ಗೋಕಾಕ:ಸೋಮವಾರ ದಿನಾಂಕ 6 ರಂದು ಧರ್ಮಸ್ಥಳದ ಮಂಜುನಾಥ್ ಸ್ವಾಮಿಗಳ ಸನ್ನಿಧಿಯಲ್ಲಿ ಬೆಂಬಲಿಗರೊಂದಿಗೆ ಆಣೆ ಪ್ರಮಾಣ : ಅಶೋಕ ಪೂಜಾರಿ
ಸೋಮವಾರ ದಿನಾಂಕ 6 ರಂದು ಧರ್ಮಸ್ಥಳದ ಮಂಜುನಾಥ್ ಸ್ವಾಮಿಗಳ ಸನ್ನಿಧಿಯಲ್ಲಿ ಬೆಂಬಲಿಗರೊಂದಿಗೆ ಆಣೆ ಪ್ರಮಾಣ : ಅಶೋಕ ಪೂಜಾರಿ
ಗೋಕಾಕ ಮಾ 4 : ಸೋಮವಾರ ದಿನಾಂಕ 6 ರಂದು ಧರ್ಮಸ್ಥಳದ ಮಂಜುನಾಥ್ ಸ್ವಾಮಿಗಳ ಸನ್ನಿಧಿಯಲ್ಲಿ ಬೆಂಬಲಿಗರೊಂದಿಗೆ ಆಣೆ ಪ್ರಮಾಣ ಮಾಡಲಾಗುವುದು ಎಂದು ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಹೇಳಿದರು.
ಶನಿವಾರದಂದು ನಗರದ ಜ್ಞಾನಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮತಕ್ಷೇತ್ರವನ್ನು ಆಡಳಿತ ವ್ಯವಸ್ಥೆ ಕಪ್ಪಿಮುಷ್ಠಿಯಿಂದ ಬಿಡಿಸುವ ಉದ್ದೇಶದಿಂದ ನಾಲ್ಕು ಚುನಾವಣೆ ಸ್ವರ್ಧಿಸಿ ಸೋತ್ತಿದ್ದು, ಇದು ನನ್ನ ಸೋಲ್ಲಲ್ಲಾ ಆಡಳಿತಯಂತ್ರ ಸೋಲು , ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು ಗೆಲುವು ಇರುತ್ತದೆ. ಆದರೆ ಕೆಲವರು ಚುನಾವಣೆ ಎರಡು ದಿನ ಇರುವಾಗಲೇ ಪ್ರತಿಸ್ಪರ್ಧಿಯಿಂದ ಹಣ ಪಡೆಯುತ್ತಾರೆ ಎಂದು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಒಂದು ಸುಳ್ಳನ್ನು ಸಾವಿರ ಸಲ ಹೇಳಿದರು ಅದು ಸತ್ಯವೆನಿಸುತ್ತದೆ. ಉಪ ಚುನಾವಣೆಯಲ್ಲಿ ನನ್ನ ಮನೆ ದೇವರ ಮೇಲೆ ಪ್ರಮಾಣ ಮಾಡಿದ್ದರು ಈಗಲೂ ಸಹ ನನ್ನ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ಪಕ್ಷದ ಎಲ್ಲಾ ನಾಯಕರಿಗೂ ನನ್ನ ವಿರುದ್ಧ ಸುಳ್ಳು ಹೇಳುತ್ತಿದ್ದಾರೆ. ನಾನು ಚುನಾವಣೆಯ ಕೊನೆಯ ದಿನವರೆಗೆ ಸಹ ನಾನು ಪ್ರಮಾಣಿಕವಾಗಿ ಕಾರ್ಯ ಮಾಡಿದ್ದೇನೆ. ನನ್ನ ಮೇಲೆ ನನ್ನ ಅಭಿಮಾನಿಗಳು, ಕಾರ್ಯಕರ್ತರು ವಿಶ್ವಾಸ ವಿಟ್ಟಿದ್ದಾರೆ. ಆ ಸುಳ್ಳನ್ನು ಅಳಿಸಲು ಸೋಮವಾರ ಮಾ 6 ರಂದು ಧರ್ಮಸ್ಥಳದ ಮಂಜುನಾಥ್ ಸ್ವಾಮಿಗಳ ಸನ್ನಿಧಿಯಲ್ಲಿ ಕಳೆದ ಉಪ ಚುನಾವಣೆಯಲ್ಲಿ ನನ್ನ ಪ್ರತಿಸ್ಪರ್ಧಿಯ ಕಡೆಯಿಂದ ಹಣ ಪಡೆದಿಲ್ಲ ಎಂದು ಆಣೆ ಪ್ರಮಾಣ ಮಾಡುತ್ತಿದ್ದೇನೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಮಲಪ್ಪ ಜಟ್ಟೇನ್ನವರ, ಭೀರಪ್ಪ ನೋಗೋಜಿ, ಸಿದ್ದಪ್ಪ ನಾಯಕ, ನಿಂಗಪ್ಪ ಅಮಿನಬಾಂವಿ, ಸಂತೋಷ ಬನ್ನೂರ ಇದ್ದರು.