RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಶರಣರ ಅನುಭಾವದ ನುಡಿಗಳಿಂದ ಮನಸ್ಸು ಶುಧ್ಧಗೊಳ್ಳುತ್ತದೆ : ಶ್ರೀ ನಿಜಗುಣ ದೇವರು

ಗೋಕಾಕ:ಶರಣರ ಅನುಭಾವದ ನುಡಿಗಳಿಂದ ಮನಸ್ಸು ಶುಧ್ಧಗೊಳ್ಳುತ್ತದೆ : ಶ್ರೀ ನಿಜಗುಣ ದೇವರು 

ಶರಣರ ಅನುಭಾವದ ನುಡಿಗಳಿಂದ ಮನಸ್ಸು ಶುಧ್ಧಗೊಳ್ಳುತ್ತದೆ : ಶ್ರೀ ನಿಜಗುಣ ದೇವರು

ಗೋಕಾಕ ಮೇ 7 : ಶರಣರ ಅನುಭಾವದ ನುಡಿಗಳಿಂದ ಮನಸ್ಸು ಶುಧ್ಧಗೊಳ್ಳುತ್ತದೆ. ಭಗವಂತನ ಸಾಕ್ಷಾತ್ಕಾರಕ್ಕಾಗಿ ಶರಣರ ಸಂಗ ಬೇಕು ಎಂದು ಶ್ರೀ ಸಿಧ್ಧಲಿಂಗ ಕೈವಲ್ಯಾಶ್ರಮ, ಹುಣಶ್ಯಾಳ( ಪಿ.ಜಿ.)ಯ ಪೂಜ್ಯ ಶ್ರೀ ನಿಜಗುಣ ದೇವರು ಹೇಳಿದರು.
ಶುಕ್ರವಾರದಂದು ನಗರದ ಶ್ರೀ  ಶೂನ್ಯ ಸಂಪಾದನ ಮಠದಲ್ಲಿ ಶ್ರೀ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ, ವಚನ ಸಾಹಿತ್ಯ ಚಿಂತನ ಮಂಥನ ವೇದಿಕೆ ಹಾಗೂ ಲಿಂಗಾಯತ ಮಹಿಳಾ ವೇದಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ 164 ನೆಯ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಚಿಂತನಾಕಾರರಾಗಿ ಭಾಗವಹಿಸಿ ಮಾತನಾಡಿದ ಅವರು ಶುಧ್ಧ ಮನದಲ್ಲಿ ಮಾತ್ರ  ದೇವರು ವಾಸಿಸುತ್ತಾನೆ .ಶರಣರ ಮಾತುಗಳಲ್ಲಿ ಜೀವನದ ದರ್ಶನವಿದೆ, ಅನುಭಾವವಿದೆ, ಶಾಂತಿ, ಸಮಾಧಾನವಿದೆ ಎಂದು ಹೇಳಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವೇಶ್ವರ ಧರ್ಮಪ್ರಚಾರಕ ಸಂಸ್ಥೆಯ ಅಧ್ಯಕ್ಷರಾದ ಬಸನಗೌಡ ಪಾಟೀಲ್ ಅವರು ವಹಿಸಿಕೊಂಡಿದ್ದರು. ವೇದಿಕೆಯ ಮೇಲೆ ದಾಸೋಹಿಗಳಾದ ಪ್ರಸನ್ ತಂಬಾಕೆ ನೀಲಕಂಠ ತೋಟಗಿ, ಅಭಿಷೇಕ ಮುಚ್ಚಂಡಿ ಹಿರೇಮಠ, ಮಲ್ಲಿಕಾರ್ಜುನ ಮಡ್ದೇನಿ ಮಲ್ಲಪ್ಪಾ ನೇಸರಗಿ ಮತ್ತು ಲಿಂಗಾಯತ ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಹಿರೇಮಠ್ ಹಾಗೂ ವಚನ ಸಾಹಿತ್ಯ ಚಿಂತನ ಮಂಥನ ವೇದಿಕೆಯ ಅಧ್ಯಕ್ಷರಾದ ಡಾ. ಸಿ. ಕೆ. ನಾವಲಗಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕರಾದ ಆರ್. ಎಲ್. ಮಿರ್ಜಿ ನಿರೂಪಿಸಿದರೆ ಕೊನೆಯಲ್ಲಿ ಎಸ್ ಕೆ ಮಠದ ವಂದಿಸಿದರು.

Related posts: