ಘಟಪ್ರಭಾ:ರೈತರ ಒಂದೇ ಬೆಳೆಗೆ ಅಂಟಿಕೊಳ್ಳದೆ ಆಧುನಿಕ ತಂತ್ರಜ್ಞಾನವನ್ನು ಬಳಸಿ : ಶ್ರೀ ಕುಮಾರೇಂದ್ರ ಮಹಾಸ್ವಾಮಿಗಳು
ರೈತರ ಒಂದೇ ಬೆಳೆಗೆ ಅಂಟಿಕೊಳ್ಳದೆ ಆಧುನಿಕ ತಂತ್ರಜ್ಞಾನವನ್ನು ಬಳಸಿ : ಶ್ರೀ ಕುಮಾರೇಂದ್ರ ಮಹಾಸ್ವಾಮಿಗಳು
ಘಟಪ್ರಭಾ ಅ 17: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ಸಾವಳಗಿ-ಖಾನಾಪೂರ ಗ್ರಾಮ ಘಟಕವನ್ನು ಸಾವಳಗಿ ಸಿದ್ಧಸಂಸ್ಥಾನ ಮಠದ ಶ್ರೀ ಕುಮಾರೇಂದ್ರ ಮಹಾಸ್ವಾಮಿಗಳು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ರೈತರು ರಾಷ್ಟ್ರದ ಬೆನ್ನೆಲಬು ಆಗಿದ್ದಾರೆ. ಆದರೆ ಇಂದಿನ ಹವಾಮಾನ ವೈಪರ್ಯತೆಯಿಂದ ರೈತರು ಸಾಕಷ್ಟು ಸಂಕಷ್ಟಗಳನ್ನು ಎದುರಿಸುವಂತಾಗಿದೆ. ರೈತರ ಒಂದೇ ಬೆಳೆಗೆ ಅಂಟಿಕೊಳ್ಳದೆ ಆಧುನಿಕ ತಂತ್ರಜ್ಞಾನವನ್ನು ಬಳಿಸಿಕೊಂಡು ಬೇರೆ ಬೇರೆ ಲಾಭದಾಯಕ ಬೆಳೆಗಳನು ಬೆಳೆಯಬೇಕು ಎಂದರು.
ಹಸಿರು ಸೇನೆ ಜಿಲ್ಲಾಧ್ಯಕ್ಷ ಗಣಪತಿ ಇಳಿಗೇರ ಮಾತನಾಡಿ, ಈಗಾಗಲೆ ಜಿಲ್ಲಾಧಿಕಾರಿಗಳ ಮೂಲಕ ರೈತರ ಸಾಲ ಮನ್ನಾ ಮಾಡಲು ಸಾವಿರಾರು ರೈತರಿಂದ ಅರ್ಜಿ ಸಲ್ಲಿಸಲಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಅಲ್ಲದೇ ಈ ಬಾರಿ ಮಳೆ ಹೆಚ್ಚಾಗಿ ಅನೇಕ ರೈತರ ಬೆಳೆಗಳು ನಾಶವಾಗಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಸಿದ್ಧಲಿಂಗ ಪೂಜಾರಿ, ಮುತ್ತೆಪ್ಪಾ ಭಾಗನ್ನವರ, ಮಂಜು ಪೂಜೇರಿ, ಮಾರುತಿ ನಾಯಿಕ, ಸಿದ್ಧರಾಮಯ್ಯಾ ಪೂಜೇರಿ, ನಿರ್ಮಲಾ ಆಲಮರಿ, ಭೂಪಾಲ ಪಾಮಲದಿನ್ನಿ, ಸಾವಳಗಿ ಘಟಕ ಅಧ್ಯಕ್ಷ ಮಾರುತಿ ನಾಯಿಕ, ಉಪಾಧ್ಯಕ್ಷ ಪಾವಡಯ್ಯಾ ಹಿರೇಮಠ, ಕಾರ್ಯದರ್ಶಿ ಯಲ್ಲಪ್ಪಾ ಕರಿಗಾರ, ಲಗಮನ್ನಾ ಕರಿಗಾರ ಹಾಗೂ ನಾಲ್ಕು ಊರುಗಳ ರೈತರು, ಸೇರಿದಂತೆ ರೈತ ಸಂಘ ಹಾಗೂ ಹಸಿರು ಸೇನೆ ನೂರಾರು ಕಾರ್ಯಕರ್ತರು ಇದ್ದರು.