ಗೋಕಾಕ:ರೋಟರಿ ಸಂಸ್ಥೆ ಶೈಕ್ಷಣಿಕ , ಆರೋಗ್ಯ ಸೇರಿದಂತೆ ಸಾಮಾಜಿಕ ಕಳಕಳಿಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ : ಸತೀಶ ಬೆಳಗಾವಿ
ರೋಟರಿ ಸಂಸ್ಥೆ ಶೈಕ್ಷಣಿಕ , ಆರೋಗ್ಯ ಸೇರಿದಂತೆ ಸಾಮಾಜಿಕ ಕಳಕಳಿಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ : ಸತೀಶ ಬೆಳಗಾವಿ
ಗೋಕಾಕ ಫೆ 24 : ರೋಟರಿ ಸಂಸ್ಥೆ ಶೈಕ್ಷಣಿಕ , ಆರೋಗ್ಯ ಸೇರಿದಂತೆ ಸಾಮಾಜಿಕ ಕಳಕಳಿಯ ಕಾರ್ಯಗಳಲ್ಲಿ ಜಗತ್ತಿನಾದ್ಯಂತ ತೊಡಗಿಸಿಕೊಂಡಿದೆ ಎಂದು ರೋಟರಿ ಸದಸ್ಯ ಸತೀಶ ಬೆಳಗಾವಿ ಹೇಳಿದರು.
ಗುರುವಾರದಂದು ನಗರದ ಜಿ.ಆರ್.ಬಿ.ಸಿ.ಕಾಲನಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತಾರಾಷ್ಟ್ರೀಯ ರೋಟರಿ ಸಂಸ್ಥಾಪನ ದಿನಾಚರಣೆಯ ನಿಮಿತ್ತ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳ ಸರಕಾರಿ ಶಾಲೆಗಳಿಗೆ ಯೂರೋಪಿನ್ಸ ರವರ ಸಹಯೋಗದೊಂದಿಗೆ 59 ಗ್ರೀನ್ ಬೋರ್ಡಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು , ಸಂಘಸಂಸ್ಥೆಗಳು ಹಾಗೂ ಸರಕಾರದ ಸೌಲಭ್ಯಗಳ ಸದುಪಯೋಗದಿಂದ ಪ್ರತಿಭಾವಂತರಾಗಿ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಿರೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ಸತೀಶ್ ನಾಡಗೌಡ, ರೋಟರಿ ಸೇವಾ ಸಂಘದ ಕಾರ್ಯದರ್ಶಿ ಸೋಮಶೇಖರ್ ಮಗದುಮ್ಮ, ಮುಖ್ಯೋಪಾಧ್ಯಾಯ ಎಸ್.ಎ.ಮುತಾಲಿಕದೇಸಾಯಿ ಇದ್ದರು.