ಗೋಕಾಕ:ಬಡಿಗವಾಡ ಗ್ರಾಮಕ್ಕೆ ಹೆಚ್ಚುವರಿ ಬಸ ಸೇವೆ ಕಲ್ಪಿಸುವಂತೆ ಕರವೇ ಮನವಿ
ಬಡಿಗವಾಡ ಗ್ರಾಮಕ್ಕೆ ಹೆಚ್ಚುವರಿ ಬಸ ಸೇವೆ ಕಲ್ಪಿಸುವಂತೆ ಕರವೇ ಮನವಿ
ಗೋಕಾಕ ನ 11 : ತಾಲೂಕಿನ ಬಡಿಗವಾಡ ಗ್ರಾಮದ ಪ್ರೌಢಶಾಲೆ, ಕಾಲೇಜಿನ ವಿದ್ಯಾರ್ಥಿಗಳಿಗೆ ಸಮರ್ಪಕವಾದ ಬಸ್ ಸೌಕರ್ಯವಿಲ್ಲದೇ ಸರಿಯಾದ ಸಮಯಕ್ಕೆ ತರಗತಿಗೆ ಹೋಗಲಾಗುತ್ತಿಲ್ಲ. ಈ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದಿಂದ ಡಿಪ್ಪೋ ವ್ಯವಸ್ಥಾಪಕರಿಗೆ ಶನಿವಾರದಂದು ಮನವಿ ಸಲ್ಲಿಸಲಾಯಿತು.
ಬಸ್ ಸಮಯಕ್ಕೆ ಸರಿಯಾಗಿ ಬಾರದಿರುವುದರಿಂದ ತರಗತಿಗಳಿಗೆ ತಡವಾಗಿ ಬರುವುದು ಅಥವಾ ಬೆಳಗ್ಗೆ ಶಾಲೆಗೆ ಬೇಗ ಬರುವುದಕ್ಕೆ ಹಾಗೂ ಸಂಜೆ ಮನೆಗೆ ಹಿಂದಿರುಗಲು ಗಂಟೆಗಟ್ಟಲೆ ಕಾದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕೂಡಲೇ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ಸ ಒಂದನ್ನು ಬಿಟ್ಟು ವಿದ್ಯಾರ್ಥಿಗಳು ಹಾಗೂ ಬಡಿಗವಾಡ ಗ್ರಾಮದ ಹಾಗೂ ಅಕ್ಕಪಕ್ಕದ ಗ್ರಾಮದವರು ಪಡುತ್ತಿರುವ ತೊಂದರೆಯನ್ನು ಸರಿಪಡಿಸಿಬೇಕು.
ಬಸ್ ಪಾಸನ್ನ ಪಡೆದುಕೊಂಡು ಹಳ್ಳಿ ಹಾಗೂ ದೂರದ ಊರಿನಿಂದ ಬರುವ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಹಾಗೂ ಸಾಯಂಕಾಲ ಸಾಕಷ್ಟು ರೀತಿಯ ಸಮಸ್ಯೆಯನ್ನ ಎದುರಿಸುತ್ತಿದ್ದಾರೆ. ಸರಿಯಾದ ಸಮಯಕ್ಕೆ ತರಗತಿಗೆ ಹಾಜರಾಗಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಗೋಕಾಕ ಘಟಕದಿಂದ ಈ ಕೂಡಲೇ ಯಾವ ಮಾರ್ಗಕ್ಕೆ ಎಷ್ಟು ವಿದ್ಯಾರ್ಥಿಗಳು ಬರುತ್ತಿದ್ದಾರೆ ಎನ್ನುವ ಮಾಹಿತಿ ಕಲೆಹಾಕಿ ಅದರ ಅನುಸಾರವಾಗಿ ಬಸ್ಸನ್ನ ವ್ಯವಸ್ಥೆ ಮಾಡುವ ಮುಖಾಂತರ ಯಾವುದೇ ರೀತಿಯ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸರಿಪಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.ವಿದ್ಯಾರ್ಥಿಗಳಿಂದ ಪಾಸ್ ಕೊಡಲು ಸರಿಯಾದ ಹಣವನ್ನ ಪಾವತಿ ಮಾಡಿಸುತ್ತಾರೆ. ಆದರೆ ಸರಿಯಾದ ವ್ಯವಸ್ಥೆಯನ್ನು ಸಾರಿಗೆ ಘಟಕವು ನಿರ್ವಹಿಸುತ್ತಿಲ್ಲ. ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನ ಉಗ್ರ ಪ್ರತಿಭಟನೆಗೆ ಕರೆ ಕೊಡಬೇಕಾಗುತ್ತದೆ ಎನ್ನುವ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ಬಸವರಾಜ ಖಾನಪ್ಪನವರ, ದೀಪಕ್ ಹಂಜಿ, ನಿಜಾಮ ನಧಾಪ, ಮಹಾದೇವ ಮಕ್ಕಳಗೇರಿ, ರಾಮ ಕುಡ್ಡೆಮ್ಮಿ, ಅಶೋಕ್ ಬಂಡಿವಡ್ಡರ, ಮಲ್ಲು ಸಂಪಗಾರ,ಪರಪ್ಪ ಕೌಜಲಗಿ, ತುಕಾರಾಮ ಪಕ್ಕೆನ್ನವರ, ಕಿರಣ ತೋಗರಿ, ಸಂತೋಷ ಬಂಡಿವಡ್ಡರ, ಮಾಳಪ್ಪ ಮಾಳೇದಾರ,ಮಾಳಪ್ಪ ಮಾಕನ್ನವರ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು