ಗೋಕಾಕ:ಇಂದಿನ ಆಧುನಿಕ ಯುಗದಲ್ಲಿ ವೈಚಾರಿಕ ಚಿಂತನೆಗಳಿಂದ ನಾವು ದೂರವಾಗುತ್ತಿದ್ದೇವೆ : ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಬೇಸರ
ಇಂದಿನ ಆಧುನಿಕ ಯುಗದಲ್ಲಿ ವೈಚಾರಿಕ ಚಿಂತನೆಗಳಿಂದ ನಾವು ದೂರವಾಗುತ್ತಿದ್ದೇವೆ : ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಬೇಸರ
ಗೋಕಾಕ ನ 5 : ಇಂದಿನ ಆಧುನಿಕ ಯುಗದಲ್ಲಿ ವೈಚಾರಿಕ ಚಿಂತನೆಗಳಿಂದ ನಾವು ದೂರವಾಗುತ್ತಿದ್ದೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು.
ರವಿವಾರದಂದು ನಗರದ ಕೆಎಲ್ಇ ಶಾಲಾ ಆವರಣದಲ್ಲಿ ಇಲ್ಲಿನ ಪೂರ್ಣಿಮಾ ಪ್ರಕಾಶನ ಹಮ್ಮಿಕೊಂಡ ಪ್ರೋ ಚಂದ್ರಶೇಖರ್ ಅಕ್ಕಿ ಅವರ ಮೂಲ ಕಥೆಯನ್ನು ಸಾಹಿತಿ ಮಾರುತಿ ದಾಸನ್ನವರ ಅವರು ನಾಟಕ ರೂಪಾಂತರ ಗೋಳಿಸಿ ರಚಿಸಿದ ಆ ಒಂದು ರಾತ್ರಿ ಪುಸ್ತಕ ಬಿಡುಗಡೆ ಮತ್ತು ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೋಳಿಸಿ ಅವರು ಮಾತನಾಡಿದರು.
ಓದುವ ಹವ್ಯಾಸಗಳು ಕಡಿಮೆಯಾಗುತ್ತಿರುವ ಸನ್ನಿವೇಶಗಳ ಸಮಾಜದಲ್ಲಿ ನಡೆಯುತ್ತಿವೆ ಅದನ್ನು ಯುವ ಜನಾಂಗಕ್ಕೆ ಕೊಡುವ , ಮುಟ್ಟಿಸುವ ಜವಾಬ್ದಾರಿ ನಮ್ಮಮೇಲಿದೆ. ಸಾಹಿತಿಗಳು ಬದಲಾವಣೆಯಾಗಬೇಕು ತಂತ್ರಜ್ಞಾನದ ಯುಗಕ್ಕೆ ಅನುಗುಣವಾಗಿ ಕೃತಿಗಳನ್ನು, ನಾಟಕಗಳನ್ನು ರಚಿಸಿ ಓದುವ ಗೀಳನ್ನು ಹಚ್ಚಬೇಕಾಗಿದೆ ಎಂದು ಬಿಇಓ ಜಿ.ಬಿ.ಬಳಗಾರ ಹೇಳಿದರು.
ಪ್ರೋ.ವಾಯ್ ಎಂ ಯಾಕೋಳಿ ಅವರು ಮಾತನಾಡಿ ಸತ್ಯಕ್ಕೆ ಈ ಕಾಲದಲ್ಲಿ ಬೆಲೆಇಲ್ಲಾ ಹೊಟ್ಟೆಯ ಹಸಿವು ಮನುಷ್ಯನಿಗೆ ಅತ್ಯಂತ ಹೀನ ಕೃತ್ಯ ಮಾಡುವುದಕ್ಕೆ ಪ್ರಚೋದಿಸುತ್ತಿದೆ ಎಂಬ ಎಲ್ಲಾ ಸನ್ನಿವೇಶವನ್ನು ನಾಟಕದಲ್ಲಿ ಲೇಖಕರು ಅತ್ಯಂತ ಸುಂದರವಾಗಿ ಸೃಷ್ಟಿಸಿ, ಕಥೆಗೆ ಕೊಡಬೇಕಾದ ಗೌರವವನ್ನು ಕೊಟ್ಟು ಲೇಖಕರು ಅದನ್ನು ನಾಟಕವನ್ನಾಗಿ ನಿರೂಪಿಸಿದ್ದಾರೆ. ಉತ್ತರ ಕರ್ನಾಟಕ ಭಾಷೆಯನ್ನು ನೈಜವಾಗಿ ಬಳಿಸಿ ಬದಲಾದ ಕಾಲಕ್ಕೆ ಅನುಗುಣವಾಗಿ ಒಳಿತು , ಕೆಡಕುಗಳ ಸಂಘರ್ಷವನ್ನು ನಾಟಕಕಾರ ಯಶಸ್ವಿಯಾಗಿ ಮೂಡಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ ಮಹಾಲಿಂಗ ಮಂಗಿ ವಹಿಸಿದ್ದರು.
ಈ ಸಂದರ್ಭದಲ್ಲಿ ಸಾಹಿತಿ ಪ್ರೋ ಚಂದ್ರಶೇಖರ್ ಅಕ್ಕಿ, ಬಿಇಒ ಅಜೀತ ಮನ್ನಿಕೇರಿ, ಪ್ರಕಾಶ ಹಿರೇಮಠ , ಡಾ.ಸಂಜಯ ಶಿಂಧಿಹಟ್ಟಿ, ಭಾರತಿ ಮದಬಾವಿ, ಮಾರುತಿ ದಾಸನ್ನವರ, ಪ್ರೋ. ಬಾಲಶೇಖರ ಬಂದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.