RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಶರಣರ ವಚನಗಳ ಪಾಲನೆಯೊಂದಿಗೆ ಬದುಕಿದರೆ ಬದುಕು ಆನಂದಮಯವಾಗುತ್ತದೆ : ಗುರುದೇವಿ ಹೂಲೇಪ್ಪನವರಮಠ

ಗೋಕಾಕ:ಶರಣರ ವಚನಗಳ ಪಾಲನೆಯೊಂದಿಗೆ ಬದುಕಿದರೆ ಬದುಕು ಆನಂದಮಯವಾಗುತ್ತದೆ : ಗುರುದೇವಿ ಹೂಲೇಪ್ಪನವರಮಠ 

ಶರಣರ ವಚನಗಳ ಪಾಲನೆಯೊಂದಿಗೆ ಬದುಕಿದರೆ ಬದುಕು ಆನಂದಮಯವಾಗುತ್ತದೆ : ಗುರುದೇವಿ ಹೂಲೇಪ್ಪನವರಮಠ

ಗೋಕಾಕ ಏ 10 : ಶರಣರ ವಚನಗಳ ಪಾಲನೆಯೊಂದಿಗೆ ಬದುಕಿದರೆ ಬದುಕು ಆನಂದಮಯವಾಗುತ್ತದೆ ಎಂದು ಬೆಳಗಾವಿಯ ಸಾಹಿತಿ ಶ್ರೀಮತಿ ಗುರುದೇವಿ ಹೂಲೇಪ್ಪನವರಮಠ ಹೇಳಿದರು.
ರವಿವಾರದಂದು ನಗರದ ಸಮುದಾಯ ಭವನದಲ್ಲಿ ಬಣಜಿಗ ಸಮಾಜದ ಮಹಿಳಾ ಘಟಕದವರು ಆಯೋಜಿಸಿದ್ದ ಶಿವ ಶರಣೆ ಅಕ್ಕಮಹಾದೇವಿ ಜಯಂತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಶರಣರು ಅನುಭವ ಮಂಟಪ ಸ್ಥಾಪಿಸಿ ತಮ್ಮ ವಚನಗಳ ಮೂಲಕ ಸಮಾಜದ ಪರಿವರ್ತನೆಗೆ ಶ್ರಮಿಸಿದ್ದರು. ಶರಣೆ ಅಕ್ಕಮಹಾದೇವಿ ಅವರ ಜೀವನ ಸಾಧನೆ ಅದ್ಬುತವಾಗಿದ್ದು, ಸರ್ವಕಾಲಕ್ಕೂ ಸಮಾಜಕ್ಕೆ ಉಪಯುಕ್ತವಾದ ವಚನಗಳನ್ನು ನೀಡಿದ್ದಾರೆ. ಅವುಗಳ ಆಚರಣೆಯೊಂದಿಗೆ ಮಾನವ ಜನ್ಮವನ್ನು ಸಾರ್ಥಕ ಪಡೆಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಅಂಕಲಗಿ ಮಠದ ಶ್ರೀ ಅಡಿವಿಸಿದ್ದೇಶ್ವರ ಮಹಾಸ್ವಾಮಿಗಳು ಆರ್ಶೀವಚನ ನೀಡಿ ಶರಣರ ವಚನಗಳನ್ನು ಆಚರಣೆಗೆ ತರುವುದರೊಂದಿಗೆ ಅವರ ಜಯಂತಿಗಳನ್ನು ಆಚರಿಸಿದರೆ ಅರ್ಥಪೂರ್ಣವಾಗಿರುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಯಂತಿ ನಿಮಿತ್ತ ಮಹಿಳೆಯರಿಗಾಗಿ ವಿವಿಧ ಸ್ವರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಬಣಜಿಗ ಸಮಾಜದ ಅಧ್ಯಕ್ಷ ಬಸನಗೌಡ ಪಾಟೀಲ, ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಕರುಬೇಟ್, ಮಹಾದೇವಿ ಉಪ್ಪಿನ, ಪದ್ಢಾ ಕೌಜಲಗಿ, ದೀಪಾ ಬೆಲ್ಲದ, ರತ್ನಾ ಉದೋಶಿ, ಶೈಲಾ ಬೀದರಿ, ಅಂಬಿಕಾ ಪಟ್ಟಣಶೆಟ್ಟಿ, ಪೂರ್ಣಿಮಾ ತಾವಂಶಿ ಉಪಸ್ಥಿತರಿದ್ದರು.

Related posts: