RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:1977 ರಿಂದ 2012ರ ವರೆಗೆ ನಡೆದ ಸರಣಿ ಕೊಲೆ,ಅತ್ಯಾಚಾರ, ಅನುಮಾನಾಸ್ಪದ ಸಾವುಗಳ ಬಗ್ಗೆ ತನಿಖೆ ನಡೆಸುವಂತೆ ರಾಜ್ಯಪಾಲರಿಗೆ ಅಹಿಂದ ಚೇತನ್ ಸಂಘಟನೆ ಮನವಿ

ಗೋಕಾಕ:1977 ರಿಂದ 2012ರ ವರೆಗೆ ನಡೆದ ಸರಣಿ ಕೊಲೆ,ಅತ್ಯಾಚಾರ, ಅನುಮಾನಾಸ್ಪದ ಸಾವುಗಳ ಬಗ್ಗೆ ತನಿಖೆ ನಡೆಸುವಂತೆ ರಾಜ್ಯಪಾಲರಿಗೆ ಅಹಿಂದ ಚೇತನ್ ಸಂಘಟನೆ ಮನವಿ 

1977 ರಿಂದ 2012ರ ವರೆಗೆ ನಡೆದ ಸರಣಿ ಕೊಲೆ,ಅತ್ಯಾಚಾರ, ಅನುಮಾನಾಸ್ಪದ ಸಾವುಗಳ ಬಗ್ಗೆ ತನಿಖೆ ನಡೆಸುವಂತೆ ರಾಜ್ಯಪಾಲರಿಗೆ ಅಹಿಂದ ಚೇತನ್ ಸಂಘಟನೆ ಮನವಿ
ಗೋಕಾಕ ಜ 13 : ಧರ್ಮಸ್ಥಳ ಹಾಗೂ ಸುತ್ತಲಿನ ಗ್ರಾಮಗಳಲ್ಲಿ 1977 ರಿಂದ 2012ರ ವರೆಗೆ ನಡೆದ ಸರಣಿ ಕೊಲೆ,ಅತ್ಯಾಚಾರ, ಅನುಮಾನಾಸ್ಪದ ಸಾವುಗಳ ಕುರಿತು ರಾಜ್ಯಸರ್ಕಾರದ ಗೃಹ ಇಲಾಖೆ ವಿಶೇಷ ತನಿಖಾ ತಂಡ ರಚಿಸಿ ತಪ್ಪಿತಸ್ಥರನ್ನು ಶಿಕ್ಷಿಸುವಂತೆ ಆಗ್ರಹಿಸಿ ಅಹಿಂದ ಚೇತನ ಸಂಘಟನೆ ವತಿಯಿಂದ ರಾಜ್ಯಪಾಲರಿಗೆ ಮನವಿ ಕಳುಹಿಸಲಾಗಿದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ವಿನಾಯಕ ಕಟ್ಟಿಕರ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆದ ಕೊಲೆಗಳು
ಅತ್ಯಾಚಾರ ಅನುಮಾನಾಸ್ಪದ ಸಾವುಗಳು ಸಂಭವಿಸಿದ್ದು, ಹಲವಾರು ಪ್ರಕರಣಗಳಲ್ಲಿ ಅಪರಾಧಿ ಪತ್ತೆಯಾಗದ “ಸಿ”ರಿಪೋರ್ಟ್
ಗಳು ಸಲ್ಲಿಕೆಯಾಗಿರುತ್ತವೆ. ಅಪ್ರಾಪ್ತ ಬಾಲಕಿ ವಿದ್ಯಾರ್ಥಿನಿ ಕುಮಾರಿ ಸೌಜನ್ಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದು ಸಿಬಿಐ ಕೋರ್ಟ್ ಆರೋಪಿ ಸಂತೋಷ್‌ರಾವ್ ನಿರಪರಾಧಿಯೆಂದು ತೀರ್ಪು ನೀಡಿರುತ್ತದೆ. ಅಮೂಲ್ಯ ಸಾಕ್ಷಿಗಳನ್ನು ಸಂಗ್ರಹಿಸುವಲ್ಲಿ ತನಿಖಾಧಿಕಾರಿಗಳು ಮತು ವೈದ್ಯಾಧಿಕಾರಿಯ ನಿರ್ಲಕ್ಷತನದ ಬಗ್ಗೆಯೂ ಉಲ್ಲೇಖವಾಗಿರುತ್ತದೆ.ಸಂತೋಷ್‌ರಾವ್ ನಿರಪರಾಧಿ ಎಂದಾದರೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿರುವವರು ಯಾರು ಎಂಬ ಪ್ರಶ್ನೆಗಳಿಗೆ ಇದುವರೆವಿಗೂ ಉತ್ತರ ಸಿಕ್ಕಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟವನ್ನು ಹತ್ತಿಕ್ಕುವ ಷಡ್ಯಂತ್ರಗಳು ನಡೆಯುತ್ತಿದ್ದು, ಇತ್ತೀಚಿಗೆ ಮಾಜಿ ಪೊಲೀಸ್ ಅಧಿಕಾರಿ
ಗಿರೀಶ್ ಮಟ್ಟಣ್ಣನವರ ಮೇಲೆ ಹಲ್ಲೆಗೆ ಯತ್ನಿಸಿ, ಸಾರ್ವಜನಿಕವಾಗಿ ಬೆದರಿಕೆ ಹಾಕಿರುವ ಬಗ್ಗೆಯೂ ವರದಿಯಾಗುತ್ತಿವೆ. ರಾಜ್ಯದಲ್ಲಿ ಸಾಮೂಹಿಕ ಅತ್ಯಾಚಾರಗಳು, ಕೊಲೆಗಳು ಹೆಚ್ಚುತ್ತಿದ್ದು, ಇಂತಹ ಪ್ರಕರಣಗಳಲ್ಲಿ ತನಿಖಾಧಿಕಾರಿಗಳ ನಿರ್ಲಕ್ಷ್ಯತನಗಳು
ಕಾಣುತ್ತಿದ್ದು, ಈ ದೇಶದ ಸಂವಿಧಾನದ ಮೇಲೆ ನಂಬಿಕೆಯಿಟ್ಟು ರಾಜ್ಯದ ರಾಜ್ಯಪಾಲರಾದ ತಮ್ಮಲ್ಲಿ ಮನವಿ ಮಾಡಿ
ಅತ್ಯಾಚಾರಗಳು, ಕೊಲೆಗಳು ಮತ್ತು ಹೋರಾಟಗಾರರು ಬಹಿರಂಗವಾಗಿ ಮಾಡುತ್ತಿರುವ ಆರೋಪಗಳ ಬಗ್ಗೆ ಸೂಕ್ತ ತನಿಖೆ
ನಡೆಸಬೇಕಾಗಿ ಅಹಿಂದ ಚೇತನ ಸಂಘಟನೆಯ ಪದಾಧಿಕಾರಿಗಳು ಮನವಿಯಲ್ಲಿ ವಿನಂತಿಸಿಕೊಂಡಿದ್ಜಾರೆ.

Related posts: