RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಗೋಕಾಕ ತಾಲೂಕನ್ನು ನೂತನ ಜಿಲ್ಲೆ ಮಾಡುವಂತೆ ಆಗ್ರಹಿಸಿ ಕರವೇ ಮನವಿ

ಗೋಕಾಕ:ಗೋಕಾಕ ತಾಲೂಕನ್ನು ನೂತನ ಜಿಲ್ಲೆ ಮಾಡುವಂತೆ ಆಗ್ರಹಿಸಿ ಕರವೇ ಮನವಿ 

ಗೋಕಾಕ ತಾಲೂಕನ್ನು ನೂತನ ಜಿಲ್ಲೆ ಮಾಡುವಂತೆ ಆಗ್ರಹಿಸಿ ಕರವೇ ಮನವಿ

ಗೋಕಾಕ ಅ 3: ಗೋಕಾಕ ತಾಲೂಕನ್ನು ನೂತನ ಜಿಲ್ಲೆ ಎಂದು ಘೋಷಣೆ ಮಾಡುವಂತೆ ಆಗ್ರಹಿಸಿ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಗಳವಾರದಂದು ನಗರದಲ್ಲಿ ಪ್ರತಿಭಟನೆ ನಡೆಯಿಸಿ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಗೋಕಾಕ ನೂತನ ಜಿಲ್ಲೆಯನ್ನಾಗಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದರು.
ಕಳೆದ ನಾಲ್ಕು ದಶಕಗಳಿಂದ ಗೋಕಾಕ ತಾಲೂಕನ್ನು ನೂತನ ಜಿಲ್ಲೆಯನ್ನಾಗಿಸಿಲು ಹಲವಾರು ಹೋರಾಟಗಳು ನಡೆದಿವೆ, ಈಗಲೂ ಸ‌ಹ ನಡೆಯುತ್ತಿವೆ. ಅವಿಭಜಿತ ಬೆಳಗಾವಿ ಜಿಲ್ಲೆಯನ್ನು ವಿಂಗಡಿಸಿ ಬೇರೆ ತಾಲೂಕುಗಳನ್ನು ಜಿಲ್ಲೆ ಮಾಡಲು ಹಿಂದಿನ ಸಕಾರಗಳು ನೇಮಿಸಿದ ಸಮಿತಿಗಳಲ್ಲಿ ಪಿ.ಸಿ.ಗದ್ದಿಗೌಡರ, ವಾಸುದೇವ ಮತ್ತು ಹುಂಡೆಕರ ಸಮಿತಿಗಳು ಬೆಳಗಾವಿ ಜಿಲ್ಲೆಯನ್ನು ವಿಂಗಡಿಸುವುದಾರದೆ ಗೋಕಾಕ ತಾಲೂಕನ್ನು ನೂತನ ಜಿಲ್ಲೆ ಎಂದು ಘೋಷಿಸಬೇಕು ಎಂದು ಸರಕಾರಕ್ಕೆ ವರದಿಗಳನ್ನು ಸಲ್ಲಿಸಿವೆ. ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್ ಪಟೇಲರ ಸರಕಾರ ರಾಜ್ಯದಲ್ಲಿ ನೂತನ ಜಿಲ್ಲೆಗಳನ್ನು ಮಾಡುವ ನಿರ್ಧಾರ ಕೈಗೊಂಡು ಗದಗ ಸೇರಿದಂತೆ ಇತರ ಜಿಲ್ಲೆಗಳ ಜೊತೆಗೆ ಗೋಕಾಕನ್ನು ಸಹ ಹೊಸ ಜಿಲ್ಲೆ ಎಂದು ಘೋಷಿಸಿತ್ತು‌ ಆದರೆ ಅಂದು ದಿವಂಗತ ಪಾಟೀಲ ಪುಟ್ಟಪ್ಪ ಅವರ ನೇತೃತ್ವದಲ್ಲಿ ಕೆಲ ಸಂಘಟನೆಯ ಹೋರಾಟಗಾರರು ಅಖಂಡ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿದರೆ ಬೆಳಗಾವಿಯಲ್ಲಿ ಮರಾಠಿಗರ ಪ್ರಾಬಲ್ಯ ಹೆಚ್ಚಾಗುತ್ತದೆ ಎಂಬ ಕಾರಣವನ್ನು ನೀಡಿ ಸರಕಾರದ ಮೇಲೆ ಒತ್ತಡ ತಂದು ದೊಡ್ಡ ರಂಪಾಟವನ್ನು ಸೃಷ್ಟಿಸಿದರು. ಇದರಿಂದ ದಿವಂಗತ ಜೆ.ಎಚ್.ಪಟೇಲರು ಗೋಕಾಕ ನೂತನ ಜಿಲ್ಲೆಯ ಘೋಷಣೆಯನ್ನು ಹಿಂದಕ್ಕೆ ಪಡೆದರು ಹಾಗಾಗಿ ಗೋಕಾಕ ಜಿಲ್ಲೆಯ ಕೂಗು ಬರೀ ಕೂಗಾಗಿ ಉಳಿದಿದೆ. ಕಾರಣ ಈಗ ನಮ್ಮ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಮತ್ತು ಚಿಕ್ಕೋಡಿ ತಾಲೂಕುಗಳನ್ನು ಜಿಲ್ಲೆ ಮಾಡವ ಧ್ವನಿಯನ್ನು ಎತ್ತಿದ್ದಾರೆ ಅವರ ಬೇಡಿಕೆಯೂ ನ್ಯಾಯಯುತವಾಗಿದ್ದು, ಬೆಳಗಾವಿ ನಗರವನ್ನು ಬಿಟ್ಟು ಅತೀ ವೇಗವಾಗಿ ಬೆಳೆಯುತ್ತಿರುವ ನಗರ ಗೋಕಾಕ ವಾಣಿಜ್ಯವಾಗಿ ತುಂಬಾ ಬೆಳವಣಿಗೆಯಾಗಿದ್ದು, ಕಳೆದ 4 ದಶಕಗಳಿಂದ ನಡೆಯುತ್ತಿರುವ ಹೋರಾಟವನ್ನು ಪರಿಗಣಿಸಿ ಗೋಕಾಕ ತಾಲೂಕನ್ನು ನೂತನ ಜಿಲ್ಲೆಯ ಎಂದು ಘೋಷಿಸಬೇಕು ಎಂದು ಸಮಸ್ತ ತಾಲೂಕಿನ ಜನತೆ ವತಿಯಿಂದ ಕರವೇ ಗೋಕಾಕ ತಾಲೂಕು ಘಟಕವು ಮನವಿಯಲ್ಲಿ ವಿನಂತಿಸಿದೆ.
ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ಸಾದಿಕ ಹಲ್ಯಾಳ, ಮಹಾದೇವ ಮಕ್ಕಳಗೇರಿ, ಹನಿಪಸಾಬ ಸನದಿ, ಮುಗುಟ ಪೈಲವಾನ, ದೀಪಕ ಹಂಜಿ, ಬಸವರಾಜ ಗಾಡಿವಡ್ಡರ, ಮಲ್ಲು ಸಂಪಗಾರ, ರಾಮ ಕಂಗನೊಳಿ, ರಾಮ ಕುಡ್ಡೆಮ್ಮಿ, ರಾಜೇಂದ್ರ ಕೆಂಚನಗುಡ್ಡ, ಬಾಹುಬಲಿ ಖಾರೆಪಠಾಣ, ಶ್ರೀಶೈಲ ಕುಂಬಾರ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts: