RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ , ಪಟ್ಟಣ ಪಂಚಾಯತ್ ಹೊರಗುತ್ತಿಗೆ ಸಂಘದ ಸದಸ್ಯರಿಂದ ಸಚಿವರಿಗೆ ಮನವಿ

ಗೋಕಾಕ:ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ , ಪಟ್ಟಣ ಪಂಚಾಯತ್ ಹೊರಗುತ್ತಿಗೆ ಸಂಘದ ಸದಸ್ಯರಿಂದ ಸಚಿವರಿಗೆ ಮನವಿ 

ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ , ಪಟ್ಟಣ ಪಂಚಾಯತ್ ಹೊರಗುತ್ತಿಗೆ ಸಂಘದ ಸದಸ್ಯರಿಂದ ಸಚಿವರಿಗೆ ಮನವಿ

ಗೋಕಾಕ ನ 13 : ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಂತೆ ಘನ ತ್ಯಾಜ್ಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಕಸ ಸಾಗಿಸುವ ವಾಹನ ಚಾಲಕರು, ಲೋಡರ್ಸ್ ಕ್ಲೀನರ್ಸ್ ಹೆಲ್ಪರ್ಸ್ ಯೂಜಿಡಿ ಕಾರ್ಮಿಕರು ಸ್ಯಾನಿಟರಿ ಸೂಪರ್ ವೈಸರುಗಳನ್ನು ಏಕಕಾಲಕ್ಕೆ ಗುತ್ತಿಗೆ ಪದ್ಧತಿ ಬದಲು ನೇರಪಾವತಿಗೆ ತರಬೇಕು. 1964ರ ಪೌರಾಡಳಿತ ಕಾಯ್ದೆ ಪ್ರಕಾರ ಇವರನ್ನು ಪೌರಕಾರ್ಮಿಕರೆಂದು ಒಪ್ಪಿರುವುದರಿಂದ ಹಾಲೀ ನೇಮಕಾತಿಯಲ್ಲಿ ಇವರಿಗೂ ಅವಕಾಶ ಕಲ್ಪಿಸಬೇಕು ಹಾಗೂ ನೀರು ಸರಬರಾಜು ಸಹಾಯಕರು ಬೀದಿದೀಪ ನಿರ್ವಾಹಕರು ಸ್ಮಶಾನ ಕಾವಲುಗಾರರನ್ನು ಏಕಕಾಲಕ್ಕೆ ನೇರಪಾವತಿಗೆ ತಂದು ಖಾಯಂಗೊಳಿಸಬೇಕು ಎಂದು ಇಲ್ಲಿನ ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ , ಪಟ್ಟಣ ಪಂಚಾಯತ್ ಹೊರಗುತ್ತಿಗೆ ಸಂಘದ ಸದಸ್ಯರು ಸೋಮವಾರದಂದು ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಮನವಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಯಲಪ್ಪ ಬೆವಿನಗಿಡದ, ಶೆಟ್ಟೆಪ್ಪ ಕಳ್ಳಿಮನಿ, ಆನಂದ ಕಪರಟ್ಟಿ, ಪ್ರಶಾಂತ ಕೊಣ್ಣೂರ, ಮಾರುತಿ ಪೂಜೇರಿ, ಜಗದೀಶ್ ತೆಳಗಿನಮನಿ ಉಪಸ್ಥಿತರಿದ್ದರು.

Related posts: