RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಮಕ್ಕಳು ತಮ್ಮ ಪಾಲಕರ ಜೀವನ ಶೈಲಿಯನ್ನು ಅನುಸರಿಸುತ್ತಾರೆ: ಮಾತೋಶ್ರೀ ಬಸವಗೀತಾ ತಾಯಿ

ಗೋಕಾಕ:ಮಕ್ಕಳು ತಮ್ಮ ಪಾಲಕರ ಜೀವನ ಶೈಲಿಯನ್ನು ಅನುಸರಿಸುತ್ತಾರೆ: ಮಾತೋಶ್ರೀ ಬಸವಗೀತಾ ತಾಯಿ 

ಮಕ್ಕಳು ತಮ್ಮ ಪಾಲಕರ ಜೀವನ ಶೈಲಿಯನ್ನು ಅನುಸರಿಸುತ್ತಾರೆ: ಮಾತೋಶ್ರೀ ಬಸವಗೀತಾ ತಾಯಿ

ಗೋಕಾಕ ಏ 7 : ಸಮಾಜದಲ್ಲಿ ಬಹುತೇಕ ಮಕ್ಕಳು ತಮ್ಮ ಪಾಲಕರ ಜೀವನ ಶೈಲಿಯನ್ನು ಅನುಸರಿಸುತ್ತಾರೆ ಆದ್ದರಿಂದ ಪಾಲಕರು ಶರಣರ ವಿಚಾರಗಳನ್ನು ಅರಿತುಕೊಂಡು ಆದರ್ಶ ಜೀವನ ನಡೆಸಬೇಕೆಂದು ರಾಮದುರ್ಗ ತಾಲೂಕು ನಾಗನೂರಿನ ಗುರುಬಸವ ಮಠದ ಮಾತೋಶ್ರೀ ಪೂಜ್ಯ ಬಸವಗೀತಾ ತಾಯಿಯವರು ಹೇಳಿದರು.
ಗುರುವಾರದಂದು ನಗಯದ ಶೂನ್ಯ ಸಂಪಾದನಠದಲ್ಲಿ ಇಲ್ಲಿನ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ, ವಚನ ಸಾಹಿತ್ಯ ಚಿಂತನ ಮಂಥನ ವೇದಿಕೆ ಹಾಗೂ ಲಿಂಗಾಯತ ಮಹಿಳಾ ವೇದಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ 163ನೇ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ವೀರ ವಿರಾಗಣಿ ಅಕ್ಕಮಹಾದೇವಿ ಅವರು ಹುಟ್ಟುತ್ತಲೇ ಆಧ್ಯಾತ್ಮದ ಪರಿಮಳ ಸೂಸುತ್ತಾ ಬೆಳಗಿದ ಅವಳು ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀಯರಿಗೆ ಗೌರವಯುತ ಸ್ಥಾನ ಕೊಡಿಸುವಲ್ಲಿ ಯಶಸ್ವಿಯಾದಳು ಎಂದು ಹೇಳಿದ ಅವರು ಅಹಂಕಾರದಿಂದ ಮನುಷ್ಯ ವಿನಾಶದೆಡೆಗೆ ಪಯಣಿಸುತ್ತಾನೆ ಹಾಗಾಗಿ ಸರಳ ಜೀವನ ನಡೆಸುವಂತೆ ಹೇಳಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಲೋಕಾಪುರದ ಮಹಾಂತ ದೇವರು ಮಾತನಾಡಿ ಜನರು ಲೌಕಿಕ ಜೀವನಕ್ಕೆ, ಆಡಂಬರಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರುವುದು ವಿಪರ್ಯಾಸ. ಭೌತಿಕ, ಜಡ ವಸ್ತುಗಳಿಗೆ ಹೆಚ್ಚಿನ ಪ್ರಾಧಾನ್ಯತೆ ಕೊಡದೆ ನೈಜವಾಗಿ ಬದುಕುವಂತೆ ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮ ನಿ ಪ್ರ ಮುರುಘರಾಜೇಂದ್ರ ಮಹಾಸ್ವಾಮೀಜಿ ವಹಿಸಿಕೊಂಡಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವೇಶ್ವರ ಧರ್ಮಪ್ರಚಾರಕ ಸಂಸ್ಥೆಯ ಅಧ್ಯಕ್ಷರಾದ ಬಸನಗೌಡ ಪಾಟೀಲ್ ಅವರು ವಹಿಸಿದರು.
ವೇದಿಕೆಯ ಮೇಲೆ ಶಿವಪುತ್ರಪ್ಪಾ ಕಟ್ಟಿ, ಕಾಳಪ್ಪಾ ಗುರಾಣಿ, ಶ್ರೀಮತಿ ವೀಣಾ ಸವಣೂರ ಮತ್ತು ಲಿಂಗಾಯತ ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಹಿರೇಮಠ್, ವಚನ ಸಾಹಿತ್ಯ ಚಿಂತನ ಮಂಥನ ವೇದಿಕೆಯ ಅಧ್ಯಕ್ಷರಾದ ಡಾ. ಸಿ. ಕೆ. ನಾವಲಗಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕರಾದ ಆರ್. ಎಲ್. ಮಿರ್ಜಿ ನಿರೂಪಿಸಿದರು , ಎಸ್ ಕೆ ಮಠದ ವಂದಿಸಿದರು.

Related posts: