RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಮುಪ್ಪಯ್ಯ ಶಿವಾಚಾರ್ಯರ ಪುಣ್ಯ ಸ್ಮರಣೋತ್ಸವ ನಿಮಿತ್ಯ ಅಯ್ಯಾಚಾರ ಲಿಂಗ ದೀಕ್ಷೆ

ಗೋಕಾಕ:ಮುಪ್ಪಯ್ಯ ಶಿವಾಚಾರ್ಯರ ಪುಣ್ಯ ಸ್ಮರಣೋತ್ಸವ ನಿಮಿತ್ಯ ಅಯ್ಯಾಚಾರ ಲಿಂಗ ದೀಕ್ಷೆ 

ಮುಪ್ಪಯ್ಯ ಶಿವಾಚಾರ್ಯರ ಪುಣ್ಯ ಸ್ಮರಣೋತ್ಸವ ನಿಮಿತ್ಯ ಅಯ್ಯಾಚಾರ ಲಿಂಗ ದೀಕ್ಷೆ
ಗೋಕಾಕ ಮಾ 12 : ಶ್ರೀಮಠಗಳ ಆಶೀರ್ವಾದದಿಂದ ಏಳ್ಗೆ ಹೊಂದಿರುವ ವೀರಶೈವ ಲಿಂಗಾಯತ ಬಾಂಧವರು, ಪ್ರಸ್ತುತ ಅದಕ್ಕೆ ಪ್ರತಿಯಾಗಿ ಬಾಂಧವರು ಒಗ್ಗಟ್ಟು ಪ್ರದರ್ಶಿಸಿ ಅಭಿವೃದ್ಧಿಗಾಗಿ ಕಾಯುತ್ತಿರುವ ಮಠ-ಮಾನ್ಯಗಳ ಶ್ರೇಯಸ್ಸಿಗಾಗಿ ಪರಸ್ಪರ ಕೈ ಜೋಡಿಸುವ ಅಗತ್ಯವಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಗೋಕಾಕ ನಗರ ಘಟಕ ಅಧ್ಯಕ್ಷ ಪ್ರಶಾಂತ ಕುರಬೇಟ ಪ್ರತಿಪಾದಿಸಿದರು.
ಭಾನುವಾರ ಇಲ್ಲಿನ ಸೋಮವಾರ ಪೇಟೆಯ ಮುಪ್ಪಯ್ಯನವರ ಹಿರೇಮಠದಲ್ಲಿ ಸನಾತನ ಪಂಚಾಚಾರ್ಯರ ಯುಗಮಾನೋತ್ಸವ ಹಾಗೂ ಶ್ರೀ ಗುರುಶಿದ್ಧೇಶ್ವರ ಮತ್ತು ಶ್ರೀ ಗುರು ಮುಪ್ಪಯ್ಯ ಶಿವಾಚಾರ್ಯರ ಪುಣ್ಯ ಸ್ಮರಣೋತ್ಸವ ಆಚರಣೆ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಶ್ರೀ ರೇಣುಕಾಚಾರ್ಯ ಪ್ರಶಸ್ತಿ ಪ್ರಧಾನ ಹಾಗೂ ಧರ್ಮ ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಭವಿಷ್ಯದ ದಿನಗಳಲ್ಲಿ ಆರ್ಥಿಕತೆಯ ನಿರೀಕ್ಷೆಯಲ್ಲಿರುವ ಲಿಂಗಾಯತ ಮಠಗಳ ಏಳ್ಗೆ ಮತ್ತು ಅಭಿವೃದ್ಧಿ ಪರ ಚಟುವಟಿಕೆಗಳನ್ನು ಒಗ್ಗಟ್ಟಿನ ಮೂಲಕ ಕೈಗೊಳ್ಳುವುದು ನಮ್ಮ-ನಿಮ್ಮೆಲ್ಲರ ಧ್ಯೇಯಾಗಲಿ ಎಂದು ಆಶಿಸಿದರು.
ಸವಣೂರಿನ ಉಪನ್ಯಾಸಕ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪುರಸ್ಕøತ ಡಾ. ಗುರುಪಾದಯ್ಯ ಸಾಲಿಮಠ ಅವರು ಧರ್ಮ ಸಭೆಯನ್ನು ಉದ್ದೇಶಿಸಿ ಉಪನ್ಯಾಸ ನೀಡಿದರು.
ಸಾನಿಧ್ಯ ವಹಿಸಿದ್ದ ಕಟಕೋಟ ಚಂದರಗಿ ಸಂಸ್ಥಾನ ಹಿರೇಮಠದ ತಪೋ ಭೂಷಣ ಶ್ರೀ ವೀರಭದ್ರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮೀಜಿ ಮತ್ತು ಶೂನ್ಯ ಸಂಪಾದನಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಭವ್ಯ ಸಮಾರಂಭದ ನೇತೃತ್ವ ವಹಿಸಿದ್ದ ಶ್ರೀಗುರು ಮುಪ್ಪಯ್ಯನವರ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಲಮೇಲ’ದ ಸಂಗನಬಸವ ಶಿವಾಚಾರ್ಯರು, ದೊಡವಾಡ ಹಿರೇಮಠದ ಶ್ರೀ ಜಡಿಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ತಿಕೋಟಾ ಹಿರೇಮಠದ ಶಿವಬಸವ ಶಿವಾಚಾರ್ಯ ಮಹಾಸ್ವಾಮೀಜಿ ಉಪಸ್ಥಿತರಿದ್ದರು.
ಕಲಾವಿದ ಚಂದ್ರಶೇಖರ ನಿಂಬರಗಿ ಅವರು ಕಲಾ ಸೇವೆಯನ್ನು ಸಲ್ಲಿಸಿದರು.
ಎಚ್.ಬಿ.ಹಿರೇಮಠ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಎಸ್.ಕೆ.ಮಠದ ನಿರೂಪಿಸಿದರು.
ಮುಂಜಾನೆ ಅಯ್ಯಾಚಾರ ಲಿಂಗ ದೀಕ್ಷೆ ಕಾರ್ಯಕ್ರಮ ಮತ್ತು ಶ್ರೀ ರೇಣುಕಾಚಾರ್ಯ ಪ್ರಶಸ್ತಿ ಪ್ರಧಾನ ಜರುಗಿತು.

Related posts: