RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ವಿದ್ಯಾರ್ಥಿಗಳು ಇಂದಿನ ಸ್ವರ್ಧಾತ್ಮಕ ಯುಗದಲ್ಲಿ ತಮ್ಮಲ್ಲಿರುವ ಪ್ರತಿಭೆಗಳನ್ನು ವೃದ್ಧಿಸಿಕೊಳ್ಳಿ : ಈರಸಂಗ್ಯಯಾ

ಗೋಕಾಕ:ವಿದ್ಯಾರ್ಥಿಗಳು ಇಂದಿನ ಸ್ವರ್ಧಾತ್ಮಕ ಯುಗದಲ್ಲಿ ತಮ್ಮಲ್ಲಿರುವ ಪ್ರತಿಭೆಗಳನ್ನು ವೃದ್ಧಿಸಿಕೊಳ್ಳಿ : ಈರಸಂಗ್ಯಯಾ 

ವಿದ್ಯಾರ್ಥಿಗಳು ಇಂದಿನ ಸ್ವರ್ಧಾತ್ಮಕ ಯುಗದಲ್ಲಿ ತಮ್ಮಲ್ಲಿರುವ ಪ್ರತಿಭೆಗಳನ್ನು ವೃದ್ಧಿಸಿಕೊಳ್ಳಿ : ಈರಸಂಗ್ಯಯಾ

ಗೋಕಾಕ ಅ 11 : ವಿದ್ಯಾರ್ಥಿಗಳು ಇಂದಿನ ಸ್ವರ್ಧಾತ್ಮಕ ಯುಗದಲ್ಲಿ ತಮ್ಮಲ್ಲಿರುವ ಪ್ರತಿಭೆಗಳನ್ನು ವೃದ್ಧಿಸಿಕೊಂಡು ಪ್ರತಿಭಾವಂತರಾಗಿರೆಂದು ಕೌಶಲ್ಯ ಅಭಿವೃದ್ಧಿ ತರಬೇತಿದಾರ ಹಾಗೂ ಲೇಖಕ ಈರಸಂಗ್ಯಯಾ ಬಾಗೋಜಿಮಠ ಹೇಳಿದರು.
ಶುಕ್ರವಾರದಂದು ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿ ಮಹಾವಿದ್ಯಾಲಯದಲ್ಲಿ ಐ.ಕ್ಯೂ.ಎ.ಸಿ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಕಾಲೇಜಿನ ಹಳೆಯ ವಿದ್ಯಾರ್ಥಿ ಈರಸಂಗ್ಯಯಾ ಬಾಗೋಜಿಮಠ ರಚಿಸಿದ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿ ಕೃತಿಯನ್ನು ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಪುಸ್ತಕಗಳನ್ನು ಓದುವದರಿಂದ ವ್ಯಕ್ತಿಯ ವ್ಯಕ್ತಿತ್ವ ವಿಕಸನಗೊಂಡು ಸಾಧನೆಗೆ ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯೊಂದಿಗೆ ಗುರುಗಳ ಮಾರ್ಗದರ್ಶನದಲ್ಲಿ ಕಠಿಣ ಪರಿಶ್ರಮದಿಂದ ಪ್ರಯತ್ನ ಶೀಲರಾಗಿ ಉತ್ತಮ ಬದುಕನ್ನು ರೂಪಿಸಿಕೊಳ್ಳುವಂತೆ ಕರೆ ನೀಡಿದರು.
ಕೃತಿಯನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಲೋಕಾರ್ಪಣೆಗೊಳಿಸಿದರು
ವೇದಿಕೆಯಲ್ಲಿ ಪ್ರಾಚಾರ್ಯ ಐ.ಎಸ್.ಪವಾರ, ಉಪನ್ಯಾಸಕಿ ಡಾ.ಮಹಾನಂದಾ ಪಾಟೀಲ, ವಿದ್ಯಾರ್ಥಿ ಪ್ರತಿನಿಧಿ ಭಾಗ್ಯಶ್ರೀ ಕಾಂಬ್ಳೆ ಇದ್ದರು
ಕೀರ್ತಿ ಕೋಟಗಿ ಸ್ವಾಗತಿಸಿದರು, ಎಸ್.ಎಚ. ತಿಪ್ಪನ್ನವರ ನಿರೂಪಿಸಿದರು. ವಿಜಯಶ್ರೀ ಹಿರೇಮಠ ವಂದಿಸಿದರು.

Related posts: