ಗೋಕಾಕ:ಕ್ರೈಸ್ತ ಸಮಾಜದ ರುದ್ರಭೂಮಿ ಕಾಮಗಾರಿಗೆ ಅಂಬಿರಾವ ಪಾಟೀಲ ಮತ್ತು ಅಮರನಾಥ ಜಾರಕಿಹೊಳಿ ಅವರಿಂದ ಚಾಲನೆ
ಕ್ರೈಸ್ತ ಸಮಾಜದ ರುದ್ರಭೂಮಿ ಕಾಮಗಾರಿಗೆ ಅಂಬಿರಾವ ಪಾಟೀಲ ಮತ್ತು ಅಮರನಾಥ ಜಾರಕಿಹೊಳಿ ಅವರಿಂದ ಚಾಲನೆ
ಗೋಕಾಕ ಮಾ 11 : ಕ್ರೈಸ್ತ ಸಮಾಜದ ರುದ್ರಭೂಮಿಗೆ ಶಾಸಕರ ಅನುದಾನದಡಿಯಲ್ಲಿ 16.50ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಿಸುತ್ತಿರುವ ರಕ್ಷಣಾ ಗೋಡೆಗೆ ಶನಿವಾರದಂದು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಹಾಗೂ ಕೆಎಮ್‍ಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ, ಪೌರಾಯುಕ್ತ ಶಿವಾನಂದ ಹಿರೇಮಠ, ಸದಸ್ಯರಾದ ಅಬ್ಬಾಸ ದೇಸಾಯಿ, ದುರ್ಗಪ್ಪ ಶಾಸ್ತ್ರಿಗೊಲ್ಲರ, ಹನಮಂತ ಕಾಳಮ್ಮನಗುಡಿ, ಶ್ರೀಶೈಲ ಪೂಜಾರಿ, ಬಾಬು ಮುಳಗುಂದ, ವಿಶ್ವನಾಥ ಬಿಳ್ಳೂರ, ಬಿಜೆಪಿ ನಗರಾಧ್ಯಕ್ಷ ಭೀಮಶಿ ಭರಮನ್ನವರ, ಕ್ರೈಸ್ತ ಸಮಾಜ ಮುಖಂಡರುಗಳಾದ ಜಗದೀಶ ಮಂಡಿ, ಆನಂದ ಬಿ, ಸಂಜಯ ಸಂಗಮನವರ, ಸಚೀನ, ಪ್ರವೀಣ ಸೇರಿದಂತೆ ಇತರರು ಇದ್ದರು.