್ ವಾಹಿನಿಯೊಂದರಲ್ಲಿ ಮಹರ್ಷಿ ಶ್ರೀ ಭಗೀರಥ ಮಹಾರಾಜರ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಕೆ ಮಾಡಿರುವುದನ್ನು ಖಂಡಿಸಿ ಗೋಕಾಕ ತಾಲೂಕಾ ಶ್ರೀ ಭಗೀರಥ ಉಪ್ಪಾರ ಸಂಘದ ನೇತ್ರತ್ವದಲ್ಲಿ ಬೃಹತ್ ಪ್ರತಿಭಟನೆ ಜರುಗಿತು.
ಗುರುವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ಬೃಹತ್ ಸಂಖ್ಯೆಯಲ್ಲಿ ಸೇರಿದ ಗೋಕಾಕ ತಾಲೂಕಿನ ಉಪ್ಪಾರ ಸಮಾಜದ ಬಾಂಧವರು ಮಾನವ ಸರಪಳಿ ನಿರ್ಮಿಸಿ, ಕೆಲ ಕಾಲ ರಸ್ತೆ ನಡೆಸಿ, ಖಾಸಗಿ ಯೂಟ್ಯೂಬ್ ವಾಹಿನಿಯ ಸೈಯದ್ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು. ನಂತರ ಅಲ್ಲಿಂದ ಪ್ರತಿಭಟನಾ ಮೆರವಣಿಗೆಯೂ ತಾಲೂಕ ಆಡಳಿತದ ಕಚೇರಿಗೆ ತೆರಳಿ ತಹಶೀಲದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗೋಕಾಕ ತಾಲೂಕಾ ಉಪ್ಪಾರ ಸಂಘದ ತಾಲೂಕಾಧ್ಯಕ್ಷ ಶಿವಪುತ್ರ ಜಕಬಾಳ ಅವರು ಮಾತನಾಡಿ, ಕಳೆದ ಕೆಲದಿನಗಳ ಹಿಂದೆ ತಾಲೂಕಿನ ಘಟಪ್ರಭಾ ಪಟ್ಟಣದ ಖಾಸಗಿ ಯೂಟ್ಯೂಬ್ ವಾಹಿನಿಯ ಸೈಯದ್ ಎನ್ನುವ ವ್ಯಕ್ತಿ ತಮ್ಮ ನಂ 1 ಕನ್ನಡ ನ್ಯೂಸ್ ಚಾನಲ್‍ನಲ್ಲಿ ರಾಜಋಷಿ ಶ್ರೀ ಭಗೀರಥರ ಕುರಿತು ಅವಹೇಳನಕಾರಿಯ ಪದಗಳನ್ನು ಬಳಕೆ ಮಾಡಿ ಭಗೀರಥ ಉಪ್ಪಾರ ಸಮಾಜಕ್ಕೆ ನೋವುನ್ನುಂಟು ಮಾಡಿದ್ದಾರೆ. ಸುದ್ದಿ ಮಾಡುವ ಭರದಲ್ಲಿ ಸಮಾಜದ ಸ್ವಾಸ್ಥವನ್ನು ಹಾಳು ಮಾಡಿದಲ್ಲದೇ ಧಮುಕಿ ಕೂಡಾ ಹಾಕಿರುತ್ತಾರೆ. ಇದರಿಂದ ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗಿದ್ದು ಇರುತ್ತದೆ. ಇದರಿಂದ ಉಪ್ಪಾರ ಸಮಾಜದ ಜನರ ಮನಸ್ಸಿಗೆ ತೀವೃತ್ತರ ನೋವುಂಟಾಗಿ ಸಮಾಜದ ಮೇಲೆ ದುಷ್ಪರಿಣಾಮ ಉಂಟಾಗಿದೆ. ಗೌರವದಿಂದ ಜೀವನ ಮಾಡುತ್ತಿರುವ ನಮ್ಮ ಸಮಾಜವನ್ನೆ ಗುರಿಯಾಗಿಸಿಕೊಂಡು ತಮ್ಮ ರಾಜಕೀಯವಾಗಿ ಯಾರನ್ನು ಓಲೈಕೆ ಮಾಡುವ ಹುನ್ನಾರದಿಂದ ಈ ಮಾತನ್ನು ಆಡಿದ್ದು ಇದು ಉಪ್ಪಾರ ಸಮಾಜಕ್ಕೆ ಮಾಡಿದ ಘೋರ ಅಪಮಾನವಾಗಿದೆ ಎಂದು ಹೇಳಿದರು.
ಖಾಸಗಿ ಯೂಟ್ಯೂಬ್ ವಾಹಿನಿಯ ಸೈಯದ್ ಅವರ ವಿರುದ್ಧ ಈಗಾಗಲೇ ಗೋಕಾಕ ಉಪವಿಭಾಗದ ವಿವಿಧ ಪೋಲಿಸ್ ಠಾಣೆಗಳಲ್ಲಿ ದೂರನ್ನು ದಾಖಲಿಸಲಾಗಿದ್ದು, ಆತನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಆತನ ಚಾನಲ್ ನಿರ್ಬಂಧಿಸಿ, ಆತನನ್ನು ಗಡಿಪಾರು ಮಾಡಬೇಕು. ಒಂದು ವೇಳೆ ಪೋಲಿಸ್ ಇಲಾಖೆ ಕ್ರಮ ವಹಿಸದೇ ಇದ್ದಲ್ಲಿ ರಾಜ್ಯಧ್ಯಾತಂತ್ಯ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಗೋಕಾಕ ತಾಲೂಕಾ ಶ್ರೀ ಭಗೀರಥ ಉಪ್ಪಾರ ಸಂಘದ ಉಪಾಧ್ಯಕ್ಷರಾದ ಅಡಿವೆಪ್ಪ ಕಿತ್ತೂರ, ಕುಶಾಲ ಗುಡೇನ್ನವರ, ಮುಖಂಡರಾದ ಭೀಮಶಿ ಹಂದಿಗುಂದ, ಶಂಕರ ಬಿಲಕುಂದಿ, ವಿಠ್ಠಲ ಸವದತ್ತಿ, ಪರಸಪ್ಪ ಚೂನನ್ನವರ, ಸದಾಶಿವ ಗುದಗಗೋಳ, ಮಲ್ಲಿಕಾರ್ಜುನ ಚೌಕಶಿ, ಭರಮಣ್ಣ ಉಪ್ಪಾರ, ವಿಷ್ಣು ಲಾತೂರ, ಲಕ್ಷ್ಮಣ ಬೂದಿಗೊಪ್ಪ, ಮುತ್ತೆಪ್ಪ ಕುಳ್ಳೂರ, ಯಲ್ಲಪ್ಪ ಹೆಜ್ಜೆಗಾರ, ರಮೇಶ ಬಡೆಪ್ಪಗೋಳ, ಕೃಷ್ಣಾ ಖಾನಪ್ಪನ್ನವರ ಸೇರಿದಂತೆ ಅನೇಕರು ಇದ್ದರು.

Related posts: