RNI NO. KARKAN/2006/27779|Sunday, December 22, 2024
You are here: Home » breaking news » ಗೋಕಾಕ:ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಕ್ರಾಂತಿಕಾರಿ ಜಯಂತಿಯಾಗಿ ಹೊರಹೊಮ್ಮಲಿ: ಸಚಿವ ಸತೀಶ ಜಾರಕಿಹೊಳಿ

ಗೋಕಾಕ:ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಕ್ರಾಂತಿಕಾರಿ ಜಯಂತಿಯಾಗಿ ಹೊರಹೊಮ್ಮಲಿ: ಸಚಿವ ಸತೀಶ ಜಾರಕಿಹೊಳಿ 

ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಕ್ರಾಂತಿಕಾರಿ ಜಯಂತಿಯಾಗಿ ಹೊರಹೊಮ್ಮಲಿ: ಸಚಿವ ಸತೀಶ ಜಾರಕಿಹೊಳಿ
ಗೋಕಾಕ ಜು 8 ” 12 ನೇ ಶತಮಾನದಲ್ಲಿ ಶಿವಶರಣರ ಹೋರಾಟದ ಉದ್ದೇಶವನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ಮಹತ್ವ ಕಾರ್ಯ ನಡೆಯಲಿ, ಶ್ರೀ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಕ್ರಾಂತಿಕಾರಿ ಜಯಂತಿಯಾಗಿ ಹೊರಹೊಮ್ಮಬೇಕು” ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಹೇಳಿದರು.
ನಗರದ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಶ್ರೀ ಶಿವಶರಣ ಹಡಪದ ಅಪ್ಪಣ್ಣ 889 ನೇ ಜಯಂತ್ಯೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಶರಣ ಕಾಯಕ ಬದುಕು ಯುವ ಪೀಳಿಗೆಗೆ ದಾರಿದೀಪವಾಗಬೇಕು. ಶರಣರು ಯಾತಕ್ಕಾಗಿ ಹೋರಾಟ ಮಾಡಿದರೂ, ಅದರ ಉದ್ದೇಶ ಬಗ್ಗೆ ತಿಳಿದುಕೊಳ್ಳಬೇಕಿದೆ. ಅದರ ಬಗ್ಗೆ ಹೆಚ್ಚು ಬೆಳಕು ಚೆಲ್ಲುವ ಪ್ರಯತ್ನಗಳು ನಿರಂತರ ನಡೆಯಬೇಕು. ಅವರ, ವಚನವನ್ನು ಆಳವಾಗಿ ಅಧ್ಯಯನ ಮಾಡಿದಾಗ ಮಾತ್ರ ಇವೆಲ್ಲವೂ ಸಾಧ್ಯ ಎಂದರು.
ಇಂದಿನ ದಿನಗಳಲ್ಲಿ ಹೆಜ್ಜೆ ..ಹೆಜ್ಜೆಗೂ… ಮೋಸಗಳು ನಡೆಯುತ್ತಿವೆ. 12 ನೇ ಶತಮಾನದಲ್ಲಿ ಶರಣರಿಗೆ ಮೋಸವಾಗಿತ್ತು, ಈಗಲೂ ಸಮಾಜದಲ್ಲಿ ಅನ್ಯಾಯಗಳು ಮುಂದುವರೆಯುತ್ತಿವೆ. ಅದರಿಂದ ಹೊರಬೇಕಾಗಿದೆ. ಅದಕ್ಕಾಗಿ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಮಾಡಲಾಗುತ್ತಿದೆ. ಹಡಪದ ಅಪ್ಪಣ್ಣನವರ ಸಾಮಾಜಿಕ ಕ್ರಾಂತಿ ಎಲ್ಲರ ಮೇಲೆ ಬೆಳಕು ಚೆಲ್ಲಲಿ ಎಂದು ಆಶಿಸಿದರು.
ಈ ಜಯಂತಿ ಒಂದೇ ಸಮುದಾಯಕ್ಕೆ ಸೀಮಿತವಲ್ಲ, ಮಾನವ ಜನಾಂಗಕ್ಕೆ ಸಂದೇಶ ನೀಡಿದ್ದಾರೆ. “ಹಡಪದ ಅಪ್ಪಣ್ಣ” ನವರು ಹನ್ನೆರಡನೆಯ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರು. ಹಡಪದ ಅಪ್ಪಣ್ಣನವರ ಜಯಂತಿ ಜಯಂತಿಗೆ ಸೀಮಿತಗೊಳಿಸದೇ ಕ್ರಾಂತಿಕಾರಿ ಜಯಂತಿಯಾಗಿ ಹೊರಹೊಮ್ಮಬೇಕೆಂದು ಎಂದು ಹೇಳಿದರು.
ಈ ವೇಳೆಯಲ್ಲಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಸ್ಮರಣ ಸಂಚಿಕೆ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಈಶ್ವರ್‌ ಚಂದ್ರ ಬೇಟಗೇರಿ, ಡಾ. ಸಿಕೆ ನಾವಲಗಿ , ರಾಜ್ಯಾಧ್ಯಕ್ಷರಾದ ಸಿದ್ದಣ್ಣ ಹಡಪದ, ಈಶ್ವರ್‌ ಮಮದಾಪೂರ , ಸುರೇಶ ಹಾಗೂ ಇತರರು ಇದ್ದರು.

Related posts: