ಗೋಕಾಕ:ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮಹತ್ವದಾಗಿದೆ : ಲಕ್ಷ್ಮಿ ಹಿರೇಮಠ
ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮಹತ್ವದಾಗಿದೆ : ಲಕ್ಷ್ಮಿ ಹಿರೇಮಠ
ಗೋಕಾಕ ಮಾ 10 : ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮಹತ್ವದಾಗಿದೆ ಎಂದು ಇಲ್ಲಿನ ಉಪ ಕಾರಾಗೃಹದ ಅಧೀಕ್ಷಕಿ ಲಕ್ಷ್ಮಿ ಹಿರೇಮಠ ಹೇಳಿದರು.
ಗುರುವಾರದಂದು ನಗರದ ಬಸವ ಮಂದಿರದಲ್ಲಿ ಭಾವಯಾನ್ ಮಹಿಳಾ ಸಾಹಿತ್ಯ ಮತ್ತು ಸಂಸ್ಕೃತಿಕ ವೇದಿಕೆಯವರು ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಎಲ್ಲಾ ಕ್ಷೇತ್ರದಲ್ಲಿಯು ಮಹಿಳೆಯರಿಗೂ ಸಮಾನ ಅವಕಾಶ ದೊರೆಯಬೇಕು ಅದನ್ನು ಸದುಪಯೋಗ ಪಡೆಸಿಕೊಳ್ಳಲು ಮುಂದೆ ಬರಬೇಕು. ಆತ್ಮ ವಿಶ್ವಾಸ ಹಾಗೂ ಧೈರ್ಯದಿಂದ ಪ್ರಯತ್ನಶೀಲರಾದರೆ ಸಾಧಕರಾಗುತ್ತಿರಿ. ಹಿಂದೆ ನಾಗರಿಕತೆಗಳು ಪುರುಷರಿಂದ ಪ್ರಾರಂಭಗೊಂಡರೆ ಮುಂದೆ ಮಹಿಳೆಯರಿಂದ ಪ್ರಾರಂಭವಾಗುತ್ತವೆ ಎಂದು ಹೇಳಿದರು.
ವೇದಿಕೆಯಲ್ಲಿ ಬೆಂಗಳೂರಿನ ವೇಟ್ ಪ್ಲೀಲ್ಡ ಠಾಣೆಯ ಪಿಎಸ್ಐ ವಂದನಾ ಕಲಗುಡಿ, ಭಾವಯಾನ್ ವೇದಿಕೆಯ ಗೌರವಾಧ್ಯಕ್ಷೆ ಪುಷ್ಪಾ ಮುರಗೋಡ, ಅಧ್ಯಕ್ಷೆ ಡಾ.ಮಹಾನಂದ ಪಾಟೀಲ ಹಾಗೂ ಶಂಕುತಲಾ ಹಿರೇಮಠ, ಶಾಂತಾ ಹುರಕಡ್ಲಿ ಇದ್ದರು.