RNI NO. KARKAN/2006/27779|Monday, December 23, 2024
You are here: Home » breaking news » ಗೋವಾ:ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ನಾನು ಜೋಳಿಗೆ ಹಾಕಲು ಸಿದ್ದ : ಗೋವಾ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುರುಘರಾಜೇಂದ್ರ ಶ್ರೀ ಅಭಿಮತ

ಗೋವಾ:ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ನಾನು ಜೋಳಿಗೆ ಹಾಕಲು ಸಿದ್ದ : ಗೋವಾ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುರುಘರಾಜೇಂದ್ರ ಶ್ರೀ ಅಭಿಮತ 

ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ನಾನು ಜೋಳಿಗೆ ಹಾಕಲು ಸಿದ್ದ : ಗೋವಾ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುರುಘರಾಜೇಂದ್ರ ಶ್ರೀ ಅಭಿಮತ

ಗೋವಾ ( ಪಣಜಿ) ನ 1 : ಗೋವಾ ಕನ್ನಡ ಭವನ ನಿರ್ಮಾಣಕ್ಕೆ ನಾನು ಜೋಳಿಗೆ ಹಾಕಲು ಸಿದ್ದ ಎಂದ ಅವರು ಗೋವಾ ಕನ್ನಡಿಗರ ಹಿತ ಕಾಪಾಡುವ ನಿಟ್ಟಿನಲ್ಲಿ ಸದಾ ಗೋವಾಕ್ಕೆ ಬರಲು ಸಿದ್ಧನಿದ್ದೇನೆ ಎಂದು ಕರ್ನಾಟಕ ಗೋಕಾಕನ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಬುಧವಾರದಂದು ಪಣಜಿ ನಗರದಲ್ಲಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಹಾಗೂ ಗೋವಾ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಕರ್ನಾಟಕ ರಾಜ್ಯೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವಹಿಸಿ ಮಾತನಾಡಿದರು
ಗೋವಾದಲ್ಲಿ ಕನ್ನಡ ಭವನವನ್ನು ನಿರ್ಮಿಸಲು ಸರಕಾರ ಅನುದಾನಕ್ಕೆ ಕೈ ಚಾಚದೆ ಗೋವಾದಲ್ಲಿ ನೆಲೆಸಿರುವ 3 ಲಕ್ಷ ಕನ್ನಡಿಗರು ಕೂಡಿ ಸ್ವಂತ ಹಣದಲ್ಲಿ ಕನ್ನಡ ಭವನ ಕೊಟ್ಟೋಣ. ಕನ್ನಡ ಭಾಷೆಯ ಮೇಲೆ ಅಭಿಮಾನ ನಿರಂತರ ಇರಬೇಕು ಕನ್ನಡ ಭಾಷೆಯ ಮೇಲೆ ನಿಷ್ಠೆ ಇರಬೇಕು ಆ ನಿಟ್ಟಿನಲ್ಲಿ ಗೋವಾ ಕನ್ನಡಿಗರು ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ
ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ‌.ಸಿ.ಸೋಮಶೇಖರ್ ಮಾತನಾಡಿ ಕನ್ನಡ ನಾಡು ಸಂಪತ್ತಭರಿತ ನಾಡಾಗಿದೆ. ಹೊರನಾಡಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸುತ್ತಿದ್ದಾರೆ. ಗೋವಾ ಕನ್ನಡ ತಾಯಂದಿರು ತಮ್ಮ ಮಕ್ಕಳಿಗೆ ಓದಲು ಬರೆಯಲು ಬರುವ ಹಾಗೆ ಸ್ವಲ್ಪ ಕಾಳಜಿ ವಹಿಸಿ ಕಾರ್ಯನಿರ್ವಹಿಸಬೇಕು. ಕರ್ನಾಟಕ ಸರಕಾರ ಗೋವಾ ಕನ್ನಡ ಸಾಹಿತ್ಯ ಅಕ್ಯಾಡಮಿಯನ್ನು ಸ್ಥಾಪಿಸಿ ಗೋವಾದಲ್ಲಿ ಕನ್ನಡ ಕೆಲಸ ಮಾಡಲು ಅನುವು ಮಾಡಿಕೊಡಬೇಕು.ಇಡೀ ವಿಶ್ವಕ್ಕೆ ಮಾನವ ಸಂವಿಧಾನ ನೀಡದ ವಚನಕಾರರು ಪಾತ್ರ ಸಹ ಬಹಳ ಮುಖ್ಯವಾಗಿದೆ. ಕನ್ನಡ ಸಾಹಿತ್ಯಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ದೊರೆತಿವೆ.ಆ ಪರಂಪರೆಯನ್ನು ಕನ್ನಡಿಗರು ಮುನ್ನಡೆಸಿಕೊಂಡು ಹೋಗಬೇಕಾಗಿದೆ. ಗೋವಾದ ಕನ್ನಡಿಗರು ಭುವನೇಶ್ವರಿ ತಾಯಿಯ ಸೇವೆ ಮಾಡುತ್ತಿರುವುದು ಶ್ಲಾಘನೀಯ. ಎಲ್ಲರೂ ಒಟ್ಟಿಗೆ ಸೇರಿ ಕನ್ನಡದ ತೇರನ್ನು ಎಳೆಯಬೇಕಾಗಿದೆ. ಆ ನಿಟ್ಟಿನಲ್ಲಿ ಎಲ್ಲರೂ ಕನ್ನಡದ ಧ್ವಜದ
ಕರವೇ ಗೋಕಾಕ ತಾಲೂಕು ಅಧ್ಯಕ್ಷ ಬಸವರಾಜ ಖಾನಪ್ಪನವರ ಮಾತನಾಡಿ ಗೋವಾ ರಾಜ್ಯದ ಕನ್ನಡಿಗರು ಒಟ್ಟಿನಿಂದ ಇದ್ದು, ರಾಜಕೀಯವಾಗಿಯೂ ಸಹ ಪ್ರಭಲವಾಗುವ ನಿಟ್ಟಿನಲ್ಲಿ ಮುಂದಾಗಿ ರಾಜ್ಯದಲ್ಲಿ ನೆಲೆಸಿರುವ ಎಲ್ಲ 4 ಲಕ್ಷ ಕನ್ನಡಿಗರು ಒಂದಾಗಿ 3 ರಿಂದ 4 ಕನ್ನಡ ಶಾಸಕರನ್ನು ಆಯ್ಕೆಮಾಡಿ ಗೋವಾ ವಿಧಾನಸಭೆಗೆ ಕಳುಹಿಸಬೇಕು ಇದಕ್ಕೆ ಗೋವಾ ರಾಜ್ಯದ ಕನ್ನಡದ ಕುವರ ಸಿದ್ದಣ್ಣ ಮೇಟಿ ಮುಂದಾಳತ್ವ ತಗೆದುಕೊಳ್ಳಬೇಕು ಎಂದು ಖಾನಪ್ಪನವರ ಆಗ್ರಹಿಸಿದರು.
ಇದೆ ಸಂದರ್ಭದಲ್ಲಿ ಗೋವಾದಲ್ಲಿ ಸಾಧನೆ ಗೈದ ಕನ್ನಡಿಗರನ್ನು ಸತ್ಕರಿಸಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯದ ಅಧ್ಯಕ್ಷ ಸಿದ್ದಣ್ಣ ಮೇಟಿ, ಶ್ರೀಮತಿ ನಿಲಮ್ಮಾ ಮೇಟಿ, ನಿರ್ಮಲಾ ಹೋಸಪೇಟೆ, ಪಣಜಿ ಕಸಾಪ ಅಧ್ಯಕ್ಷ ಹನುಮಂತ ಗೋರವರ್, ನವೀನ ಕುಮಾರ್ ಹೋಸಪೇಟೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

Related posts: