RNI NO. KARKAN/2006/27779|Thursday, November 21, 2024
You are here: Home » breaking news » ಗೋಕಾಕ:ವಿದ್ಯಾರ್ಥಿಗಳು ಸಸತ ಪ್ರಯತ್ನದಿಂದ ಸಾಧಕರಾಗಲು ಸಾಧ್ಯ : ಡಾ‌.ಸಚಿನ ಗೊಂಧಳಿ

ಗೋಕಾಕ:ವಿದ್ಯಾರ್ಥಿಗಳು ಸಸತ ಪ್ರಯತ್ನದಿಂದ ಸಾಧಕರಾಗಲು ಸಾಧ್ಯ : ಡಾ‌.ಸಚಿನ ಗೊಂಧಳಿ 

ವಿದ್ಯಾರ್ಥಿಗಳು ಸಸತ ಪ್ರಯತ್ನದಿಂದ ಸಾಧಕರಾಗಲು ಸಾಧ್ಯ : ಡಾ‌.ಸಚಿನ ಗೊಂಧಳಿ
ಗೋಕಾಕ ಜ 10 : ವಿದ್ಯಾರ್ಥಿಗಳು ಸಸತ ಪ್ರಯತ್ನದಿಂದ ಸಾಧಕರಾಗಲು ಸಾಧ್ಯ ಎಂದು ಜಿಇಎಸ್ ಮಾರ್ಡನ ಆಂಗ್ಲ ಮಾಧ್ಯಮ ಶಾಲೆಯ ಹಳೆಯ ವಿದ್ಯಾರ್ಥಿ ಪಶುವೈದ್ಯ ಡಾ. ಸಚಿನ ಗೊಂದಳಿ ಹೇಳಿದರು.

ಬುಧವಾರದಂದು ನಗರದಲ್ಲಿ ಗೋಕಾಕ ಶಿಕ್ಷಣ ಸಂಸ್ಥೆಯ ಜಿಇಎಸ್ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಗಳ ವಾರ್ಷಿಕ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿ ಜೀವನ ಅತ್ಯಂತ ಮುಖ್ಯವಾದ ಘಟವಾಗಿದ್ದು, ಅದನ್ನು ವಿದ್ಯಾಭ್ಯಾಸ ಮಾಡುವ ಮೂಲಕ ಆಸ್ವಾದಿಸಿ ತಮ್ಮ ಪ್ರತಿಭೆಗಳನ್ನು ತೊರ್ಪಡಿಸಿ ಸಾಧಕರಾಗಬೇಕು. ಸಾಧನೆ ಯಾರ ಸ್ವತ್ತು ಅಲ್ಲ ಅದು ಸಾಧಕರ ಸ್ವತ್ತು.ಪ್ರತಿಯೊಬ್ಬ ಸಾಧಕ ವಿದ್ಯಾರ್ಥಿಯ ಹಿಂದೆ ಶಿಕ್ಷಕರ ಪಾತ್ರ ವಿದೆ. ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸುವ ಮನೋಭಾವ ಹೊಂದಿ ಚನ್ನಾಗಿ ಓದಿ ತಮ್ಮ ವಿದ್ಯಾರ್ಥಿ ಜೀವನವನ್ನು ಅವಿಸ್ಮರಣೀಯ ಗೋಳಿಸಿಕೊಂಡು ಶಾಲೆಗೆ ಮತ್ತು ಹೆತ್ತ ಪಾಲಕರಿಗೆ ಗೌರವ ತರಬೇಕು ಎಂದು ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಆರ್.ಎಂ‌. ವಾಲಿ ಸೋಲು ಗೆಲುವು ಮುಖ್ಯವಲ್ಲ ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ . ಇಂದು ಸೋತವರು ನಾಳೆ ಗೆಲ್ಲುವನ್ನು ಸಾಧಿಸಬಹುದು ಅದಕ್ಕಾಗಿ ನಿರಂತರ ಪ್ರಯತ್ನ ಬೇಕು. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ತಮಗೆ ಇಷ್ಟವಾದ ಕ್ರೀಡೆಯಲ್ಲಿ ಪಾಲ್ಗೊಂಡು ಸಾಧನೆ ಮಾಡಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಗೋಕಾಕ ಶಿಕ್ಷಣ ಸಂಸ್ಥೆಯ ಆಂಗ್ಲ ಮತ್ತು ಕನ್ನಡ ಶಾಲೆಯ ಎಲ್.ಕೆ.ಜಿ., ಯೂಕೆಜಿ ಹಾಗೂ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಕ್ರೀಡಾ ಸಾಧಕ ವಿದ್ಯಾರ್ಥಿ/ ವಿದ್ಯಾರ್ಥಿನೀಯರಿಗೆ ಪಾರಿತೋಶಕ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಮುಖ್ಯೋಪಾಧ್ಯಾಯರಾದ ಎಸ್.ಕೆ.ಮಠದ, ಶ್ರೀಮತಿ ಕೆ.ಎಚ್.ಮೇಟಿ , ಪತ್ರಕರ್ತ ಸಾದಿಕ ಹಲ್ಯಾಳ, ಶಫೀ ಚಟ್ನಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಕುಮಾರ್ ಓಂಕಾರ ಹುಣ್ಣಶ್ಯಾಳ,ನಿಧಿ ಅಬಂಲಿ ಉಪಸ್ಥಿತರಿದ್ದರು.

Related posts: