ಗೋಕಾಕ:ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೋಳುವರಿಂದ ದೇವರ ಅನುಗ್ರಹ ದೊಂದಿಗೆ ಪರಸ್ಪರರಲ್ಲಿ ಪ್ರೀತಿ ವಿಶ್ವಾಸ ಹೆಚ್ಚಾಗುತ್ತದೆ : ಶಾಸಕ ಲಖನ್ ಜಾರಕಿಹೊಳಿ
ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೋಳುವರಿಂದ ದೇವರ ಅನುಗ್ರಹ ದೊಂದಿಗೆ ಪರಸ್ಪರರಲ್ಲಿ ಪ್ರೀತಿ ವಿಶ್ವಾಸ ಹೆಚ್ಚಾಗುತ್ತದೆ : ಶಾಸಕ ಲಖನ್ ಜಾರಕಿಹೊಳಿ
ಗೋಕಾಕ ಡಿ 9 : ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೋಳುವರಿಂದ ದೇವರ ಅನುಗ್ರಹ ದೊಂದಿಗೆ ಪರಸ್ಪರರಲ್ಲಿ ಪ್ರೀತಿ ವಿಶ್ವಾಸ ಹೆಚ್ಚಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಹೇಳಿದರು.
ಶುಕ್ರವಾರದಂದು ನಗರದಲ್ಲಿ ಶ್ರೀ ಬಾಂವಿ ಕರೆಮ್ಮಾದೇವಿಯ ನಾಲ್ಕನೇ 4 ನೇ ವಾರ್ಷಿಕೋತ್ಸವ ನಿಮಿತ್ತ ಹಮ್ಮಿಕೊಂಡ ಕಾರ್ತಿಕ ದೀಪೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನಮ್ಮ ದೇಶ ಆಧ್ಯಾತ್ಮಿಕ ದೇಶವಾಗಿದ್ದು, ಧಾರ್ಮಿಕ ಕಾರ್ಯಗಳ ಆಚರಣೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಇಂದಿನ ಸ್ವರ್ಧಾತ್ಮಕ ಹಾಗೂ ಒತ್ತಡದ ಜೀವನದಲ್ಲಿ ಇಂತಹ ಆಚರಣೆಗಳಿಂದ ಮಾನಸಿಕ ನೆಮ್ಮದಿಯೊಂದಿಗೆ ನಮ್ಮ ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ನೀಡುವ ಕಾರ್ಯವಾಗುವದು ದೆ. ತಮ್ಮ ಮಕ್ಕಳಲ್ಲೂ ಧಾರ್ಮಿಕ ಮನೋಭವನ್ನು ಬೆಳೆಸಿ ಇಂತಹ ಕಾರ್ಯಗಳಲ್ಲಿ ಅವರು ಪಾಲ್ಗೋಳಲು ಪ್ರೇರೆಪಿಸುವಂತೆ ಕರೆ ನೀಡಿದರು.
ಸಾನಿಧ್ಯವನ್ನು ಇಲ್ಲಿನ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು
ವೇದಿಕೆಯಲ್ಲಿ ಸಿಪಿಐ ಶ್ರೀಶೈಲ ಬ್ಯಾಕೂಡ, ಕ್ರೀಡಾಪಟು ಮಂಜುಳಾ ಗೋರಗುದ್ದಿ, ಕರೆಮ್ಮಾದೇವಿ ಕಮಿಟಿ ಗೌರವಾಧ್ಯಕ್ಷ ರಿಯಾಜ ಅಹ್ಮದ್ ಖತೀಬ , ಅಧ್ಯಕ್ಷ ಶಟವಾಜಿ ನವವಡೆ, ಉಪಾಧ್ಯಕ್ಷ ಬಸವರಾಜ ಕುಬಸದ, ಸಾಯಿ ಸಮರ್ಥ ಪೌಂಡೇಶನನ ಸಂಜಯ ಚಿಪ್ಪಲಕಟ್ಟಿ, ವಿಶ್ವಹಿಂದೂ ಪರಿಷತ್ ನ ಆನಂದ ಪಾಟೀಲ ಉಪಸ್ಥಿತರಿದ್ದರು.