ಗೋಕಾಕ:ಪಠ್ಯದಷ್ಟೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ : ಆರ್.ಎಫ್.ಓ ಸಂಜೀವ
ಪಠ್ಯದಷ್ಟೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ : ಆರ್.ಎಫ್.ಓ ಸಂಜೀವ
ಗೋಕಾಕ ಜ 21 : ಪಠ್ಯದಷ್ಟೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಇಲ್ಲಿನ ವಲಯ ಅರಣ್ಯ ಅಧಿಕಾರಿ ಸಂಜೀವ ಸಂಸುದ್ದಿ ಹೇಳಿದರು.
ರವಿವಾರದಂದು ನಗರದ ಕೆಎಲ್ಇ ಸಿ.ಎಸ್.ಅಂಗಡಿ ಪ್ರೌಢಶಾಲೆಯ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡುತ್ತಾ ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ ಕ್ರೀಡೆಗಳಿಂದ ಉತ್ತಮ ಆರೋಗ್ಯವಂತರಾಗಿ ಸಾಧಕರಾಗಲು ಸಾಧ್ಯ ವಿದ್ಯಾರ್ಥಿಗಳು ಅಧ್ಯಯನದೊಂದಿಗೆ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಿ . ಇಂದು ಕ್ರೀಡಾಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ಇದೆ.ಅದರ ಸದುಪಯೋಗದಿಂದ ಹೆಚ್ಚು ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿ ಸಂಸ್ಥೆಗೆ ,ನಾಡಿಗೆ ಕೀರ್ತಿ ತನ್ನಿರೆಂದು ಹಾರೈಸಿದರು.
ವೇದಿಕೆಯಲ್ಲಿ ಶಾಲಾ ಸಮಿತಿಯ ಅಧ್ಯಕ್ಷ ಎಂ.ಡಿ.ಚುನಮರಿ, ಸದಸ್ಯ ಓಂಪ್ರಕಾಶ್ ಅಂಗಡಿ, ಆಡಳಿತಾಧಿಕಾರಿ ಜೆ.ಎಂ ಅಂದಾನಿ, ಪ್ರಾಚಾರ್ಯರಾದ ಕೆ.ಬಿ.ಮೆವುಂಡಿಮಠ, ಪ್ರಶಾಂತ್ ಕಿವಟಿ, ವಿನೋದ ವಾಲಿ, ಮುಖ್ಯೋಪಾಧ್ಯಾಯ ಜಿ.ಎಂ.ಬಿರಾದಾರ, ಶಿಕ್ಷಕಿ ಎಸ್.ಎ.ಐಹೋಳೆ ಇದ್ದರು.