ಗೋಕಾಕ:ದಿವಂಗತ ಡಾ.ಎಸ್.ಪಿ.ಬಿ. ಅವರ ನೆನಪಿನಲ್ಲಿ ದಿ.25 ರಂದು ಬೃಹತ್ ಸಂಗೀತ ಕಾರ್ಯಕ್ರಮ : ಗಾಯಕ ಚನ್ನಯ್ಯ ಮಾಹಿತಿ
ದಿವಂಗತ ಡಾ.ಎಸ್.ಪಿ.ಬಿ. ಅವರ ನೆನಪಿನಲ್ಲಿ ದಿ.25 ರಂದು ಬೃಹತ್ ಸಂಗೀತ ಕಾರ್ಯಕ್ರಮ : ಗಾಯಕ ಚನ್ನಯ್ಯ ಮಾಹಿತಿ
ಗೋಕಾಕ ನ 17 : ಸಂಗೀತ ಲೋಕದಲ್ಲಿ ದಾಖಲೆ ನಿರ್ಮಿಸಿ, ಸಂಗೀತ ಪ್ರೇಮಿಗಳ ಮನದಲ್ಲಿ ನೆಲೆಸಿರುವ ಖ್ಯಾತ ಹಿನ್ನೆಲೆ ಗಾಯಕ ದಿವಂಗತ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಸುಮಧುರ ಗೀತೆಗಳ ” ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲ್ಲಿ ” ಎಂಬ ಸಂಗೀತ ಕಾರ್ಯಕ್ರಮವನ್ನು ದಿನಾಂಕ 25 ಶನಿವಾರದಂದು ಸಾಯಂಕಾಲ 6 ಘಂಟೆಗೆ ನಗರದ ಶೂನ್ಯ ಸಂಪಾದನ ಮಠದ ಶ್ರೀ ಚೆನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಗೀತ ಕಲಾವಿದ, ಗಾಯಕ ಚನ್ನಯ್ಯ ಶಿಂಧೋಳಿಮಠ ಹೇಳಿದರು.
ಶುಕ್ರವಾರದಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿವರು, ಅಧ್ಯಕ್ಷತೆಯನ್ನು ಶಾಸಕ ರಮೇಶ ಜಾರಕಿಹೊಳಿ ಅವರು ವಹಿಸುವರು, ಮುಖ್ಯ ಅತಿಥಿಗಳಾಗಿ ತಹಶೀಲ್ದಾರ ಡಾ.ಮೋಹನ ಭಸ್ಮೆ, ಡಿ.ವಾಯ.ಎಸ್.ಪಿ. ಡಿ.ಎಮ್.ಮುಲ್ಲಾ, ಪೌರಾಯುಕ್ತ ಎಸ್.ಎ ಮಹಾಜನ್, ಬಿ.ಡಿ.ಸಿ.ಸಿ.ಬ್ಯಾಂಕ್ ಉಪಾಧ್ಯಕ್ಷ ಸುಭಾಷ್ ಢವಳೇಶ್ವರ, ನಿರ್ದೇಶಕ ನಿಲಕಂಠ ಕಪ್ಪಲಗುದ್ದಿ, ಸಾಹಿತಿ ಶಿರೀಷ್ ಜೋಶಿ ಆಗಮಿಸಲಿದ್ದಾರೆ. ಸಂಗೀತಾಸ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಳುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ರಾಮಚಂದ್ರ ಕಾಕಡೆ, ರವೀಂದ್ರ ಹೆಬ್ಬಾಳ, ಅಡಿವೇಶ ಗವಿಮಠ ಉಪಸ್ಥಿತರಿದ್ದರು.