RNI NO. KARKAN/2006/27779|Tuesday, November 5, 2024
You are here: Home » breaking news » ಗೋಕಾಕ:ನಾನು ಜಾತಿಕಾರಣ ಮಾಡಿಲ್ಲ, ಎಲ್ಲ ಜಾತಿ ಧರ್ಮದ ಜನರನ್ನು ಒಗ್ಗೂಡಿಸಿಕೊಂಡು ಹೋಗುತ್ತಿದ್ದೇನೆ : ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದವರಿಗೆ ರಮೇಶ ಪ್ರತಿಕ್ರಿಯೆ

ಗೋಕಾಕ:ನಾನು ಜಾತಿಕಾರಣ ಮಾಡಿಲ್ಲ, ಎಲ್ಲ ಜಾತಿ ಧರ್ಮದ ಜನರನ್ನು ಒಗ್ಗೂಡಿಸಿಕೊಂಡು ಹೋಗುತ್ತಿದ್ದೇನೆ : ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದವರಿಗೆ ರಮೇಶ ಪ್ರತಿಕ್ರಿಯೆ 

ನಾನು ಜಾತಿಕಾರಣ ಮಾಡಿಲ್ಲ, ಎಲ್ಲ ಜಾತಿ ಧರ್ಮದ ಜನರನ್ನು ಒಗ್ಗೂಡಿಸಿಕೊಂಡು ಹೋಗುತ್ತಿದ್ದೇನೆ : ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದವರಿಗೆ ರಮೇಶ ಪ್ರತಿಕ್ರಿಯೆ

ಗೋಕಾಕ ಏ 13  : ನಾನು ಜಾತಿಕಾರಣ ಮಾಡಿಲ್ಲ, ಎಲ್ಲ ಜಾತಿ ಧರ್ಮದ ಜನರನ್ನು ಒಗ್ಗೂಡಿಸಿಕೊಂಡು ಹೋಗುತ್ತಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ಶಾಸಕ ರಮೇಶ ಜಾರಕಿಹೊಳಿ ಹೇಳಿದರು .
ಗುರುವಾರದಂದು ನಗರ ತಾಲೂಕಾಡಳಿತ ಸೌಧದಲ್ಲಿ  ಗೋಕಾಕ ಮತಕ್ಷೇತ್ರದ ಚುನಾವಣಾಧಿಕಾರಿ ಗೀತಾ ಕೌಲಗಿ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ನಾಯಕರು ಮಾಡಿದ ಷಡ್ಯಂತ್ರ ನೋಡಿದರೆ ನಾನು ಮೇಲೆದ್ದು ಬರುತ್ತಿರಲಿಲ್ಲ. ಜನರ ಪ್ರೀತಿ, ವಿಶ್ವಾಸದಿಂದ ಮತ್ತೆ ಎಲ್ಲರ ಎದುರು ನಿಂತಿದ್ದೇನೆ. ಕೆಳಮಟ್ಟದ ರಾಜಕಾರಣದಿಂದ ನನಗೆ ಬೇಜಾರಾಗಿದೆ ಇದೇ ಬಾರಿ ನಾನು ಸ್ಪರ್ಧೆ ಮಾಡುತ್ತಿರಲಿಲ್ಲ ವೈರಿಗಳಿಗೆ ತಕ್ಕ ಉತ್ತರ ನೀಡಲು ಈ ಬಾರಿ ಸ್ಪರ್ಧೆ ಮಾಡುತ್ತಿದ್ದೇನೆ ಮುಂದಿನ ಬಾರಿ ಸ್ಪರ್ಧೆ ಮಾಡೋದಿಲ್ಲ ಎಂದ ಅವರು ಗೋಕಾಕ ಮತಕ್ಷೇತ್ರದ ಜನತೆಯ ಆಶೀರ್ವಾದ, ಪ್ರೀತಿಯಿಂದ ನಾನು 6ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಕ್ಷೇತ್ರದ ಜನ ಅಪಪ್ರಚಾರಕ್ಕೆ ಕಿವಿ ಕೊಟ್ಟಿಲ್ಲ. ಜಾತ್ಯಾತೀತವಾಗಿ ನನ್ನ ಬೆಂಬಲಿಸಿದ್ದಾರೆ ಎಂದು  ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ತಿಳಿಸಿದರು.
ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿ ವಿರುದ್ಧ ಬಂಡಾಯ ವಿಚಾರವಾಗಿ ಮಾತನಾಡಿದ ರಮೇಶ ಜಾರಕಿಹೊಳಿ ಅವರು, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮತ್ತು ನಾನು ನಿಜವಾಗಿಯೂ ನಾವಿಬ್ಬರೂ ಉತ್ತಮ ಸ್ನೇಹಿತರು, ಕೆಟ್ಟ ಘಳಿಗೆಯಲ್ಲಿ ನಾವಿಬ್ಬರೇ ಬೇರೆ ಬೇರೆಯಾಗಿದ್ದೇವೆ. ನಾನು ಕಾಂಗ್ರೆಸ್ ನಲ್ಲಿದ್ದೆ ಅವರು ಬಿಜೆಪಿಯಲ್ಲಿದ್ದರು, ಅಚಾನಕ್ ನಾವಿಬ್ಬರೂ ಒಂದೇ ಪಕ್ಷದಲ್ಲಿದ್ದೇವೆ. ಲಕ್ಷ್ಮಣ ಸವದಿಗೆ ಮಾದ್ಯಮಗಳ ಮೂಲಕ ಮನವಿ ಮಾಡುತ್ತೇನೆ. ನಿಮ್ಮ ನಿರ್ಧಾರವನ್ನ ಪುನರ್ ಪರಿಶೀಲನೆ ಮಾಡಿ, ಯಾವುದೇ ದುಡುಕಿನ ನಿರ್ಧಾರ ಬೇಡ. ನಾವಿಬ್ಬರೂ ಸೇರಿ 2023ಕ್ಕೆ ಜಿಲ್ಲೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ತರೋಣ, ಬಿಜೆಪಿ ಕಟ್ಟೋಣ ಬೇಕಿದ್ದರೆ ನಾನೇ ಒಂದು ಹೆಜ್ಜೆ ಹಿಂದೆ ಸರಿಯುತ್ತೇನೆ. ಮತ್ತೊಮ್ಮೆ ವಿಚಾರ ಮಾಡಿ ಬಿಜೆಪಿಯಲ್ಲಿ ಮುಂದುವರೆಯಬೇಕು ಎಂದು ಮನವಿ ಮಾಡಿದರು.ನಮ್ಮಿಬ್ಬರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇದ್ದರೆ ಕುಳಿತು ಬಗೆಹರಿಸಿಕೊಳ್ಳೋಣ. ಮಹೇಶ್ ಕುಮಟಳ್ಳಿ ಪರ ಬ್ಯಾಟಿಂಗ್ ಮಾಡೋದು ನನ್ನ ಧರ್ಮ, ನಾನು ಮಾಡಿದ್ದೀನಿ. ಆದರೆ ಲಕ್ಷ್ಮಣ ಸವದಿ ವಿರುದ್ಧ ಅಲ್ಲ, ನಿಮ್ಮ ಸ್ಥಾನಮಾನ ಕಸಿದುಕೊಂಡಿಲ್ಲ. ಹಿಂದಿನ ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಕಾಂಗ್ರೆಸ್ ಗೆಲ್ಲಿಸುವುದು ನನ್ನ ಕರ್ತವ್ಯ, ಮಾಡಿದ್ದೀನಿ. ಈಗ ಎಂಎಲ್‌ಸಿ ಇದ್ದೀರಿ 5 ವರ್ಷ ಅಧಿಕಾರ ಅವಧಿ ಇದೆ. ಕುಮಠಳ್ಳಿ ಎಂಎಲ್‌ಎ ಆಗಬೇಕು. ಮುಂದಿನ ದಿನದಲ್ಲಿ ಇಬ್ಬರೂ ಸೇರಿ ಬಿಜೆಪಿಗಾಗಿ ಕೆಲಸ ಮಾಡೋಣ ಎಂದರು. ಕಾಂಗ್ರೆಸ್ ಮೋಸಗಾರ ಪಕ್ಷ ಅಲ್ಲಿಗೆ ಹೋಗಬೇಡಿ ಎಂದು ಸವದಿಯವರಿಗೆ ಮನವಿ ಮಾಡುತ್ತೇನೆ. ನಾನು-ನೀನು ಬೊಮ್ಮಾಯಿ ಸ್ನೇಹಿತರು, ಹೈಕಮಾಂಡ್ ಹೇಳಿದರೆ ಸಂಧಾನ ಮಾಡುತ್ತೇನೆ. ಜಿಲ್ಲೆ ರಾಜ್ಯದಲ್ಲಿ ನಾನು ನೀನು ಸೇರಿ ಕೆಲಸ ಮಾಡೋಣ, ಯಾವುದೇ ದುಡುಕಿನ ತೀರ್ಮಾನ ಮಾಡಿಬೇಡಿ ಎಂದು  ಮನವಿ ಮಾಡಿದರು.

Related posts: