RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಇಂದಿನಿಂದ ಮಾದರಿ ನೀತಿ ಸಂಹಿತೆ ಜಾರಿ : ಚುನಾವಣಾ ಅಧಿಕಾರಿ ಗೀತಾ ಕೌಲಗಿ ಮಾಹಿತಿ

ಗೋಕಾಕ:ಇಂದಿನಿಂದ ಮಾದರಿ ನೀತಿ ಸಂಹಿತೆ ಜಾರಿ : ಚುನಾವಣಾ ಅಧಿಕಾರಿ ಗೀತಾ ಕೌಲಗಿ ಮಾಹಿತಿ 

ಇಂದಿನಿಂದ ಮಾದರಿ ನೀತಿ ಸಂಹಿತೆ ಜಾರಿ : ಚುನಾವಣಾ ಅಧಿಕಾರಿ ಗೀತಾ ಕೌಲಗಿ ಮಾಹಿತಿ

ಗೋಕಾಕ ಮಾ 29 : ವಿಧಾನಸಭೆ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಮಾ 29 ರಿಂದ ಗೋಕಾಕ ಮತಕ್ಷೇತ್ರದಲ್ಲಿಯೂ ಸಹ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಮೇ  10 ಮತದಾನ  ಮತ್ತು ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಗೋಕಾಕ 09- ವಿಧಾನಸಭಾಕ್ಷೇತ್ರದ  ಚುನಾವಣಾ ಅಧಿಕಾರಿಯೂ ಆಗಿರುವ ವಿಶೇಷ ಜಿಲ್ಲಾಧಿಕಾರಿ ಗೀತಾ ಕೌಲಗಿ   ಹೇಳಿದರು.
ಬುಧವಾರದಂದು ನಗರದ ತಹಶೀಲ್ದಾರ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ನಡೆಸಿದ ಅವರು ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಎಪ್ರಿಲ್ 13ರಂದು ಚುನಾವಣೆ ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಸಲು ಎಪ್ರಿಲ್ 20 ಕೊನೆಯ ದಿನವಾಗಿದೆ. ಎಪ್ರಿಲ್ 21ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಎಪ್ರಿಲ್ 24 ಕೊನೆದಿನವಾಗಿದೆ.
ಗೋಕಾಕ ಮತಕ್ಷೇತ್ರದಲ್ಲಿ ಒಟ್ಟು ಮತದಾರರು 2,41,197 ಮತದಾರರಿದ್ದು ಅದರಲ್ಲಿ 1,18,952 ಪುರುಷ ಮತದಾರರು, 1,22,229 ಮಹಿಳಾ ಮತದಾರರು ಇತರೆ 16 ಮತದಾರರಿದ್ದಾರೆ. ಗೋಕಾಕ ಮತಕ್ಷೇತ್ರದಲ್ಲಿ ಒಟ್ಟು 288 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅದರಲ್ಲಿ  37 ಸೂಕ್ಷ್ಮ ಮತಗಟ್ಟೆಗಳು , 15 ಅತಿ ಸೂಕ್ಷ್ಮ ಮತಗಟ್ಟೆಗಳಿವೆ.  ಮತಕ್ಷೇತ್ರದ ಯದ್ದಲಗುಡ್ಡ, ಮಾಲದಿನ್ನಿ ಕ್ರಾಸ್ , ಕೊಣ್ಣೂರ ರೈಲ್ವೆ ನಿಲ್ದಾಣ ಮತ್ತು ಜೆ.ಜಿ.ಕೋ ಆಸ್ಪತ್ರೆ ಘಟಪ್ರಭಾದಲ್ಲಿ ಒಟ್ಟು ನಾಲ್ಕು ಚೆಕಪೋಸ್ಟಗಳನ್ನು ಸ್ಥಾಪಿಸಿ 12 ಅಧಿಕಾರಿಗಳು ಹಾಗೂ 12 ಸಹಾಯಕರನ್ನು ನೇಮಿಸಲಾಗಿದ್ದು, ಈಗಾಗಲೇ ಯದ್ದಲಗುಡ್ಡ ಚೆಕಪೋಸ್ಟನಲ್ಲಿ 3.5 ಲಕ್ಷ ನಗದು ಮತ್ತು 16 ಲೀಟರ್ ಮಧ್ಯವನ್ನು ವಶಪಡಿಸಿಕೊಳ್ಳಲಾಗಿದೆ. 2018ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಅತಿ ಕಡಿಮೆ ಮತದಾನವಾಗಿರುವ ಮತಗಟ್ಟೆಗಳಲ್ಲಿ ಮತದಾರರಿಗೆ ಮತದಾನದ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.  ಈ ಭಾರಿಯ ವಿಧಾನಸಭೆ ಚುನಾವಣೆಯಲ್ಲಿ 80 ವರ್ಷ ವಯಸ್ಸು ಮೀರಿದ ಮತದಾರರಿಗೆ ಮನೆಯಿಂದಲೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಮನೆಯಿಂದಲೆ ಮತದಾನ ಮಾಡುವವರು ಮುಂಚಿತವಾಗಿ ನಮೂದಿತ ಅರ್ಜಿ ನಮೂನೆಯಲ್ಲಿ ಅರ್ಜಿತುಂಬಿ ಕೊಡಬೇಕು. ಅರ್ಜಿ ತುಂಬಿ ಕೊಟ್ಟ  ಮತದಾರರ ಮನೆಗಳಿಗೆ ಚುನಾವಣಾ ನೋಡಲ್ ಅಧಿಕಾರಿಗಳು ಅವರ ಮನೆಗಳಲ್ಲಿಗೆ ತೆರಳಿ ಮತದಾನ ದಿನಾಂಕಕ್ಕಿಂತ 3 ದಿನಗಳ  ಮೊದಲು ಹೋಗಿ ಮತದಾನ ಮಾಡಲು ಅವಕಾಶ ನೀಡಲಾಗುವುದು ಎಂದು ತಿಳಿಸಿದ ಅವರು ಚುನಾವಣಾ ಸಂಬಂಧ ಏನಾದರೂ ದೂರುಗಳಿದ್ದರೆ ದೂರವಾಣಿ ಸಂಖ್ಯೆ  08332 228073247 ಸಂರ್ಪಕಿಸಬಹುದು ಈ ಸಂಖ್ಯೆ ದಿನದ 24 ಘಂಟೆಗಳ ಕಾಲ ಕಾರ್ಯ ನಿರ್ವಹಿಸಲಿದೆ. ಈಗಾಗಲೇ ಮಾದರಿ ನೀತಿ ಸಂಹಿತೆಯ ಬಗ್ಗೆ ರಾಜಕೀಯ ಪಕ್ಷಗಳ ಸಭೆ ನಡೆಸಿದ್ದು , ಚುನಾವಣಾ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಲಾಗಿದ್ದು, ಚುನಾವಣಾ ಸಂಬಂಧ ಸಭೆ, ಸಮಾರಂಭ, ಪ್ರಚಾರ ಸಭೆ , ಪ್ರಚಾರ ಬ್ಯಾನರ್ ಅಳವಡಿಸಲು ಚುನಾವಣಾ ಅಧಿಕಾರಗಳ ಪರವಾಣಿಗೆಯನ್ನು ಕಡ್ಡಾಯವಾಗಿ ಪಡೆಯಬೇಕು ಕಾನೂನು ಉಲ್ಲಂಘಿಸಿದರವ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಚುನಾವಣಾ ಅಧಿಕಾರಿ ಗೀತಾ ಕೌಲಗಿ ಹೇಳಿದರು‌.
ಈ ಸಂದರ್ಭದಲ್ಲಿ ಸಿಪಿಐ ಪಿ.ಆರ್.ಯಾತನೂರ, ಪೌರಾಯುಕ್ತ ಜಹೀರಅಬ್ಬಾಸ್ ಎಸ್, ಪಿಎಸ್ಐಗಳಾದ ಎಂ.ಡಿ.ಘೋರಿ, ಕೆ.ವಾಲಿಕರ ಉಪಸ್ಥಿತರಿದ್ದರು.

Related posts: