RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ:ಮೊಬೈಲಗಳಿಗೆ ಕವರ ಹಾಕಿ ರಕ್ಷಿಸುವ ನಾವು ಕಡ್ಡಾಯವಾಗಿ ತಲೆಗೆ ಹೆಲ್ಮೆಟ್ ಹಾಕಿ ನಮ್ಮ ಅಮೂಲ್ಯವಾದ ಜೀವ ರಕ್ಷಿಸಿಕೊಳ್ಳಿ : ಎಸ್.ಪಿ ಭೀಮಾಶಂಕರ ಸಲಹೆ

ಗೋಕಾಕ:ಮೊಬೈಲಗಳಿಗೆ ಕವರ ಹಾಕಿ ರಕ್ಷಿಸುವ ನಾವು ಕಡ್ಡಾಯವಾಗಿ ತಲೆಗೆ ಹೆಲ್ಮೆಟ್ ಹಾಕಿ ನಮ್ಮ ಅಮೂಲ್ಯವಾದ ಜೀವ ರಕ್ಷಿಸಿಕೊಳ್ಳಿ : ಎಸ್.ಪಿ ಭೀಮಾಶಂಕರ ಸಲಹೆ 

ಮೊಬೈಲಗಳಿಗೆ ಕವರ ಹಾಕಿ ರಕ್ಷಿಸುವ ನಾವು ಕಡ್ಡಾಯವಾಗಿ ತಲೆಗೆ ಹೆಲ್ಮೆಟ್ ಹಾಕಿ ನಮ್ಮ ಅಮೂಲ್ಯವಾದ ಜೀವ ರಕ್ಷಿಸಿಕೊಳ್ಳಿ : ಎಸ್.ಪಿ ಭೀಮಾಶಂಕರ ಸಲಹೆ

ಗೋಕಾಕ ಜ 4 : ಕೇವಲ 10 , 40 ಸಾವಿರ ಮೊಬೈಲಗಳಿಗೆ ಕವರ ಹಾಕಿ ರಕ್ಷಿಸುವ ನಾವು ಕಡ್ಡಾಯವಾಗಿ ತಲೆಗೆ ಹೆಲ್ಮೆಟ್ ಹಾಕಿ ನಮ್ಮ ಅಮೂಲ್ಯವಾದ ಜೀವವನ್ನು ರಕ್ಷಿಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳ್ಳೇದ ಹೇಳಿದರು.

ಗುರುವಾರದಂದು ಬೆಳಗಾವಿ ಜಿಲ್ಲಾ ಪೊಲೀಸ್ ಮತ್ತು ಗೋಕಾಕ ಉಪ ವಿಭಾಗದ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಹಮ್ಮಿಕೊಂಡ ವ್ಯಸನ ಮುಕ್ತ ಸಮಾಜಕ್ಕಾಗಿ ಡ್ರಗ್ಸ್ ವಿರುದ್ಧ ಹಾಗೂ ಹೆಲ್ಮೆಟ್ ಜಾಗೃತ ಜಾಥವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 2022ರಲ್ಲಿ ಒಟ್ಟು 780 ರಸ್ತೆ ಅಪಘಾತಗಳನ್ನು ಸಂಭವಿಸಿದ್ದು, ಅದರಲ್ಲಿ 300 ಅಪಘಾತಗಳು ದ್ವಿಚಕ್ರ ವಾಹನಗಳಿಂದ ಸಂಭವಿಸಿ ಚಾಲಕರು ಮೃತಪಟ್ಟಿದ್ದಾರೆ. ಮತ್ತು 2023 ರಲ್ಲಿ ಒಟ್ಟು 410 ದ್ವಿಚಕ್ರ ವಾಹನ ಸವಾರರು ರಸ್ತೆ ಅಪಘಾತದಲ್ಲಿ ಹೆಲ್ಮೆಟ್ ಇಲ್ಲದೆ ಸಾವನ್ನಪ್ಪಿರು ಘಟನೆಗಳು ವರದಿಯಾಗಿವೆ.
ಜೀವ ಕ್ಷುಲ್ಲಕ ಅಲ್ಲ ಅದು ಅತೀ ಅಮೂಲ್ಯವಾದದ್ದು, ಮೊಬೈಲಗೆ ಕವರ ಹಾಕುವವರು ,ತಲೆಗೂ ಕವರ (ಹೆಲ್ಮೆಟ್ ಹಾಕಿ ಜೀವ ರಕ್ಷಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ಒಂದು ತಿಂಗಳಿನಿಂದ ಹೆಲ್ಮೆಟ್ ಕುರಿತು ಜಾಗೃತಿ ಮೂಡಿಸುತ್ತಿದ್ದರು ಸಹ ವಾಹನ ಸವಾರರು ಜಾಗೃತಿ ಗೊಂಡಿಲ್ಲ . ವಾಹನ ಸವಾರರಿಗೆ ದಂಡ ಹಾಕಿ ಅವರನ್ನು ಹೆದರಿಸಬೇಕು ಎಂಬ ಉದ್ದೇಶ ಪೊಲೀಸರ ಇಲಾಖೆಯ ಹೊಂದಿಲ್ಲ ಬದಲಾಗಿ ಸಾರ್ವಜನಿಕ ಜಾಗೃತಿ ಮೂಡಿಸಿ ಅವರ ಜೀವ ಉಳಿಸುವ ಉದ್ದೇಶದಿಂದ ನಮ್ಮ ಇಲಾಖೆಯದ್ದು ಎಂದ ಅವರು ಗಡಿಯಲ್ಲಿ ಹೋರಾಡಿ ಹುತಾತ್ಮ ಆಗುವ ಯೋಧರಿಗಿಂತ ಹೆಚ್ಚಾಗಿ ರಸ್ತೆ ಅಪಘಾತಗಳಲ್ಲಿ ಜನರು ಜೀವ ಕಳೆದುಕೊಳ್ಳುತ್ತಿರುವುದು ಶೋಚನೀಯವಾಗಿದೆ. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಡ್ರಗ್ಸ್ ದಂತಹ ವ್ಯಸನಗಳಿಗೆ ಒಳಗಾಗದೆ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಮುಂದೆ ಬಂದು ತಂದೆ,ತಾಯಿಯ ಹೆಸರು ತರಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಪೊಲೀಸ ಇಲಾಖೆಯಿಂದ ನಗರದಲ್ಲಿ ಹಮ್ಮಿಕೊಂಡ ಹೆಲ್ಮೆಟ್ ಜಾಗೃತ ಜಾಥಕ್ಕೆ ಚಾಲನೆ ನೀಡಿದ ಎಸ್.ಪಿ.ಭೀಮಾಶಂಕರ ಗುಳ್ಳೇದ ಅವರು ಸ್ವತಃ ಹೆಲ್ಮೆಟ್ ಧರಿಸಿ ದ್ವಿಚಕ್ರ ಚಾಲಾಯಿಸಿ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಡಿ.ವಾಯ.ಎಸ್.ಪಿ .ಡಿ.ಎಚ್.ಮುಲ್ಲಾ, ಸಿಪಿಐ ಗೋಪಾಲ ರಾಠೋಡ, ಪಿಎಸ್ಐ ಕೆ.ವಾಲಿಕರ, ಡಾ.ರಮೇಶ ಪಟ್ಟಗುಂಡಿ, ಡಾ.ಅಶೋಕ ಪಾಟೀಲ, ಪರಿಸರ ಅಭಿಯಂತರ ಎಂ.ಎಚ್.ಗಜಾಕೋಶ ಉಪಸ್ಥಿತರಿದ್ದರು

Related posts: