RNI NO. KARKAN/2006/27779|Thursday, November 7, 2024
You are here: Home » breaking news » ಮೂಡಲಗಿ:ಎಪಿಎಂಸಿ ಪ್ರಾಂಗಣ ಅಭಿವೃದ್ಧಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ಒಂದು ಕೋಟಿ ರೂ. ಅನುದಾನ : ರವಿ ಸೋನವಾಲ್ಕರ

ಮೂಡಲಗಿ:ಎಪಿಎಂಸಿ ಪ್ರಾಂಗಣ ಅಭಿವೃದ್ಧಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ಒಂದು ಕೋಟಿ ರೂ. ಅನುದಾನ : ರವಿ ಸೋನವಾಲ್ಕರ 

ಎಪಿಎಂಸಿ ಪ್ರಾಂಗಣ ಅಭಿವೃದ್ಧಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ಒಂದು ಕೋಟಿ ರೂ. ಅನುದಾನ :  ರವಿ ಸೋನವಾಲ್ಕರ

ಮೂಡಲಗಿ ಅ 16: ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ಮೂಡಲಗಿ ಎಪಿಎಂಸಿ ಪ್ರಾಂಗಣ ಅಭಿವೃದ್ಧಿಗೆ ಒಂದು ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಪುರಸಭೆ ಉಪಾಧ್ಯಕ್ಷ ರವಿ ಸೋನವಾಲ್ಕರ ತಿಳಿಸಿದರು.

ಸೋಮವಾರದಂದು ಎಪಿಎಂಸಿ ಉಪಮಾರುಕಟ್ಟೆ ಆವರಣದಲ್ಲಿ 2017-18ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಲಾದ ಗೋಕಾಕ ಎಪಿಎಂಸಿ ಉಪಮಾರುಕಟ್ಟೆ ಮೂಡಲಗಿ ಪ್ರಾಂಗಣದಲ್ಲಿ ಜಾನುವಾರು ಮಾರುಕಟ್ಟೆ ಅಭಿವೃದ್ಧಿಪಡಿಸುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಮೂಡಲಗಿ ಪ್ರಾಂಗಣ ಅಭಿವೃದ್ಧಿಯಲ್ಲಿ ಎರಡು ದನಗಳನ್ನು ಏರಿಸುವ-ಇಳಿಸುವ ಕಟ್ಟಡ, ದನಗಳ ಕೊಠಡಿಗಳ ನಿರ್ಮಾಣ, ನೀರು ಸರಬರಾಜು, ದನಗಳಿಗೆ ಕುಡಿಯುವ ನೀರಿನ ತೊಟ್ಟಿಗಳು ನಿರ್ಮಾಣಗೊಳ್ಳಲಿವೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮೂಡಲಗಿ ಪಟ್ಟಣದ ಸರ್ವತೋಮುಖ ಏಳ್ಗೆಗೆ ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಸಚಿವ ರಮೇಶ ಜಾರಕಿಹೊಳಿ ಅವರ ಪ್ರಯತ್ನದಿಂದ ಸರ್ಕಾರ ಇತ್ತೀಚೆಗೆ ಮೂಡಲಗಿ ಪಟ್ಟಣವನ್ನು ಹೊಸ ತಾಲೂಕು ಕೇಂದ್ರವನ್ನಾಗಿ ಘೋಷಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸ್ಥಳೀಯ ಶಿವಬೋಧರಂಗ ಮಠದ ಅಮೃತಬೋಧ ಸ್ವಾಮಿಗಳು ಈ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಗೋಕಾಕ ಎಪಿಎಂಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ, ಎಪಿಎಂಸಿ ನಿರ್ದೇಶಕರಾದ ರೇವಣ್ಣಾ ಕನಕಿಕೋಡಿ, ಮಾರುತಿ ಹರಿಜನ, ಮೂಡಲಗಿ ಪುರಸಭೆ ಸದಸ್ಯರಾದ ರಾಮಣ್ಣಾ ಹಂದಿಗುಂದ, ಮರೆಪ್ಪ ಮರೆಪ್ಪಗೋಳ, ಶಿವು ಚಂಡಕಿ, ಪ್ರಕಾಶ ಈರಪ್ಪನವರ, ರಮೇಶ ಸಣ್ಣಕ್ಕಿ, ಡಾ.ಎಸ್.ಎಸ್. ಪಾಟೀಲ, ಈರಣ್ಣಾ ಬನ್ನೂರ, ಹುಸೇನಸಾಬ ಶೇಖ, ಸಂತೋಷ ಸೋನವಾಲ್ಕರ, ಎಪಿಎಂಸಿ ಕಾರ್ಯದರ್ಶಿ ಬಿ.ಆರ್. ಜಾಲಿಬೇರಿ, ಮುಂತಾದವರು ಉಪಸ್ಥಿತರಿದ್ದರು.

Related posts: