ಗೋಕಾಕ:ಸಮಾಜಕ್ಕೆ ಒಳಿತಾಗುವ ಕೊಡುಗೆಗಳನ್ನು ನೀಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ : ಶಿವಾನಂದ ದೇಸಾಯಿ
ಸಮಾಜಕ್ಕೆ ಒಳಿತಾಗುವ ಕೊಡುಗೆಗಳನ್ನು ನೀಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ : ಶಿವಾನಂದ ದೇಸಾಯಿ
ಗೋಕಾಕ ಅ 5 : ಮಾನವ ಸಮಾಜವನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ, ನಮ್ಮಿಂದ ಸಮಾಜಕ್ಕೆ ಒಳಿತಾಗುವ ಕೊಡುಗೆಗಳನ್ನು ನೀಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಇಲ್ಲಿಯ ಶ್ರೀ ಸಾಯಿ ಸಮರ್ಥ ಫೌಂಡೇಶನ ಕಳೆದ ಮೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಕೌಜಲಗಿಯ ಶ್ರೀ ಬನಶಂಕರಿ ಗೋ-ಅನುಸಂಧಾನ ಹಾಗೂ ಸಾವಯವ ಕೃಷಿ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ಪ್ರಕಲ್ಪ ಪ್ರಮುಖ ಶಿವಾನಂದ ದೇಸಾಯಿ ಹೇಳಿದರು.
ಶನಿವಾರದಂದು ನಗರದ ರೋಟರಿ ರಕ್ತ ಭಂಡಾರದ ಸಭಾ ಭವನದಲ್ಲಿ ಶ್ರೀ ಸಾಯಿ ಸಮರ್ಥ ಫೌಂಡೇಶನ 3ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ 2ನೇ ಉಚಿತ ಶಿರಡಿ ಯಾತ್ರೆ ಉದ್ಘಾಟನೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರವಾಹ ಹಾಗೂ ಕೋವಿಡ್ ಸಂದರ್ಭದಲ್ಲಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಿ ಜನರ ಕಷ್ಟಗಳಿಗೆ ಸ್ವಂದಿಸುವ ಕಾರ್ಯವನ್ನು ಮಾಡಿ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ನೇತ್ರ ಶಸ್ತ್ರ ಚಿಕಿತ್ಸೆ, ಬಡರೋಗಿಗಳಿಗೆ ಉಚಿತ ಬೆಡ್ ಸೇವೆ, ರಕ್ತದಾನ,ಕಂಪ್ಯೂಟರ್ ತರಬೇತಿ, ದೇಗುಲುಗಳ ದರ್ಶನ ಸೇರಿದಂತೆ ಸಮಾಜಿಕ ಕಳಕಳಿಯುಳ್ಳ ಕಾರ್ಯಗಳಲ್ಲಿ ದಿಟ್ಟ ಹೆಜ್ಜೆಯನ್ನಿಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದ ಅವರು ಕೃಷಿ ಜಮೀನುಗಳಿಗೆ ರಾಸಾಯನಿಕಗಳ ಬಳಕೆ ಮಾಡಿ ಇಂದು ವಿಷದ ಆಹಾರವನ್ನು ಸೇವೆನೆ ಮಾಡುತ್ತಿದ್ದೇವೆ. ಸಾವಯವ ಕೃಷಿ ಮಾಡಿ ಆಹಾರ ಪದಾರ್ಥಗಳನ್ನು ಉತ್ಪಾದನೆ ಮಾಡಿ ಬಳಕೆ ಮಾಡುವುದು ಇಂದಿನ ಅನಿವಾರ್ಯತೆಗಳಲ್ಲಿ ಒಂದಾಗಿದೆ. ಈ ನಿಟ್ಟಿನಲ್ಲಿ ಇಂತಹ ಸಂಘ, ಸಂಸ್ಥೆಗಳು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಸಮಾರಂಭವನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೌಂಡೇಶನ್ ಅಧ್ಯಕ್ಷ ಅರುಣ ಸಾಲಳ್ಳಿ ವಹಿಸಿದ್ದರು.
ಇದೇ ಸಂದರ್ಭದಲ್ಲಿ ನೇತ್ರ ಶಸ್ತ್ರಚಿಕಿತ್ಸೆ ಮಾಡಿದ ಡಾ|| ಆನಂದ ಎತ್ತಿನಮನಿ, ಡಾ|| ಕಿರಣ ಪೂಜಾರಿ ಹಾಗೂ ರಕ್ತದಾನ ಮಾಡಿದ ದಾನಿಗಳನ್ನು ಫೌಂಡೇಶನ ವತಿಯಿಂದ ಸತ್ಕರಿಸಲಾಯಿತು.
ಈ ನಿವೃತ ಶಿಕ್ಷಕರಾದ ರವಿ ಡೇವಿಡ್, ಲತಾ ಕುರ್ತಕೋಟಿ, ಬಿ.ಕೆ.ಕುಲಕರ್ಣಿ ಸತೀಶ ಚಿಪ್ಪಲಕಟ್ಟಿ, ಸಂಜು ಚಿಪ್ಪಲಕಟ್ಟಿ, ಆನಂದ ಪಾಟೀಲ, ರಜಾಕ ತಳವಾರ ಸೇರಿದಂತೆ ಅನೇಕರು ಇದ್ದರು.
ಸಾಯಂಕಾಲ ನಗರದ ಸಾಯಿ ಮಂದಿರದಿಂದ ಉಚಿತ ಶಿರಡಿ ದರ್ಶನ ಯಾತ್ರೆಗೆ ಮುಖಂಡರಾದ ದಿಲೀಪ ಮೆಳವಂಕಿ ಹಾಗೂ ಕಿಶೋರ ಭಟ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಯಾತ್ರೆಗೆ ಇಲ್ಲಿಂದ 191 ಭಕ್ತಾಧಿಗಳು ಶಿರಡಿ ಯಾತ್ರೆಗೆ ತೆರಳಿದರು.