RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಅಶೋಕ ಪೂಜಾರಿ ನಾಳೆ ನಾಮಪತ್ರ ಸಲ್ಲಿಕೆ

ಗೋಕಾಕ:ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಅಶೋಕ ಪೂಜಾರಿ ನಾಳೆ ನಾಮಪತ್ರ ಸಲ್ಲಿಕೆ 

ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಅಶೋಕ ಪೂಜಾರಿ ನಾಳೆ ನಾಮಪತ್ರ ಸಲ್ಲಿಕೆ

ಗೋಕಾಕ ಏ 19 : ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಗುರುವಾರದಂದು  ಮಧ್ಯಾಹ್ನ 1:30ಕ್ಕೆ ನಾಮಪತ್ರ ಸಲ್ಲಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಹೇಳಿದರು.
ಗುರುವಾರದಂದು ನಗರದ ಅವರ ಸ್ವ-ಗೃಹದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ಧೇಶಿಸಿ ಅವರು ಮಾತನಾಡಿದರು.

ನನ್ನ ಮೇಲೆ ನಂಬಿಕೆ ಇಟ್ಟ ಮತದಾರರು  ನಿರಂತರವಾಗಿ ನನ್ನ ಜೊತೆಗೆ ಇದ್ದಾರೆ. ಅವರ  ಅಭಿಪ್ರಾಯ ಮತ್ತು ಜನಾಭಿಪ್ರಾಯಕ್ಕೆ ಮಣಿದು ಕಾಂಗ್ರೆಸ್ ಪಕ್ಷದ ಬಂಡಾಯ  ಅಭ್ಯರ್ಥಿಯಾಗಿ ಚುನಾವಣೆಗೆ ಸ್ವರ್ಧಿಸುವ ನಿರ್ಣಯ ಕೈಗೊಂಡಿದ್ದೇನೆ. ನನ್ನ ಹಿತೈಷಿಗಳು ಸಹ ನನಗೆ ತಾವು ಬಂಡಾಯ ಅಭ್ಯರ್ಥಿಯಾಗಿ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಸ್ವರ್ಧಿಸಿ ಎಂದು ಹೇಳಿದ್ದಾರೆ. ನನ್ನ ಹೋರಾಟ ಬದಲಾವಣೆಗಾಗಿ  ಎಂದು ಹೇಳಿದರು .
ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿಕೆಶಿ, ಸಿ.ಎಲ್.ಪಿ  ನಾಯಕ ಸಿದ್ದರಾಮಯ್ಯ  ಸೇರಿದಂತೆ ಬಹುತೇಕ ಮುಖಂಡರು ನನ್ನನ್ನು ಗೋಕಾಕ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಹೇಳಿ ಪಕ್ಷಕ್ಕೆ  ಸೇರಿಸಿಕೊಂಡಿದ್ದರು. ಆ ಕಾರಣಕ್ಕಾಗಿ  ಕಳೆದ ಒಂದುವರೆ ವರ್ಷದಿಂದ  ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡಿ ನಾನು  ಚುನಾವಣೆ ತಯಾರಿ ಮಾಡಿಕೊಂಡಿದ್ದೆ. ಆದರೆ ಪಕ್ಷದ ಅಧಿಕೃತ ಪಟ್ಟಿ ಹೊರಬಂದಾಗ ನನ್ನ ಹೆಸರು ಮಾಯವಾಗಿ ಹೊಸ ಮುಖಕ್ಕೆ ಅವಕಾಶ ಸಿಕ್ಕಿತು. ನಿನೇ ಅಭ್ಯರ್ಥಿ ಎಂದು ಹೇಳಿ ಕೊನೆಗೆ ಘಳಿಗೆಯಲ್ಲಿ ನನ್ನ  ಹೆಸರು ತಪ್ಪಿದೆ. ಸೌಜನ್ಯಕ್ಕಾದರು ಪಕ್ಷದ  ಹೈಕಮಾಂಡ್ ನನ್ನನ್ನು ಕರೆಯಿಸಿ, ನನ್ನನ್ನು  ವಿಶ್ವಾಸಕ್ಕೆ ತಾರದೆ ಈ ಕಾರ್ಯ ಮಾಡಿದೆ. ಈಗ ಕಾಲ ಮಿಂಚಿ ಹೋಗಿದೆ‌ . ನಾನು ಲಾಭಿ ಮಾಡಲಿಲ್ಲ, ಕಾರಣ ಪಕ್ಷದ ಅಧ್ಯಕ್ಷರು, ಸಿಎಲ್.ಪಿ ನಾಯಕರು ನನಗೆ ಭರವಸೆ ನೀಡಿದ್ದರು. ಕಾಂಗ್ರೆಸ್ ಪಕ್ಷದ ಸರ್ವೇ ಬೆಂಗಳೂರಿನಲ್ಲಿ ಕುಳಿತು ಮಾಡಿದ ಸರ್ವೇ ಹೊರತು ಇಲ್ಲಿ ಬಂದು ಮಾಡಿದ ಸರ್ವೇ ಅಲ್ಲ ನನ್ನ ಸ್ವರ್ಧೇ ತಪ್ಪಿಸಲು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ನನ್ನ ವಿರುದ್ಧ ವ್ಯವಸ್ಥಿತ ಪಿತೂರಿ ಮಾಡಿದ್ದಾರೆ. ಜಿಲ್ಲೆಯಲ್ಲಿ ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆ. ಅಶೋಕ್ ಪೂಜಾರಿ ಹಣ ಪಡೆದು ಹಿಂದೆ ಸರಿಯುತ್ತಾನೆ ಎಂಬ ಅಪಪ್ರಚಾರ ನನಗೆ ಬಹುಶಃ ಮುಳ್ಳವಾಗಿದೆ. ಈ ಅಪ್ಪಟ ಸುಳ್ಳು ಬಹುಶಃ ಪಕ್ಷದವರು  ನಂಬಿದ್ದಾರೆ.
ಪಕ್ಷದ ಅಧಿಕೃತ ಅಭ್ಯರ್ಥಿ ಡಾ.ಮಹಾಂತೇಶ  ಕಡಾಡಿ, ಆಕಾಂಕ್ಷಿಗಳಾದ  ಚಂದ್ರಶೇಖರ್ ಕೊಣ್ಣೂರ,  ಪ್ರಕಾಶ ಬಾಗೋಜಿ ಸೇರಿದಂತೆ ಅನೇಕರು ನನಗೆ ಬಗ್ಗೆ ಅಪಪ್ರಚಾರ ಮಾಡಿದ್ದಾರೆ‌. ನಾನು ಆಣೆ ಮಾಡಿದ ಹಾಗೆ ಅವರು ಸಹ ನಾನು ಹಣ ಪಡೆದಿದ್ದೇನೆ ಎಂದು ಆಣೆ  ಮಾಡಲಿ ಎಂದು ಸವಾಲು ಹಾಕಿದ ಅವರು ಕಾಂಗ್ರೆಸ್ ಪಕ್ಷದ ಈ ಬಗ್ಗೆ   ಸ್ವಷ್ಟೀಕರಣ   ನೀಡಬೇಕಾಗಿದೆ ಎಂದರು.
ಈ ಪತ್ರಿಕಾಗೋಷ್ಠಿಯಲ್ಲಿ ಪ್ರೇಮಾ ಚಿಕ್ಕೋಡಿ, ಲಕ್ಷ್ಮಣ ಕರಮಾಸಿ, ಸದಾಕತಅಲಿ ಮಕಾಂದಾರ, ಸುಭಾಷ್ ಕೌಲಗಿ, ವಿಠಲ ಕುರಿ, ಅಜೀತಕುಮಾರ ಬೆಳವಿ,ಬಿ.ಸಿ.ರಾಮಪ್ಪ, ಜಿನ್ನಪ್ಪ ಬೋರಗಲಿ, ಬಸವರಾಜ ಕಾಡದವರ ಇದ್ದರು.

Related posts: