ಗೋಕಾಕ:ಜಗತ್ತಿನ ಎಲ್ಲಾ ಧರ್ಮಗಳು ಜನರಿಗೆ ಮಾನವೀಯ ಮೌಲ್ಯಗಳನ್ನು ಕಲಿಸುತ್ತಿವೆ : ಮೌಲಾನಾ ಪಿ.ಎಂ.ಮುಜಂಮ್ಮಿಲ್
ಜಗತ್ತಿನ ಎಲ್ಲಾ ಧರ್ಮಗಳು ಜನರಿಗೆ ಮಾನವೀಯ ಮೌಲ್ಯಗಳನ್ನು ಕಲಿಸುತ್ತಿವೆ : ಮೌಲಾನಾ ಪಿ.ಎಂ.ಮುಜಂಮ್ಮಿಲ್
ಗೋಕಾಕ ಅ 10 : ಜಗತ್ತಿನ ಎಲ್ಲಾ ಧರ್ಮಗಳು ಜನರಿಗೆ ಮಾನವೀಯ ಮೌಲ್ಯಗಳನ್ನು ಕಲಿಸುತ್ತಿದ್ದು, ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪುನಿತರಾಗಬೇಕು ಎಂದು ಬೆಂಗಳೂರಿನ ಮೌಲಾನಾ ಪಿ.ಎಂ ಮುಜಂಮ್ಮಿಲ್ ಹೇಳಿದರು.
ಸೋಮವಾರದಂದು ಸಾಯಂಕಾಲ ಇಲ್ಲಿನ ಅಂಜುಮನ್ ಇಸ್ಮಾಯಿಲ್ ಕಮಿಟಿಯವರು ಈದ ಮಿಲಾದ ಪ್ರಯುಕ್ತ ಹಮ್ಮಿಕೊಂಡ ಸಿರತ-ಉನ ನಬಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಮಾನಗಳಲ್ಲಿ ಸಮಯದ ಮಹತ್ವ ಪಾತ್ರವಹಿಸಿದ್ದು, ಪ್ರತಿಯೊಬ್ಬರು ಸಮಯ ಪಾಲನೆಯೊಂದಿಗೆ ಸಮಾಜದ ಹಿರಿಯರು , ಸೂಫಿ, ಸಂತರು ಹಾಕಿ ಕೊಟ್ಟ ದಾರಿಯಲ್ಲಿ ಸಾಗಬೇಕು. ಇಂದಿನ ಯುವ ಪೀಳಿಗೆ ಧಾರ್ಮಿಕ ಆಚರಣೆಗಳ ಬಗ್ಗೆ ತಿಳಿದುಕೊಳ್ಳಬೇಕು. ಜೀವ ಸತ್ತರೆ ಮತ್ತೆ ಜೀವಂತ ವಾಗಲಾರದು ಆದರೆ ಹೃದಯ ಸತ್ತರೆ ಅದನ್ನು ಸೂಫಿ , ಸಂತರು , ಮಹಾತ್ಮರು ಹಾಕಿಕೊಟ್ಟ ಮಾರ್ಗ ಹಾಗೂ ಅವರ ಆದರ್ಶಗಳನ್ನು ಜೀವನದಲ್ಲಿ ಪಾಲಿಸಿದರೆ ಹೃದಯ ಮತ್ತೆ ಜೀವಂತವಾಗಬಹುದು ಅದನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ರೂಡಿಸಿಕೊಂಡು ಸದೃಢ ಸಮಾಜ ನಿರ್ಮಿಸಲು ಶ್ರಮಿಸಬೇಕು. ವಿದ್ಯಾರ್ಥಿ ಜೀವನದಲ್ಲಿಯೆ ತಮ್ಮ ಮಕ್ಕಳ ಮೇಲೆ ನಿಗಾವಹಿಸಿ ಅವರನ್ನು ಸರಿಯಾದ ಮಾರ್ಗದಲ್ಲಿ ನಡೆಸಬೇಕು ಅಂದಾಗ ಮಾತ್ರ ಅವರು ದೊಡ್ಡವರಾಗಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಲು ಸಾಧ್ಯ ಎಂದ ಅವರು ಯುವಕರು ಹಿರಿಯ ಮಾರ್ಗದರ್ಶನದಲ್ಲಿ ನಡೆದರೆ ಎರೆಡು ಲೋಕದಲ್ಲಿ ಯಶಸ್ವಿಯನ್ನು ಸಾಧಿಸಬಹುದು ಆ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕು ಎಂದರು.
ಅಂಜುಮನ್ ಇಸ್ಲಾಂ ಕಮಿಟಿಯ ಅಧ್ಯಕ್ಷ ಜಾವೇದ್ ಗೋಕಾಕ ಮಾತನಾಡಿ ಅಂಜುಮನ್ ಇಸ್ಲಾಂ ಕಮಿಟಿಯು ಕಳೆದ ಹಲವು ವರ್ಷಗಳಿಂದ ಸಾಮಾಜದಲ್ಲಿ ಬಿದ್ದವರನ್ನು ಮೇಲೆತ್ತುವ ಕಾರ್ಯಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಸಂಸ್ಥೆಯಿಂದ ಸಮುದಾಯದ ವಿದ್ಯಾರ್ಥಿ ಸಮುದಾಯಕ್ಕೆ ಅನುಕೂಲವಾಗುವ ಹತ್ತು, ಹಲವು ಕ್ರೀಯಾತ್ಮಕ ಕಾರ್ಯ ಮಾಡುವ ಉದ್ದೇಶ ಹೊಂದಿದ್ದು ಎಲ್ಲರೂ ಸಹಾಯ, ಸಹಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಮೌಲಾನಾ ಬಶೀರುಲ್ಲಹಕ್ಕ ಸಾಹಬ, ಹಾಫೀಜ ಶಮ್ಮಶೇದ ಆಲಮ, ಮೌಲಾನಾ ಉಬೆದುಲ್ಲಾ ಖಾರಿ ಗುಲಾಮರಾಶೀದಿಸಾಬ, ಮುಖಂಡರುಗಳಾದ ಕುತುಬುದ್ದೀನ ಗೋಕಾಕ, ಮಾಸೀನ ಖೋಜಾ, ಇಲಾಹಿ ಖೈರದಿ, ಜುಬೇರ ತ್ರಾಸಗಾರ, ಹಾಜೀ ಗಫಾರ ಖಾಗಜಿ, ರಪೀಕ ಗುಡವಾಲೆ, ಬಾಬು ಘೋಡಗೇರಿ, ಜಮಾಲ ಹುಕ್ಕೇರಿ, ದಾದಾಪೀರ ಶಾಬಾಶಖಾನ, ಹಾಜಿ ಗೌಸಸಾಬ ಬೆಟಗೇರಿ, ಗೌಸಸಾಬ ಮುಜಾವರ, ಇಸ್ಮಾಯಿಲ್ ಜಮಾದಾರ, ಜಾಕೀರ ಕುಡಚಿಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.