ಗೋಕಾಕ:ತಾಯಂದಿರು ತಮ್ಮ ಮಗುವಿಗೆ ವೈದ್ಯರ ಸಲಹೆಯಂತೆ ಕಾಲಕಾಲಕ್ಕೆ ಮಗುವಿಗೆ ಲಸಿಕೆಗಳನ್ನು ಹಾಕಿಸಿ : ಶಾಸಕ ರಮೇಶ್
ತಾಯಂದಿರು ತಮ್ಮ ಮಗುವಿಗೆ ವೈದ್ಯರ ಸಲಹೆಯಂತೆ ಕಾಲಕಾಲಕ್ಕೆ ಮಗುವಿಗೆ ಲಸಿಕೆಗಳನ್ನು ಹಾಕಿಸಿ : ಶಾಸಕ ರಮೇಶ್
ಗೋಕಾಕ ಅ 7 : ತಾಯಂದಿರು ತಮ್ಮ ಮಗುವಿಗೆ ವೈದ್ಯರ ಸಲಹೆಯಂತೆ ಕಾಲಕಾಲಕ್ಕೆ ಲಸಿಕೆಗಳನ್ನು ಹಾಕಿಸುವದರೊಂದಿಗೆ ಮಗುವಿನ ಆರೋಗ್ಯ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಶಾಸಕ ರಮೇಶ ಜಾರಕಿಹೊಳಿ ಅವರು ಹೇಳಿದರು.
ಸೋಮವಾರದಂದು ಇಲ್ಲಿನ ಸತೀಶ ನಗರದಲ್ಲಿ ಆರೋಗ್ಯ ಇಲಾಖೆಯಿಂದ ಪ್ರಾರಂಭಿಸಲಾದ ನಮ್ಮ ಕ್ಲಿನಿಕ್ ಉದ್ಘಾಟಿಸಿ ಧಡಾರ, ರೂಬೇಲಾ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಸದೃಢ ಆರೋಗ್ಯದಿಂದ ನೆಮ್ಮದಿಯ ಬದುಕು ಸಾಧ್ಯ ಎಲ್ಲರೂ ಆರೋಗ್ಯ ರಕ್ಷಣೆಗೆ ಈ ವೈದ್ಯಕೀಯ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಮಂಜುನಾಥ್ ಕೆ , ತಾಲೂಕು ವೈದ್ಯಾಧಿಕಾರಿ ಎಂ.ಎಸ್.ಕೊಪ್ಪದ, ವೈದ್ಯಾಧಿಕಾರಿಗಳಾದ ಡಾ.ರವೀಂದ್ರ ಅಂಟಿನ, ಡಾ.ಟಿ.ಎಸ್.ಹೆಬ್ಬಳಿ, ನಗರಸಭೆ ಮಾಜಿ ಅಧ್ಯಕ್ಷ ಜಯಾನಂದ ಹುಣ್ಣಚ್ಯಾಳಿ, ಮಾಜಿ ಉಪಾಧ್ಯಕ್ಷ ಬಸವರಾಜ ಆರೆನ್ನವರ ಹಾಗೂ ಸದಸ್ಯರು ಹಾಗೂ ಆರೋಗ್ಯ ಸಿಬ್ಬಂದಿಗಳು ಇದ್ದರು