RNI NO. KARKAN/2006/27779|Thursday, November 21, 2024
You are here: Home » breaking news » ಗೋಕಾಕ:ವಿಶ್ವ ಸ್ಥನ್ಯಪಾನ ಸಪ್ತಾಹ ಆಚರಣೆ

ಗೋಕಾಕ:ವಿಶ್ವ ಸ್ಥನ್ಯಪಾನ ಸಪ್ತಾಹ ಆಚರಣೆ 

ವಿಶ್ವ ಸ್ಥನ್ಯಪಾನ ಸಪ್ತಾಹ ಆಚರಣೆ
ಗೋಕಾಕ ಅ 5 : ಮಗುವಿಗೆ ತಾಯಿ ಹಾಲಿಗಿಂತ ಪೌಷ್ಠಿಕವಾದ ಆಹಾರ ಬೇರೊಂದು ಇಲ್ಲವೆಂದು ಕೆಎಲ್‍ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಪ್ರೋ. ಡಾ. ಮನಿಷಾ ಭಂಡಾರಕರ ಹೇಳಿದರು.
ಶನಿವಾರ ಇಲ್ಲಿನ ಕೆಎಲ್‍ಇ ಇನ್‍ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್’ನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸ್ಥನ್ಯಪಾನ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಅಸಮರ್ಪಕ ಸ್ಥನ್ಯಪಾನದಿಂದ ಲಕ್ಷಾಂತರ ಮಕ್ಕಳು ಸಾವಿಗೀಡಾಗುತ್ತಿದ್ದಾರೆ. ಎದೆ ಹಾಲಿನ ಸಾಟಿ ಇಲ್ಲದ ಮೌಲ್ಯದ ಹೊರತಾಗಿಯೂ ಸ್ಥನ್ಯಪಾನ ಮಾಡಿಸುವವರ ಸಂಖ್ಯೆ ದೇಶದಲ್ಲಿ ಕಡಿಮೆ ಇರುತ್ತದೆ. ತಾಯಂದಿರು ತಮ್ಮ ಮಕ್ಕಳ ಹಾಗೂ ತಮ್ಮ ಆರೋಗ್ಯ ರಕ್ಷಣೆಗಾಗಿ ಸ್ಥನ್ಯಪಾನಕ್ಕೆ ಮಹತ್ವ ನೀಡುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ರೂಪಾ ಮುನವಳ್ಳಿ, ಡಾ. ಅರುಣ ವಣ್ಣೂರ, ಡಾ. ಜ್ಯೋತಿ ಚೌಗಲಾ, ಪ್ರಾಚಾರ್ಯ ಡಾ. ಈರಣ್ಣ ಕಾಜಗಾರ ಇದ್ದರು.

Related posts: